More

    PHOTOS| ಸಾರಿಗೆ ನೌಕರರ ಮುಷ್ಕರ: ಬಿಕೋ ಎನ್ನುತ್ತಿರುವ ಮೆಜೆಸ್ಟಿಕ್​ ಬಸ್​ ನಿಲ್ದಾಣ

    ಬೆಂಗಳೂರು: ಆರನೇ ವೇತನ ಆಯೋಗ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಿ ಸಾರಿಗೆ ನೌಕರರು ರಾಜ್ಯಾದ್ಯಂತ ಮುಷ್ಕರ ನಡೆಸುತ್ತಿದ್ದು, ಬಸ್​ ನಿಲ್ದಾಣಗಳು ಬಿಕೋ ಎನ್ನುತ್ತಿವೆ. ಅದರಲ್ಲೂ ಸದಾ ಪ್ರಯಾಣಿಕರಿಂದ ಗಿಜುಗುಡುತ್ತಿದ್ದ ಮೆಜಿಸ್ಟಿಕ್​ ಹಾಗೂ ಕೆಂಪೇಗೌಡ ಬಸ್​ ನಿಲ್ದಾಣದ ಸಂಪೂರ್ಣ ಸ್ತಬ್ಧವಾಗಿದೆ.

    ಒಂದೇ ಒಂದು ಬಸ್​ ಇಲ್ಲದೆ ಮೆಜಿಸ್ಟಿಕ್​ ಖಾಲಿ ಖಾಲಿಯಾಗಿ ಕಾಣುತ್ತಿದೆ. ಸಾಮಾನ್ಯ ದಿನಗಳಲ್ಲಿ ಮೆಜೆಸ್ಟಿಕ್​ನಲ್ಲಿ ಜನರು ಕಿಕ್ಕಿರಿದು ಸೇರುತ್ತಿದ್ದರು. ಇಂದು ಪ್ರತಿಭಟನೆ ಎಂದು ಮೊದಲೇ ತಿಳಿದ ಜನರು ಇತ್ತ ಸುಳಿದಿಲ್ಲ. ಇನ್ನು ಕೆಲವರು ಮೆಜೆಸ್ಟಿಕ್​ ಆಗಮಿದ್ದು, ಬಸ್​ ಇಲ್ಲದೇ ಪರದಾಡುತ್ತಿದ್ದಾರೆ.

    ಇದನ್ನೂ ಓದಿರಿ: ಸಾರಿಗೆ ನೌಕರರ ಪ್ರತಿಭಟನೆ ನಡುವೆಯೇ ಹೃದಯಾಘಾತದಿಂದ ಪ್ರಯಾಣಿಕ ಸಾವು

    ಬಸ್​ ನಿಲ್ದಾಣದ ನಡುವಿನ ರಸ್ತೆಯಲ್ಲಿ ಆಟೋಗಳು ಸಾಲು ಸಾಲಾಗಿ ನಿಂತಿವೆ. ಒಂದಿಷ್ಟು ಖಾಸಗಿ ಬಸ್​ಗಳು ಸಹ ಓಡಾಡುತ್ತಿವೆ. ನಗರ ಸಂಚಾರ ಬಹುತೇಕ ಸ್ತಬ್ಧ ಆಗಿರುವುದರಿಂದ ಮೆಟ್ರೋ ರೈಲು ಪ್ರಯಾಣಕ್ಕೆ ಜನರು ಕ್ಯೂ ನಿಂತಿದ್ದಾರೆ. ದೂರದ ಊರುಗಳಿಗೆ ತೆರಳಬೇಕಿರುವ ಜನರು ಯಾವುದಾದರೂ ವಾಹನ ಬರಬಹುದೇನೋ ಎಂಬ ನಿರೀಕ್ಷೆಯಲ್ಲೇ ಬಸ್​ ನಿಲ್ದಾಣದಲ್ಲಿ ಕಾದು ಕುಳಿತಿದ್ದು, ಒಟ್ಟಾರೆ ಮೆಜೆಸ್ಟಿಕ್​ ನಿಲ್ದಾಣದ ಇಂದಿನ ಸ್ಥಿತಿಯನ್ನು ಈ ಕೆಳಗಿನ ಫೋಟೋಗಳಲ್ಲಿ ಕಾಣಬಹುದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts