More

    ಬಿಎಸ್‌ವೈ ಜನ್ಮದಿನ ನಿಮಿತ್ತ ರಸಪ್ರಶ್ನೆ ಕಾರ್ಯಕ್ರಮ

    ಶಿಕಾರಿಪುರ: ಮಕ್ಕಳಲ್ಲಿ ದೈವದತ್ತವಾಗಿ ಬಂದಿರುವ ಪ್ರತಿಭೆಗೆ ನಾವು ಸೂಕ್ತ ವೇದಿಕೆ ನಿರ್ಮಿಸಿ, ಅನಾವರಣಗೊಳಿಸಬೇಕು. ಪ್ರತಿಭೆಯನ್ನು ಉಪೇಕ್ಷೆ ಮಾಡಬಾರದು ಎಂದು ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಕೋಟೋಜಿ ರಾವ್ ತಿಳಿಸಿದರು.

    ಪಟ್ಟಣದ ಮೈತ್ರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶುಕ್ರವಾರ ರಾಷ್ಟ್ರೀಯ ವಿಜ್ಞಾನ ದಿನ ಮತ್ತು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಆದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನದ ಅಂಗವಾಗಿ ತಾಲೂಕು ಮಟ್ಟದ ರಸಪ್ರಶ್ನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
    ಮಕ್ಕಳ ಅಭಿರುಚಿಗೆ ತಕ್ಕಂತೆ ನಾವು ಅವರನ್ನು ಬೆಳೆಸಬೇಕು ಮತ್ತು ಶಿಕ್ಷಣ ನೀಡಬೇಕು. ಶಿಕ್ಷಣ ಕೇವಲ ಅಂಕ ಗಳಿಕೆಗೆ ಸೀಮಿತವಾಗಿರಬಾರದು. ಇಂದಿನ ಮಕ್ಕಳು ಕೇವಲ ಪುಸ್ತಕಗಳ ವಾಚನ ಮಾಡಿದರೆ ಸಾಲದು. ಅದರ ಜತೆ ಜತೆಗೆ ಆಟ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಪ್ರತಿಯೊಂದು ಮಗುವಿನಲ್ಲೂ ವಿಜ್ಞಾನದ ಅರಿವು ಇದ್ದೆ ಇರುತ್ತದೆ. ಅದಕ್ಕೆ ವೇದಿಕೆ ನಿರ್ಮಿಸಿಕೊಡಬೇಕು ಎಂದರು.
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ಧ ಮೈತ್ರಿ ಪ್ರಾಥಮಿಕ ಮತ್ತು ಕುಮದ್ವತಿ ಪ್ರೌಢಶಾಲೆಯ ಪ್ರಾಚಾರ್ಯ ಪಿ.ವಿಶ್ವನಾಥ ಮಾತನಾಡಿ, ವಿಜ್ಞಾನದ ಹೊಸ ಹೊಸ ಆವಿಷ್ಕಾರಗಳನ್ನು ತರಗತಿಯಲ್ಲಿ ಹೆಚ್ಚೆಚ್ಚು ಮಾಡಬೇಕು. ಆಗ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಮೇಲೆ ಹೆಚ್ಚಿನ ಆಸಕ್ತಿ ಹೆಚ್ಚಾಗುತ್ತಾ ಸಾಗುತ್ತದೆ. ಒಂದೊಂದೆ ಮೆಟ್ಟಿಲನ್ನು ಏರುತ್ತಾ ಸಾಗುತ್ತಾರೆ ಎಂದು ಹೇಳಿದರು.
    ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಅಭಿಲಾಷ್, ಮೈತ್ರಿ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಪ್ರಶಾಂತ ಕುಬಸದ ರಸಪ್ರಶ್ನೆ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts