ಬೆಂಗಳೂರು: ನಗರದ ಕೆ.ಆರ್ ಪುರಂ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಹಿಟ್ ಆ್ಯಂಡ್ ರನ್ಗೆ ಇಬ್ಬರು ಮಹಿಳೆಯರು ಬಲಿಯಾಗಿದ್ದಾರೆ. ಕೆ.ಆರ್.ಪುರಂನ ಆರ್.ಟಿ.ಓ ಕಚೇರಿ ಮುಂದೆ ಘಟನೆ ನಡೆದಿದೆ.
ಕಾರೊಂದು ಆಟೋಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಿದ್ದು, ಆಟೋದಲ್ಲಿದ್ದ ಇಬ್ಬರು ಮಹಿಳೆಯರು ದುರಂತ ಸಾವಿಗೀಡಾಗಿದ್ದಾರೆ. ಮೃತರನ್ನು ಫಾಝಿಲಾ ಹಾಗೂ ತಸೀನಾ ಎಂದು ಗುರುತಿಸಲಾಗಿದೆ.
ಮೃತರು ಕೆ.ಆರ್ ಪುರಂ ಮಾರ್ಗದ ಮೂಲಕ ಆಟೋದಲ್ಲಿ ಹೋಗ್ತಿದ್ದರು. ಒಟ್ಟು ಐದು ಜನ ಆಟೋದಲ್ಲಿ ಹೋಗ್ತಿದ್ರು. ಆಟೋ ಚಾಲಕ ಖಾಲೀದ್, ಪತ್ನಿ ತಾಸೀನಾ, ಸಹೋದರಿ ಫಾಝಿಲಾ ಹಾಗೂ ಇಬ್ಬರು ಮಕ್ಕಳು ಹೋಗುತ್ತಿರುವಾಗ ಅತಿ ವೇಗದಲ್ಲಿ ಬಂದಿರುವ ಕಾರು ಆಟೋಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಇಬ್ಬರು ಮಹಿಳೆಯರು ಮೃತಪಟ್ಟರೆ, ಎರಡು ವರ್ಷದ ಮಗುವಿಗೆ ಗಂಭೀರ ಗಾಯವಾಗಿದೆ.
ಉಳಿದವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಕೆ.ಆರ್ ಪುರಂ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಎಸ್ಕೇಪ್ ಆಗಿರೋ ಕಾರು ಚಾಲಕನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್)
ನಟಿಯ ಜತೆ ಸೆಲ್ಫಿ ಕ್ಲಿಕ್ಕಿಸುವಾಗ ಮಹಿಳೆಗೆ ಕಾದಿತ್ತು ಶಾಕ್! ಅಪಾಯದಿಂದ ಪಾರು, ವಿಡಿಯೋ ವೈರಲ್
ನಾಯಿ ಮರಿ, ತೋಳದ ಬಳಿಕ ಸ್ಯಾಂಟ್ರೋ ಸೌಂಡ್; ಸಚಿವರುಗಳ ಜತೆ ಆರೋಪಿ ಫೋಟೋ, ಸದ್ದು ಮಾಡುತ್ತಿರುವ ಹತ್ತು ಲಕ್ಷ ರೂ.
ಕೈನಿಂದ ಒಡೆದು ಆಳುವ ನೀತಿ: ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಟೀಕೆ; ಶಿರಾದಲ್ಲಿ ಜನಸಂಕಲ್ಪ ಸಮಾವೇಶ