More

    ಬೆಂಗಳೂರು ನಗರದಲ್ಲಿ 155 ಕಿಲೋಮೀಟರ್ ರಸ್ತೆ ನಿರ್ಮಾಣ

    ಬೆಂಗಳೂರು: ನಗರದಲ್ಲಿ ವಾಹನಗಳ ದಟ್ಟಣೆಯನ್ನು ಕಡಿಮೆ ಮಾಡಿ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ 2,095 ಕೋಟಿ ರೂ. ವೆಚ್ಚದಲ್ಲಿ 155 ಕಿ.ಮೀ. ಉದ್ದದ 4 ರಸ್ತೆಗಳನ್ನು ನಿರ್ವಿುಸಲಾಗುವುದು ಎಂದು ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ಶುಕ್ರವಾರ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಈ ರಸ್ತೆ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಗುಣಮಟ್ಟದೊಂದಿಗೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳು ನಿರ್ದೇಶನ ನೀಡಿದರು.

    ಕೆಆರ್​ಡಿಸಿಎಲ್ ಮೂಲಕ ರಾಜ್ಯದಲ್ಲಿ 639 ಕೋಟಿ ರೂ. ವೆಚ್ಚದಲ್ಲಿ 42 ಬೃಹತ್ ಸೇತುವೆಗಳನ್ನು ನಿರ್ವಿುಸಲಾಗುತ್ತಿದ್ದು, ಕಾಮಗಾರಿಯು ಪ್ರಗತಿ ಹಂತದಲ್ಲಿದೆ. 869 ಕೋಟಿ ರೂ. ವೆಚ್ಚದಲ್ಲಿ 175 ಕಿರá-ಸೇತುವೆಗಳನ್ನು ನಿರ್ವಿುಸಲಾಗುತ್ತಿದೆ. ಇದರ ಭಾಗವಾಗಿ ಈಗಾಗಲೇ 94 ಕಿರುಸೇತುವೆಗಳ ನಿರ್ಮಾಣ ಕಾಮಗಾರಿಯು ಪೂರ್ಣಗೊಂಡಿದೆ ಎಂದು ಕಾರಜೋಳ ಹೇಳಿದರು.

    ಇದನ್ನೂ ಓದಿ: ರಸ್ತೆ-ಮನೆಯಲ್ಲೇ ಕರೊನಾ ಮರಣಮೃದಂಗ

    ಲೋಕೋಪಯೋಗಿ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ಕಾರ್ಯದರ್ಶಿ ಗುರುಪ್ರಸಾದ್, ಮೂಲಸೌಕರ್ಯಗಳ ಇಲಾಖೆ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್, ಕೆಶಿಫ್ ಸಿಇಒ ಕೃಷ್ಣರೆಡ್ಡಿ, ಕೆಆರ್​ಡಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್​ಕುಮಾರ್ ಮತ್ತಿತರ ಅಧಿಕಾರಿಗಳು ಇದ್ದರು.

    ನಿಗದಿತ ಅವಧಿಯಲ್ಲಿ ಕಾಮಗಾರಿ: ರಾಜಾನಕುಂಟೆ, ನಾರಾಯಣಪುರ, ಗೊಲ್ಲಹಳ್ಳಿ ರೈಲ್ವೆ ಕ್ರಾಸಿಂಗ್​ನಲ್ಲಿ ರೈಲ್ವೆ ಮೇಲ್ಸೇತುವೆ, ಬಸವನಹಳ್ಳಿ ರೈಲ್ವೆ ಕ್ರಾಸಿಂಗ್ ಬಳಿ ರೈಲ್ವೆ ಕೆಳಸೇತುವೆ ನಿರ್ಮಾಣ ಕಾಮಗಾರಿಯನ್ನು ರೈಲ್ವೆ ಇಲಾಖೆ ಅನುಮತಿ ಸಿಕ್ಕ ಕೂಡಲೇ ಆರಂಭಿಸಲಾಗುವುದು. ವರ್ತರಿನಲ್ಲಿ ಎಲೆವೇಟೆಡ್ ಕಾರಿಡಾರ್, ಕಾಡುಗೋಡಿ ಬಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಕಾರಜೋಳ ತಿಳಿಸಿದರು.

    ಯಾವ್ಯಾವ ರಸ್ತೆಗಳು?: 137 ಕೋಟಿ ರೂ. ವೆಚ್ಚದಲ್ಲಿ 20.11 ಕೀ.ಮೀ. ಉದ್ದದ ಹೊಸಕೋಟೆ- ಬೂದಿಗೆರೆ ಕ್ರಾಸ್ ರಸ್ತೆಯನ್ನು ಸಿಂಗಹಳ್ಳಿ, ಮೈಲಹಳ್ಳಿ ಮಾರ್ಗವಾಗಿ ಕೆಂಪೇಗೌಡ ವಿಮಾನ ನಿಲ್ದಾಣದವರೆಗೆ ನಿರ್ವಿುಸಲಾಗುತ್ತಿದೆ. ಈಗಾಗಲೇ 3.5 ಕಿ.ಮೀ. ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. 155.69 ಕೋಟಿ ರೂ. ವೆಚ್ಚದಲ್ಲಿ 15.25 ಕಿ.ಮೀ. ಉದ್ದದ ನೆಲಮಂಗಲ- ಮಧುರೆ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. 169.81 ಕೋಟಿ ರೂ. ವೆಚ್ಚದಲ್ಲಿ 23.99 ಕಿ.ಮೀ. ಉದ್ದದ ಮಧುರೆ- ದೇವನಹಳ್ಳಿ ರಸ್ತೆ, 135 ಕೋಟಿ. ರೂ. ವೆಚ್ಚದ 33 ಕಿ.ಮೀ. ಉದ್ದದ ಬಿಡದಿ- ಜಿಗಣಿ ರಸ್ತೆ, 129 ಕೋಟಿ ರೂ. ವೆಚ್ಚದ 22 ಕಿ.ಮೀ. ಉದ್ದದ ಬನ್ನೇರುಘಟ್ಟ- ಆನೇಕಲ್ ರಸ್ತೆ, 1 ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ, 1 ಗ್ರೇಡ್ ಸಪರೇಟರ್ ಕಾಮಗಾರಿ, 182.23 ಕೋಟಿ ರೂ. ವೆಚ್ಚದ 39 ಕಿ.ಮೀ. ಉದ್ದದ ಆನೇಕಲ್- ಹೊಸಕೋಟೆ ರಸ್ತೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಗೋವಿಂದ ಕಾರಜೋಳ ತಿಳಿಸಿದರು.

    ಆಸ್ತಿ ವಿವರ ಸಲ್ಲಿಸದಿದ್ದರೆ ಬಿಬಿಎಂಪಿ ಸದಸ್ಯ ಸ್ಥಾನಕ್ಕೆ ಸಂಚಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts