More

    ಹಲವಾರು ರೋಗಗಳಿಗೆ ಸಂಜೀವಿನಿಯಾಗಿ ಕೆಲಸ ಮಾಡುತ್ತೆ ಓಂ ಕಾಳು..

    ಬೆಂಗಳೂರು: ಓಂ ಕಾಳುಗಳನ್ನು ಅಜ್ವೈನ್ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಉಪ್ಪಿನಕಾಯಿ, ಸಾಂಬಾರುಗಳು, ಗೊಜ್ಜುಗಳು ಹಾಗೂ ಅಡುಗೆಯಲ್ಲಿ ಹೆಚ್ಚಾಗಿ ಇದನ್ನು ಬಳಸಲಾಗುತ್ತದೆ. ಇದು ಆರೋಗ್ಯಕ್ಕೆ ಪೂರಕವಾದ ಹಲವಾರು ಗುಣಗಳನ್ನು ಹೊಂದಿವೆ.

    ಇದನ್ನೂ ಓದಿ: ಮದುವೆಯಾಗಲು ಬಂದು ಫಜೀತಿಗೆ ಸಿಕ್ಕ ವರ, ವಧುವಿನ ಮನೆಯವರು ಸಿಟ್ಟಾಗಿದ್ದು ಈ ಕಾರಣಕ್ಕೆ…

    ಅಸಿಡಿಟಿ ಮತ್ತು ಅಜೀರ್ಣದಿಂದ ತ್ವರಿತ ಪರಿಹಾರ ನೀಡುವ ಓಂ ಕಾಳಿನಲ್ಲಿರುವ ಸಕ್ರಿಯ ಕಿಣ್ವಗಳು ಗ್ಯಾಸ್ಟ್ರಿಕ್ ಜ್ಯೂಸ್ ಬಿಡುಗಡೆಯನ್ನು ಸುಗಮಗೊಳಿಸುವ ಮೂಲಕ ನಮ್ಮ ಜೀರ್ಣಕಾರಿ ಕಾರ್ಯಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸಾಮಾನ್ಯ ಶೀತಕ್ಕೆ ಚಿಕಿತ್ಸೆ ನೀಡುವ ಇದು ಇದು ಆಸ್ತಮಾ ಮತ್ತು ಬ್ರಾಂಕೈಟಿಸ್‌ನಂತಹ ಉಸಿರಾಟದ ಕಾಯಿಲೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ.

    ಮೈಗ್ರೇನ್ ತಲೆನೋವಿನಿಂದ ಉಪಶಮನವನ್ನು ಒದಗಿಸಲು, ಕಿವಿ ಮತ್ತು ಹಲ್ಲು ನೋವನ್ನು ಕಡಿಮೆ ಮಾಡಲು ಎರಡು ಹನಿ ಅಜ್ವೈನ್ ಎಣ್ಣೆ ಸಾಕು. ಅಲ್ಲದೇ ಇದು ಉತ್ತಮ ಮೌತ್ ವಾಶ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ಹೊಟ್ಟೆಯನ್ನು ಸ್ವಚ್ಛಗೊಳಿಸುವ ಮೂಲಕ ಅಜೀರ್ಣ ಸಮಸ್ಯೆಯನ್ನು ನಿವಾರಿಸುವ ಇದು ಅನಿಯಮಿತ ಗ್ಯಾಸ್ ಸಮಸ್ಯೆಯನ್ನು ಕಡಿಮೆ ಮಾಡಲು ಪೂರಕವಾಗಿದೆ.

    ಇದನ್ನೂ ಓದಿ: ಪ್ರಸ್ತುತ ರಾಜಕಾರಣ ಐಪಿಎಲ್​ನಂತಾಗಿದೆ, ಯಾರು ಯಾವ ಕಡೆ ಆಡುತ್ತಿದ್ದಾರೋ ಯಾರಿಗೂ ತಿಳಿದಿಲ್ಲ: ಮಹಾರಾಷ್ಟ್ರ ಮಾಜಿ ಸಿಎಂ

    ಸಂಸ್ಕೃತದಲ್ಲಿ ಉಗ್ರಗಂಧ ಎಂದೂ ಕರೆಯುಲ್ಪಡುವ ಇದು ಒಟ್ಟಾರೆಯಾಗಿ ಹೊಟ್ಟೆ ನೋವು, ಅಸಿಡಿಟಿ, ಹೊಟ್ಟೆಯುರಿಯಂತಹ ಸಮಸ್ಯೆಗೆ ಪರಿಹಾರ ನೀಡುತ್ತದೆ. ಇದು ಫೈಬರ್, ಖನಿಜಗಳು, ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು, ಇದನ್ನು ಕಚ್ಚಾ ಆಗಿ ಸೇವಿಸಬಹುದಾಗಿದೆ. ಆದರೆ ಓಂ ಕಾಳುಗಳನ್ನು ಸೇವಿಸುವ ಮುಂಚೆ ವೈದ್ಯರ ಅಭಿಪ್ರಾಯಪಡೆಯುವುದು ಒಳ್ಳೆಯದು.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts