ಬಳ್ಳಾರಿ: ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ ಜನೌಷಧ ಕೇಂದ್ರಗಳಲ್ಲಿ ಅಗ್ಗದ ದರದಲ್ಲಿ ಔಷಧ ಲಭ್ಯವಾಗುತ್ತಿದೆ. ಇದರಿಂದ ಬಡವರಿಗೆ ತುಂಬಾ ಅನುಕೂಲವಾಗಿದೆ ಎಂದು ಶಾಸಕ ಜಿ.ಸೋಮಶೇಖರರೆಡ್ಡಿ ಹೇಳಿದರು.
ನಗರದ ಕೋಲಾಚಲಂ ಕಾಂಪೌಂಡ್‌ನಲ್ಲಿರುವ ಜನೌಷಧ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿ ಕೇಂದ್ರದಲ್ಲಿ ಔಷಧಗಳು ಕಡಿಮೆ ದರಕ್ಕೆ ದೊರೆಯುವ ಕುರಿತು ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು.ಮೆಡಿಕಲ್ ಸ್ಟೋರ್‌ಗಳಲ್ಲಿ 100 ರೂ.ಗೆ ಸಿಗುವ ಔಷಧ ಜನೌಷಧ ಕೇಂದ್ರದಲ್ಲಿ 15ರಿಂದ 20 ರೂ. ಗೆ ಸಿಗುತ್ತಿದೆ ಎಂದು ತಿಳಿಸಿದರು.
ರಾಬಕೊ ಹಾಲು ಒಕ್ಕೂಟದ ನಿರ್ದೇಶಕ ವೀರಶೇಖರೆಡ್ಡಿ, ಪಾಲಿಕೆಯ ಮಾಜಿ ಸದಸ್ಯರಾದ ಎಸ್.ಮಲ್ಲನಗೌಡ, ಶ್ರೀನಿವಾಸ ಮೋತ್ಕರ್, ಜನೌಷಧ ಕೇಂದ್ರದ ಮೇಘನಾಥ, ಮಂಜುನಾಥ ಇತರರಿದ್ದರು.