ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಪೈರಸಿ ಮಾಡುತ್ತಿದ್ದ ಆರೋಪಿಯನ್ನು ದರ್ಶನ್ ಅಭಿಮಾನಿಗಳು ಪೊಲೀಸರಿಗೆ ಹಿಡಿದು ಕೊಟ್ಟಿದ್ದಾರೆ.
ಇದರ ಬೆನ್ನಲ್ಲೇ ಆರೋಪಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಮಾತನಾಡಿರುವ ಆರೋಪಿ ವಿಶ್ವನಾಥ್, ನಾನು ಕಿಚ್ಚು ಸುದೀಪ್ ಅಭಿಮಾನಿ. ನಾನು ಮತ್ತು ಅವರು ಒಂದೇ ಜಾತಿ ಆಗಿರುವುದರಿಂದ ರಾಬರ್ಟ್ ಸಿನಿಮಾ ಶೇರ್ ಮಾಡಿದೆ ಎಂದು ಹೇಳಿದ್ದಾನೆ.
ಸುದೀಪ್ ಅವರಾಗಲಿ, ಅವರ ಕಡೆ ಹುಡುಗರಾಗಲಿ ಯಾರೂ ಹೇಳಿಕೊಟ್ಟಿಲ್ಲ. ಅಭಿಮಾನದಿಂದಾಗಿ ಹೀಗೆ ಮಾಡಿದೆ. ನಾನು ದರ್ಶನ್ ಸರ್ ಹಾಗೂ ಅಭಿಮಾನಿಗಳಲ್ಲಿ ಕ್ಷಮೆಯಾಚಿಸುತ್ತೇನೆ. ಇನ್ನೆಂದು ಯಾವುದೇ ಕನ್ನಡ ಚಿತ್ರದ ಲಿಂಕ್ ಶೇರ್ ಮಾಡುವುದಿಲ್ಲ ಎಂದು ತಿಳಿಸಿದ್ದಾನೆ.
ಏನ್ರಯ್ಯ ಇದು ಜಾತಿ ಜಾತಿ ಅನ್ಕೊಂಡು ಇಂಡಸ್ಟ್ರಿಯಲ್ಲಿ ಯಾರಿಗೂ ಯಾವ ಜಾತಿ ಇಲ್ಲ ಸ್ವಾಮಿ ಇರೋದು ಒಂದೇ "ಸಿನೆಮಾ ಸಿನೆಮಾ ಸಿನೆಮಾ"
ಹೊಟ್ಟೆಗೆ ಮಣ್ಣು ತಿನ್ಬೇಡಿ ಅನ್ನ ತಿನ್ನಿ ಅಂತಿವಿ ಇಲ್ಲ ನಾನು ಕಿಚ್ಚ ಸುದೀಪ್ ಅಭಿಮಾನಿ ಅವರು ನಾನು ಒಂದೇ ಜಾತಿ ಅದಕ್ಕೆ ಮಣ್ಣೆ ತಿಂತಿನಿ ಅಂದ್ರೆ ಯಾರ್ ಏನು ಮಾಡೋಕೆ ಆಗುತ್ತೆ ಮಾಡಿದುಣ್ಣೋ ಮಾರಾಯ. pic.twitter.com/pxz7ylbhqK— Thoogudeepa 'D' Team – R (@DTEAM7999) March 13, 2021
ರಾಬರ್ಟ್ ಚಿತ್ರ ಪೈರಸಿ ಕುರಿತು ಉಮಾಪತಿ ಫಿಲ್ಮ್ ವ್ಯವಸ್ಥಾಪಕ ಮಂಜುನಾಥ ನೀಡಿದ ದೂರಿನ ಅನ್ವಯ ಆರೋಪಿ ವಿಶ್ವನಾಥ್ನನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವಿಶ್ವನಾಥ್ ರಾಬರ್ಟ್ ಚಿತ್ರದ ಲಿಂಕ್ ಶೇರ್ ಮಾಡುತ್ತಿದ್ದ. ವಾಟ್ಸ್ಆ್ಯಪ್, ಇನ್ಸ್ಟಾಗ್ರಾಂ ಸೇರಿ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಲಿಂಕ್ ಹಂಚಿಕೆ ಮಾಡಿರುವ ಆರೋಪ ಕೇಳಿಬಂದಿದೆ. ಎಚ್ಡಿ ಪ್ರಿಂಟ್ ಪಡೆಯುವ ಸೋಗಿನಲ್ಲಿ ದರ್ಶನ್ ಅಭಿಮಾನಿಗಳು ಆರೋಪಿಯನ್ನು ಸೆರೆಹಿಡಿದಿದ್ದಾರೆ.
ನಮಗೆ ಎಚ್ಡಿ ಪ್ರಿಂಟ್ ಬೇಕು ಅಂತ ದರ್ಶನ್ ಅಭಿಮಾನಿಗಳು ಕೇಳಿದ್ದರು. ಇದಕ್ಕೆ ಹೆಚ್ಚಿನ ಹಣದ ಬೇಡಿಕೆ ಇಟ್ಟಿದ್ದ ವಿಶ್ವನಾಥ್ನನ್ನು ಹಣ ಕೊಡುವುದಾಗಿ ನಂಬಿಸಿ ಆತನನ್ನು ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದ ಬಳಿ ಮಾತುಕತೆಗೆ ಕರೆಸಿಕೊಂಡು ಅಭಿಮಾನಿಗಳು ಸೆರೆಹಿಡಿದಿದ್ದಾರೆ.
ಶನಿವಾರವಷ್ಟೇ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ಒಬ್ಬ ಆರೋಪಿಯನ್ನು ಅಭಿಮಾನಿಗಳು ಹಿಡಿದುಕೊಟ್ಟಿದ್ದರು.
ಬಿಗ್ಬಾಸ್ ಮನೆಯಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದ ಶಂಕರ್ ಅಶ್ವಥ್ ನೇರ ನುಡಿ..!
ರಾಬರ್ಟ್ ಪೈರಸಿ: ಎಚ್ಡಿ ಪ್ರಿಂಟ್ ಪಡೆಯುವ ಸೋಗಿನಲ್ಲಿ ಆರೋಪಿಯನ್ನು ಹಿಡಿದು ಕೊಟ್ಟ ದರ್ಶನ್ ಫ್ಯಾನ್ಸ್!