More

    ನೌಕರರ ಹೋರಾಟಕ್ಕೆ ಬೆಂಬಲ: ರಾಜ್ಯ ಸರ್ಕಾರದ ನಿರ್ಲಕ್ಷ್ಯ ವಿರುದ್ಧ ಮಹಾಲಿಂಗೇಗೌಡ ವಾಗ್ದಾಳಿ

    ಮಂಡ್ಯ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ಹಾಗೂ ಪ್ರೌಢಶಾಲಾ ಸಹ ಶಿಕ್ಷಕರ ಸಂಘದವರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳಿದ ಜಿಲ್ಲಾ ನೌಕರರ ಸಂಘದ ಸದಸ್ಯರನ್ನು ಜೆಡಿಎಸ್ ಜಿಲ್ಲಾ ವಕ್ತಾರ ಮಹಾಲಿಂಗೇಗೌಡ ಮುದ್ದನಘಟ್ಟ ನಗರದಲ್ಲಿ ಬೀಳ್ಕೊಟ್ಟರು.
    ಈ ಸಂದರ್ಭದಲ್ಲಿ ಮಾತನಾಡಿದ ಮಹಾಲಿಂಗೇಗೌಡ ಮುದ್ದನಘಟ್ಟ, ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಖಂಡನೀಯ. ಇವರಿಗೂ ಪಿಂಚಣಿ ಸೌಲಭ್ಯ ಕಲ್ಪಿಸಬೇಕು. ರಾಜ್ಯದ ಪ್ರತಿಯೊಬ್ಬ ನೌಕರರಿಗೂ ಹಳೆಯ ನಿಶ್ಚಿತ ಪಿಂಚಣಿಯನ್ನೇ ಜಾರಿಗೊಳಿಸಬೇಕು. ಪಿಂಚಣಿ ಪಡೆಯುವುದು ನೌಕರರ ಮೂಲಭೂತ ಹಕ್ಕು. ಸರ್ಕಾರ ಇಂತಹ ತಾರತಮ್ಯ ನೀತಿಯನ್ನು ಅನುಸರಿಸದೆ ಇವರ ಅಗತ್ಯತೆಯನ್ನು ಈಡೇರಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ನೌಕರರೊಂದಿಗೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
    ಮಂಗಲ ಶಿವಣ್ಣ, ಗೋಪಿನಾಥ್, ರಾಮಕೃಷ್ಣ, ಶಿವಲಿಂಗಯ್ಯ, ಜಗದೀಶ್ ಇತರರಿದ್ದರು. ಪ್ರತಿಭಟನೆಗೆಂದು ಜಿಲ್ಲೆಯಿಂದ 300ಕ್ಕೂ ಹೆಚ್ಚು ನೌಕರರು ತೆರಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts