More

    ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಹಿಂದುಪರ ಸಂಘಟನೆಗಳು ಪಟ್ಟು

    ಬೆಂಗಳೂರು: ಇಷ್ಟು ದಿನ ತಣ್ಣಗಾಗಿದ್ದ ಚಾಮರಾಜಪೇಟೆಯ ಈದ್ಗಾ ಮೈದಾನದ ವಿಚಾರ ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಜನವರಿ 26ರ ಗಣರಾಜ್ಯೋತ್ಸವವನ್ನು ಈದ್ಗಾ ಮೈದಾನದಲ್ಲಿ ಆಚರಣೆ ಮಾಡುವಂತೆ ಹಿಂದುಪರ ಸಂಘಟನೆಗಳು ಪಟ್ಟು ಹಿಡಿದಿವೆ.

    ಇದೀಗ ಮತ್ತೆ ಈದ್ಗಾ ಮೈದಾನದ ವಿಚಾರ ಮುನ್ನೆಲೆಗೆ ಬಂದಿರುವುದು ಸರ್ಕಾರಕ್ಕೆ ಹೊಸ ತಲೆನೋವು ಉಂಟಾದಂತಿದೆ. ಹಿಂದು ಜನಜಾಗೃತಿ ಸಂಘಟನೆ, ಜಿಲ್ಲಾಧಿಕಾರಿಗಳಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರದ ಮೂಲಕ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಮನವಿ ಮಾಡಿದೆ. ಹಿಂದೂ ಜನ ಜಾಗೃತಿ ವೇದಿಕೆಯ ಮೋಹನ್ ಗೌಡ ಅವರು ಸರ್ಕಾರವನ್ನು ವಿಡಿಯೋ ಮೂಲಕ ಒತ್ತಾಯ ಮಾಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಂತೆ ಗಣರಾಜ್ಯೋತ್ಸವ ಕೂಡ ನಡೆಯಬೇಕು ಅಂತ ಮನವಿ ಮಾಡಿದ್ದಾರೆ.

    ಇದೀಗ ಹಿಂದುಪರ ಸಂಘಟನೆಗಳ ಒತ್ತಡಕ್ಕೆ ಮಣಿದು ಕಂದಾಯ ಇಲಾಖೆ ಸರ್ಕಾರಕ್ಕೆ ಪತ್ರ ಬರೆದಿದೆ. ಹಾಗಾದರೆ ಸರ್ಕಾರ ಗಣರಾಜ್ಯೋತ್ಸವಕ್ಕೆ ಅನುಮತಿ ನೀಡುತ್ತಾ? ಸ್ವಾತಂತ್ರ್ಯ ದಿನಾಚರಣೆ ರೀತಿಯೇ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ನಡೆಯುತ್ತಾ? ಎಂಬ ಪ್ರಶ್ನೆ ಉದ್ಭವವಾಗಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಕೂಡ ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆದಿದ್ದು, ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಸಂಗತಿ ತೀವ್ರ ಕುತೂಹಲ ಮೂಡಿಸಿದೆ. (ದಿಗ್ವಿಜಯ ನ್ಯೂಸ್​)

    ಇದು ವಿಶ್ವದ ಶ್ರೀಮಂತ ಬೆಕ್ಕು! ಇದರ ಒಟ್ಟು ಆಸ್ತಿಯ ಮೌಲ್ಯ ತಿಳಿದರೆ ನಿಮ್ಮ ಹುಬ್ಬೇರುವುದು ಖಚಿತ

    ಆಟೋಗೆ ಡಿಕ್ಕಿ ಹೊಡೆದು ಕಾರು ಚಾಲಕ ಎಸ್ಕೇಪ್: ಮಹಿಳೆಯರಿಬ್ಬರ ದುರ್ಮರಣ, ಕೆ.ಆರ್​.ಪುರಂನಲ್ಲಿ ದುರ್ಘಟನೆ

    ಪ್ರತಿಭಟನೆ ಕೈಬಿಟ್ಟ ಕ್ವಾರಿ ಮಾಲೀಕರು; ಸಿಎಂ ಸಭೆ ಬಳಿಕ ಸಮಸ್ಯೆಗೆ ಪರಿಹಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts