More

    ಸೌತೆಕಾಯಿ ತಿನ್ನಲಿಕ್ಕಷ್ಟೆ ರುಚಿಯಲ್ಲ, ಸಾಮಾನ್ಯ ಸಮಸ್ಯೆಯಿಂದ ಹಿಡಿದು ಗಂಭೀರ ರೋಗಗಳಿಗೂ ಇದು ರಾಮಬಾಣ..!

    ಬೇಸಿಗೆಯಲ್ಲಿ ಸೌತೆಕಾಯಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಲಾಗುತ್ತದೆ. ಸೌತೆಕಾಯಿ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಆದರೆ ಕೆಲವು ತಜ್ಞರ ಪ್ರಕಾರ, ಸೌತೆಕಾಯಿಯನ್ನು ತಿನ್ನುವುದರಿಂದ ಕೆಲವು ಹಾನಿ ಉಂಟಾಗುತ್ತದೆ. ಕೆಲ ಆರೋಗ್ಯ ಸಮಸ್ಯೆಗಳಿಗೆ ಈ ಸೌತೆಕಾಯಿ ಕಾರಣ ಎನ್ನುತ್ತಾರೆ ವೈದ್ಯರು. ಹಾಗಾದ್ರೆ ಈ ಸೌತೆಕಾಯಿಯ ಪ್ರಯೋಜನಗಳು ಹಾಗೂ ಅಡ್ಡ ಪರಿಣಾಮಗಳೇನು ಎಂಬುದು ಇಲ್ಲಿದೆ.


    ಬೇಸಿಗೆ ಇನ್ನೇನು ಹತ್ತಿರವಾಗುತ್ತಿದೆ. ಈ ಸಂದರ್ಭದಲ್ಲಿ ಸೌತೆಕಾಯಿಯ ಪ್ರಯೋಜನಗಳನ್ನು ಹೆಚ್ಚು ಬಳಸಿಕೊಳ್ಳಲು ಇದು ಸರಿಯಾದ ಸಮಯ. ಇನ್ನು, ಬೇಸಿಗೆ ಕಾಲದಲ್ಲಿ ಬರುವ ಸಮಸ್ಯೆಗಳಿಂದ ನಿವಾರಿಸಲು ಹಾಗೂ ಸೌತೆಕಾಯಿಯಿಂದ ದೊರೆಯುವ 5 ಆರೋಗ್ಯ ಪ್ರಯೋಜನಗಳು ಯಾವುವು ಎಂದರೆ
    ವಿವಿಧ ಪೌಷ್ಠಿಕಾಂಶಗಳು ಹೇರಳವಾಗಿವೆ


    ಸೌತೆಕಾಯಿಯಲ್ಲಿ ಪೌಷ್ಠಿಕಾಂಶಗಳು ದಟ್ಟವಾಗಿರುತ್ತವೆ. ಅಲ್ಲದೆ, ಫೈಬರ್, ಪೊಟ್ಯಾಷಿಯಂ ಹಾಗೂ ಮೆಗ್ನೀಷಿಯಂ ಕೂಡ ಹೆಚ್ಚಾಗಿರುತ್ತದೆ. ಈ ಎಲ್ಲ ಪೌಷ್ಠಿಕಾಂಶಗಳು ರಕ್ತದೊತ್ತಡ ಕಡಿಮೆ ಮಾಡಲಷ್ಟೇ ಅಲ್ಲ ಮೂತ್ರವರ್ಧಕ ಗುಣಲಕ್ಷಣಗಳನ್ನು ಹೊಂದಿದೆ. ಜತೆಗೆ, ಪೊಟ್ಯಾಷಿಯಂ ಹಾಗೂ ನೀರಿನಂಶ

    ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.
    ಕಣ್ಣುಗಳ ಸುತ್ತಲಿನ ಡಾರ್ಕ್ ಸರ್ಕಲ್ಸ್ ಹಾಗೂ ಪಫ್ಫಿನೆಸ್ ನಿವಾರಣೆಗೆ ಪರಿಹಾರ


    ಕಪ್ಪು ಕಲೆ ನಿವಾರಿಸಲು ಹಾಗೂ ಕಣ್ಣುಗಳ ಬಳಿಯ ಪಫ್ಫಿನೆಸ್ ಕಡಿಮೆ ಮಾಡಲು ಸೌತೆಕಾಯಿಯ ರಸವನ್ನು ಕಣ್ಣು ಸುತ್ತ ಹಚ್ಚಿಕೊಳ್ಳಿ. ಇನ್ನು, ಪರಿಪೂರ್ಣ ನೈಸರ್ಗಿಕ ಸೌಂದರ್ಯ ಚಿಕಿತ್ಸೆಗಾಗಿ ಸೌತೆಕಾಯಿ ಉತ್ತಮ.


    ಸೌತೆಕಾಯಿಯಲ್ಲಿ ಫೈಬರ್ ಕೂಡ ಸಮೃದ್ಧವಾಗಿದೆ. ಫೈಬರ್​ಗಳು ಮಲಬದ್ಧತೆಯನ್ನು ತಡೆಯಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.


    ಸೌತೆಕಾಯಿಯು ಬೀಟಾ-ಕ್ಯಾರೋಟಿನ್‌ನಂತಹ ಆ್ಯಂಟಿ ಆಕ್ಸಿಡೆಂಟ್​ಗಳಲ್ಲಿ ಸಮೃದ್ಧವಾಗಿದೆ. ಅವು ದೇಹದಲ್ಲಿ ಸ್ವತಂತ್ರ ರಾಡಿಕಲ್​ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.


    ಸೌತೆಕಾಯಿಯಲ್ಲಿರುವ ವಿಟಮಿನ್-ಕೆ ರಕ್ತ ಹೆಪ್ಪುಗಟ್ಟುವಿಕೆಗೆ ಸಹಾಯ ಮಾಡುತ್ತದೆ ಮತ್ತು ಮೂಳೆಗಳನ್ನು ಬಲವಾಗಿ ಮತ್ತು ಆರೋಗ್ಯಕರವಾಗಿರಿಸುತ್ತದೆ.
    ಅತಿಯಾದ ವಿಟಮಿನ್-ಸಿ ಕೂಡ ಹಾನಿಕಾರಕ. ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸೌತೆಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಆದ್ದರಿಂದ, ನೀವು ಸೌತೆಕಾಯಿಯನ್ನು ಅಗತ್ಯಕ್ಕಿಂತ ಹೆಚ್ಚು ಸೇವಿಸಿದರೆ, ಅದು ಹಾನಿಕಾರಕವಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts