ಕಾಲುವೆಯಲ್ಲಿ ನೀರು ಕುಡಿಯಲು ಹೋದ ಯುವಕರಿಬ್ಬರಿಗೆ ಕಾದಿತ್ತು ಬಿಗ್​ ಶಾಕ್​..!

Drowned
Published on

ಬಳ್ಳಾರಿ: ಕಾಲುವೆಯಲ್ಲಿ ನೀರು ಕುಡಿಯಲು ಹೋದ ಯುವಕರಿಬ್ಬರು ಮೃತಪಟ್ಟಿರುವ ಘಟನೆ ಹೊಸಪೇಟೆಯಲ್ಲಿ ಭಾನುವಾರ ನಡೆದಿದೆ.

ಸಂಡೂರು ಮೂಲದ ಕಿರಣ್ (23) ಮತ್ತು ಅಬ್ದುಲ್ಲಾ (23) ಮೃತ ದುರ್ದೈವಿಗಳು. ಹೊಸಪೇಟೆಗೆ ಆಗಮಿಸಿದ್ದ ಯುವಕರು ಸಂಡೂರಿಗೆ ಹಿಂತಿರುಗುವಾಗ ಮಾರ್ಗ ಮಧ್ಯೆದಲ್ಲಿ ಬಾಯಾರಿಕೆಯಿಂದ ಎಚ್.ಎಲ್.ಸಿ ಕಾಲುವೆಯಲ್ಲಿ ನೀರು ಕುಡಿಯಲು ಹೋಗಿದ್ದರು.

ಅಬ್ದುಲ್ಲಾ ಬಾಟಲಿಯಲ್ಲಿ ನೀರುವ ತುಂಬುವಾಗ ಕಾಲು ಜಾರಿ ಕಾಲುವೆಗೆ ಬಿದ್ದಿದ್ದಾನೆ.‌ ಬಳಿಕ ಆತನನ್ನ ಕಾಪಾಡಲು ಹೋದ ಕಿರಣ್ ಕೂಡಾ ಕಾಲುವೆಗೆ ಬಿದ್ದು, ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ. ಕಾಲುವೆಯಲ್ಲಿ ಶೋಧ ಕಾರ್ಯ ನಡೆಸಿ ಇಬ್ಬರ ಮೃತದೇಹವನ್ನು ಹೊರಕ್ಕೆ ತೆಗೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net