More

    ಸಿಲಿಕಾನ್​ಸಿಟಿಯಲ್ಲಿ ನೀರಿಗೆ ಹಾಹಾಕಾರ? ಮುಂದಿನ ದಿನಗಳಲ್ಲಿ ಜನರಿಗೆ ಮತ್ತಷ್ಟು ಸಂಕಷ್ಟ ಸಾಧ್ಯತೆ

    ಬೆಂಗಳೂರು: ಬೇಸಿಗೆ ಆರಂಭವಾದ ಬೆನ್ನಲ್ಲೇ ಸಿಲಿಕಾನ್ ಸಿಟಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿಧಾನವಾಗಿ ಬಿಗಾಡಾಯಿಸುತ್ತಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗುತ್ತಿದೆ. ಈ ಬಾರಿ ನಗರದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದರೂ 644 ಕೊಳವೆಬಾವಿಗಳು ಬತ್ತಿ ಹೋಗಿವೆ. ಬರುವ ದಿನಗಳಲ್ಲಿ ಇನ್ನಷ್ಟು ಬೋರ್​ವೆಲ್​ಗಳು ಬತ್ತಿ ಹೋಗುವ ಆತಂಕವಿದೆ. ಹಾಗಾಗಿ, ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಿಸುತ್ತಿದೆ.

    ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯಾಪ್ತಿಯಲ್ಲಿ 10,500 ಕೊಳವೆ ಬಾವಿಗಳಿವೆ. ಕಾವೇರಿ ನೀರು ಸರಬರಾಜುವಾಗುವ ಕೊಳವೆ ಬಾವಿಗಳು ನಗರದ ಜನತೆಯ ದಾಹ ತಣಿಸುತ್ತಿವೆ. ನೂರು ಕಿ.ಮೀ. ದೂರದಿಂದ ಬರುತ್ತಿರುವ ಕಾವೇರಿ ನೀರಿನಿಂದಲೇ ರಾಜಧಾನಿಯ ಒಂದೂವರೆ ಕೋಟಿ ಜನರ ಜಲ ದಾಹ ತೀರಬೇಕಿದೆ. ಆದರೆ, ಬರುವ ದಿನಗಳಲ್ಲಿ ತಾಪಮಾನ ಏರಿಯಾಗುವ ಹಿನ್ನೆಲೆಯಲ್ಲಿ ಕೆಲ ಬಡಾವಣೆಗಳಲ್ಲಿ ಇನ್ನಷ್ಟು ಕá-ಡಿಯುವ ನೀರಿಗೆ ಸಂಕಷ್ಟ ಎದá-ರಾಗುವ ಸಾಧ್ಯತೆ ಇದೆ.

    ಜಲಮಂಡಳಿ 7,500 ಕೊಳವೆಬಾವಿ ನಿರ್ವಹಣೆ ಮಾಡುತ್ತಿತ್ತು. ಆದರೆ, ಇತ್ತೀಚಿಗಷ್ಟೇ ಬಿಬಿಎಂಪಿ 2,486 ಬೋರ್​ವೆಲ್​ಗಳನ್ನು ಜಲಮಂಡಳಿಗೆ ಹಸ್ತಾಂತರಿಸಿದೆ. ಹಾಗಾಗಿ, ಒಟ್ಟಾರೆ 10,500 ಬೋರ್​ವೆಲ್​ಗಳನ್ನು ಜಲಮಂಡಳಿ ನಿರ್ವಹಣೆ ಮಾಡುತ್ತಿದೆ. ಬೋರ್​ವೆಲ್​ಗಳು ಕಾವೇರಿ ನೀರು ಪೂರೈಸುತ್ತಿವೆ. ನಾಲ್ಕೈದು ದಿನಗಳಿಂದ ಕೆ.ಆರ್. ಪುರ ಸೇರಿ ನಗರ ಇತರ ಬಡಾವಣೆಗಳು ಹಾಗೂ ಕೊಳೆಗೇರಿಯಲ್ಲಿ ನೀರು ಪೂರೈಕೆ ಸ್ಥಗಿತವಾಗಿದೆ. ಕಾಮಾಕ್ಷಿಪಾಳ್ಯ, ಸುಂಕದಕಟ್ಟೆ, ವೃಷಭಾವತಿನಗರ, ಕೆ.ಆರ್.ಪುರ, ಟಿನ್ ಫ್ಯಾಕ್ಟರಿ ಸೇರಿ ಕೆಲ ಕೊಳೆಗೇರಿ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಬೇಡಿಕೆ ಇದೆ. ಕೆಲ ನಿವಾಸಿಗಳು ಬಾಡಿಗೆ ಟ್ಯಾಂಕರ್ ಹಾಗೂ 300 ರೂ.ಗೆ ಎತ್ತಿನ ಗಾಡಿಯ ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುತ್ತಿದ್ದಾರೆ. ಖಾಸಗಿಯವರು ದುಬಾರಿ ಬೆಲೆಗೆ ಟ್ಯಾಂಕರ್ ಲೆಕ್ಕದಲ್ಲಿ ನೀರು ಪೂರೈಕೆ ಮಾಡುತ್ತಿದ್ದಾರೆ. ಮಿನಿ ಲಾರಿ ಅಥವಾ ಟ್ರ್ಯಾಕ್ಟರ್​​ನಲ್ಲಿ ಬರುವ ಟ್ಯಾಂಕರ್​ಗಳಿಗೆ ನಿವಾಸಿಗಳು ಅಧಿಕ ದರ ಪಾವತಿಸುತ್ತಿದ್ದಾರೆ.

    ಸಿಲಿಕಾನ್ ಸಿಟಿಯಲ್ಲಿ ಬಿಸಿಲಿನ ಝುಳ ನಿಧಾನವಾಗಿ ಏರತೊಡಗಿದೆ. ನವೆಂಬರ್​ನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಈ ವರ್ಷ ಚಳಿಗಾಲದ ಅವಧಿ ಇಳಿಮುಖವಾಗಿದ್ದು, ವಾಡಿಕೆಗಿಂತ ಮುನ್ನವೇ ಬೇಸಿಗೆ ಆರಂಭವಾಗಿದೆ. ಸಾಮಾನ್ಯವಾಗಿ ಮೂರು ತಿಂಗಳು ಇರುತ್ತಿದ್ದ ಬೇಸಿಗೆ ಈ ವರ್ಷ 4 ತಿಂಗಳು ಇರಲಿದೆ. ಕಳೆದ ವರ್ಷವೂ ಇದೇ ಪರಿಸ್ಥಿತಿ ನಿರ್ವಣವಾಗಿತ್ತು. ಸಾಮಾನ್ಯವಾಗಿ ಮಾರ್ಚ್ ಬಳಿಕ ಬಿಸಿಲು ಬೇಗೆ ಹೆಚ್ಚಾಗುತ್ತಿತ್ತು. ಆದರೆ, ಈ ಬಾರಿ ಫೆಬ್ರವರಿ 2ನೇ ವಾರದಿಂದಲೇ ಸುಡು ಬಿಸಿಲು ಕಾಣಿಸಿಕೊಳ್ಳುತ್ತಿದ್ದು, ಜೂ.15ರವರೆಗೆ ಇರಲಿದೆ. ಏಪ್ರಿಲ್ ಅಥವಾ 3ನೇ ವಾರದಲ್ಲಿ ಹೆಚ್ಚಾಗುತ್ತಿದ್ದ ಉಷ್ಣಾಂಶ ಮಾರ್ಚ್ 3ನೇ ವಾರದಲ್ಲಿ ಅಧಿಕವಾಗಲಿದೆ. ಹಾಗಾಗಿ, ಇನ್ನಷ್ಟು ಕೊಳವೆ ಬಾವಿಗಳು ಬತ್ತಿಹೋಗುವ ಆತಂಕ ಕಾಡುತ್ತಿದೆ. ಬಿಬಿಎಂಪಿ ಮತ್ತು ಜಲಮಂಡಳಿ ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದರೆ ಕುಡಿಯುವ ನೀರಿಗಾಗಿ ಜನರು ಪರಿತಪಿಸುವಂತಾಗಲಿದೆ.

    10,500 ಬೋರ್​ವೆಲ್ ನಿರ್ವಹಣೆ
    ಜಲಮಂಡಳಿಯು 10,500 ಸಾವಿರ ಕೊಳವೆ ಬಾವಿಗಳ ನಿರ್ವಹಣೆ ಮಾಡುತ್ತಿದ್ದು, ಇದಕ್ಕಾಗಿ ಪ್ರತಿ ತಿಂಗಳು 2.8 ಕೋಟಿ ರೂ. ವ್ಯಯಿಸುತ್ತಿದೆ. ವಾರ್ಷಿಕ 33.6 ಕೋಟಿ ರೂ.ನಿಂದ 35 ಕೋಟಿ ರೂ.ವರೆಗೆ ನಿರ್ವಹಣಾ ವೆಚ್ಚ ತಗಲುತ್ತಿದೆ. ವರ್ಷಕ್ಕೆ 35ರಿಂದ 36 ಕೋಟಿ ರೂ.ವರೆಗೆ ವಿದ್ಯುತ್ ಶುಲ್ಕ ಬರುತ್ತದೆ. ಒಟ್ಟಾರೆಯಾಗಿ ಕೊಳವೆಬಾವಿಗಳ ನಿರ್ವಹಣೆ ಮತ್ತು ವಿದ್ಯುತ್ ಬಿಲ್​ನಿಂದ ವರ್ಷಕ್ಕೆ 70 ಕೋಟಿ ರೂ.ಗಳನ್ನು ಜಲಮಂಡಳಿ ಖರ್ಚು ಮಾಡುತ್ತಿದೆ. ಜಲಮಂಡಳಿ 6ರಿಂದ 8 ಸಾವಿರ ಲೀಟರ್ ಸಾಮರ್ಥ್ಯವುಳ್ಳ 65 ಟ್ಯಾಂಕರ್​ಗಳನ್ನು ಹೊಂದಿದೆ. ನೀರಿನ ಅಭಾವ ಸೃಷ್ಟಿಯಾದರೆ ಇನ್ನಷ್ಟು ಟ್ಯಾಂಕರ್​ಗಳಿದ್ದರೂ ಸಾಲುವುದಿಲ್ಲ. ನೀರಿನ ಅಭಾವ ಎದುರಾದರೆ ಜನರನ್ನು ದೇವರೇ ಕಾಪಾಡಬೇಕಿದೆ.

    ಕೆರೆ ನೀರು ಬಳಕೆಗೆ ಯೋಗ್ಯವಲ್ಲ
    ಉದ್ಯಾನಗರದಲ್ಲಿ ಒಂದು ಕಾಲದಲ್ಲಂತೂ ಸಾವಿರ ಕೆರೆಗಳ ನಾಡು ಎಂಬ ಹೆಸರಿತ್ತು. ಆಗ ಕೆರೆಗಳು ಜನರ ಜೀವಸೆಲೆಯಾಗಿದ್ದವು. ಆದರೆ, ಇಂದು ಮೀತಿ ಮೀರಿದ ನಗರೀಕರಣದ ಪ್ರಭಾವದಿಂದ ಕೆರೆಗಳು ಕಲುಷಿತಗೊಂಡು ದುರ್ನಾತ ಬೀರುತ್ತಿವೆ. ಸರ್ಕಾರಗಳೇ ಒಂದಷ್ಟು ಕೆರೆಗಳನ್ನು ಸಮತಟ್ಟುಗೊಳಿಸಿ ಬಡಾವಣೆ, ಮೈದಾನ, ನಿಲ್ದಾಣಗಳನ್ನು ಕಟ್ಟಿದೆ. ಕೆಲ ಕೆರೆಗಳ ಜಾಗದಲ್ಲಿ ಬಹುಮಹಡಿ ಕಟ್ಟಡಗಳು ಎದ್ದು ನಿಂತಿವೆ. ಇದರಿಂದಾಗಿ ಕೆರೆ ನೀರು ಬಳಕೆಗೆ ಲಭ್ಯವಿಲ್ಲದಂತಾಗಿದೆ. 2012ರವರೆಗೂ ಟಿ.ಜಿ.ಹಳ್ಳಿ ಜಲಾಶಯದಿಂದ ನಗರಕ್ಕೆ ನೀರು ಪೂರೈಕೆಯಾಗುತ್ತಿತ್ತು. ಅಲ್ಲಿನ ನೀರು ಕಲುಷಿತಗೊಂಡು ಬಳಕೆಗೆ ಯೋಗ್ಯವಿಲ್ಲದಂತಾಗಿದೆ. ಕಾವೇರಿ ನದಿ ಮೂಲದಿಂದಲೂ ಸಾಕಷ್ಟು ನೀರು ಸಿಗದೆ ಪರಿಣಾಮ ನೀರಿನ ಸಮಸ್ಯೆ ಹೆಚ್ಚಳವಾಗುವಂತಾಗಿದೆ.

    4 ಲಕ್ಷ ಕೊಳವೆಬಾವಿ
    ಅಂಕಿ-ಅಂಶಗಳ ನಗರದಲ್ಲಿ ಪ್ರಕಾರ 3.28 ಲಕ್ಷ ಖಾಸಗಿ ಬೋರ್​ವೆಲ್​ಗಳಿವೆ. ಜಲಮಂಡಳಿಯು 10 ಸಾವಿರಕ್ಕೂ ಹೆಚ್ಚು ಬೋರ್​ವೆಲ್​ಗಳ ನಿರ್ವಹಣೆಯ ಜವಾಬ್ದಾರಿ ಹೊತ್ತಿದೆ. ಇದರಲ್ಲಿ ಕೆಲವು ಬತ್ತಿ ಹೋಗಿವೆ. ಖಾಸಗಿ ಕೊಳವೆಬಾವಿ ಮಾಲೀಕರು ಅಂತರ್ಜಲವನ್ನು ಬಗೆದು ಬಿಕರಿ ಮಾಡುತ್ತಿದ್ದಾರೆ. ಬೇಸಿಗೆಯಲ್ಲಿ ರಾತ್ರಿ ಕಳೆದು ಬೆಳಗಾಗುವ ವೇಳೆಗೆ ಕನಿಷ್ಠ 20 ಬೋರ್​ವೆಲ್ ಕೊರೆಯಲಾಗುತ್ತಿದೆ. ಇದರಿಂದ ಅಂತರ್ಜಲ ಕುಸಿತಗೊಂಡಿದ್ದು, ಕೊಳವೆಬಾವಿಗಳಲ್ಲಿ ನೀರು ಬಾರದಂತಾಗಿದೆ.

    ಫೋಟೋ ತೆಗೆದು ದಂಡ ವಿಧಿಸುವುದಕ್ಕೂ ಬ್ರೇಕ್: ಸುಗಮ ಸಂಚಾರಕ್ಕಷ್ಟೇ ಪೊಲೀಸರ ಸೇವೆ ಸೀಮಿತ

    ಶಾರುಖ್​ ಮ್ಯಾನೇಜರ್​ ಪೂಜಾರ ಒಟ್ಟು ಆಸ್ತಿ ಮೌಲ್ಯ, ವಾರ್ಷಿಕ ಸಂಬಳ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಂಡಿತ!

    ಕುರ್ಚಿ ಆಸೆ ಇನ್ನೂ ಬಂದಿಲ್ಲ; ಪ್ರಧಾನಿ ಮೋದಿ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts