More

    ನಿರಂತರ ಪರಿಶ್ರಮದಿಂದ ಉಜ್ವಲ ಜೀವನ

    ಭಾಲ್ಕಿ: ವಿದ್ಯಾರ್ಥಿಗಳು ನಿರಂತರ ಪ್ರಯತ್ನ, ಪರಿಶ್ರಮ ಮೈಗೂಡಿಸಿಕೊಂಡು ಜೀವನ ಉಜಲ್ವಗೊಳಿಸಿಕೊಳ್ಳಬೇಕು ಎಂದು ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಸವರಾಜ ಮೊಳಕೀರೆ ಹೇಳಿದರು.

    ಪಟ್ಟಣದ ಖಡಕೇಶ್ವರ ಪ್ರೌಢ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಅಂತರ ಶಾಲಾ ಮಟ್ಟದ ಕ್ವಿಜ್ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಓದು ತಪ್ಪಸ್ಸು ಇದ್ದಂತೆ, ಶ್ರದ್ಧೆ, ಭಕ್ತಿ, ತನ್ಮಯತೆಯಿಂದ ಅಧ್ಯಯನ ಮಾಡಿದವರು ಮಾತ್ರ ಜೀವನದಲ್ಲಿ ಉನ್ನತ ಸ್ಥಾನಕ್ಕೇರಿಲು ಸಾಧ್ಯವಾಗುತ್ತದೆ ಎಂದರು.
    ಸಂಸ್ಥೆಯ ಕೋಶಾಧ್ಯಕ್ಷ ಪ್ರಭುರಾವ ಧೂಪೆ ಅಧ್ಯಕ್ಷತೆ ವಹಿಸಿದ್ದರು.

    ನುಚ್ಚಾ ಟೆಕ್ನಾಲಜಿ ಪ್ರೊಜೆಕ್ಟ್​ನ ಸಿಇಒ ನಿತೀಶ ನುಚ್ಚಾ, ಶಿವಲಿಂಗ ಕುಂಬಾರ, ರೇಕು ನಾಯಕ, ಅಂಜಲಿ ಜೋಶಿ, ಗೌರಮ್ಮ ಮಜಗೆ, ದಿಲೀಪ ಘಂಟೆ, ಪ್ರಕಾಶ ರುದನೂರೆ ಇದ್ದರು. ಮುಖ್ಯಗುರು ಆನಂದ ಕಲ್ಯಾಣೆ ಸ್ವಾಗತಿಸಿದರು. ಉದಯ ಜೋಶಿ ನಿರೂಪಣೆ ಮಾಡಿದರು. ಜಯಪ್ರಕಾಶ ಸಹಾನೆ ವಂದಿಸಿದರು.

    ಸನ್ಮಾನ : ಸಾವಿತ್ರಿಬಾಯಿ ಫುಲೆ ಮಹಿಳಾ ನೌಕರರ ಸಂಘದಿಂದ ಕೊಡಮಾಡುವ ತಾಲೂಕು ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾದ ಖಡಕೇಶ್ವರ ಶಾಲೆಯ ಸಹ ಶಿಕ್ಷಕಿ ಅಂಜಲಿ ಜೋಶಿ ಅವರನ್ನು ಸನ್ಮಾನಿಸಲಾಯಿತು.

    ಆರು ಶಾಲೆ ಮಕ್ಕಳು : ಎಸ್ಸೆಸ್ಸೆಲ್ಸಿ ಪಠ್ಯಾಧಾರಿತ ಕ್ವಿಜ್ ಸ್ಪರ್ಧೆಯಲ್ಲಿ ಖಡಕೇಶ್ವರ ಶಾಲೆ ಸೇರಿ ಭಾಲ್ಕೇಶ್ವರ ಪ್ರೌಢ ಶಾಲೆ, ಸದ್ಗುರು ಪ್ರೌಢ ಶಾಲೆ, ಭಾತಂಬ್ರಾದ ಶಿವಯೋಗಿಶ್ವರ ಪ್ರೌಢ ಶಾಲೆ, ಜಗಜ್ಯೋತಿ ಬಸವೇಶ್ವರ ಪ್ರೌಢ ಶಾಲೆ ಮತ್ತು ನಿರ್ಮಲಾ ಹಲ್ಮಂಡಗೆ ಪ್ರೌಢ ಶಾಲೆಯ ಮಕ್ಕಳು ಭಾಗಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts