More

    ತೈಲ ಬೆಲೆ ನೂರರ ಗಡಿ ದಾಟಿಸಿದ್ದು ಮೋದಿ ಸಾಧನೆ: ಬಳ್ಳಾರಿಯಲ್ಲಿ ಮಾಜಿ ಸಂಸದ ಉಗ್ರಪ್ಪ ಆರೋಪ

    ಬಳ್ಳಾರಿ: ಚುನಾವಣೆ ಪ್ರಚಾರಗಳಿಗೆ ತೆರಳುವ ಪ್ರಧಾನಿ ನರೇಂದ್ರ ಮೋದಿ, ರಾಜ್ಯಗಳು ಅನುಭವಿಸುತ್ತಿರುವ ಸಂಕಷ್ಟ ಮತ್ತು ಅಭಿವೃದ್ಧಿ ವಿಷಯದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪರಿಶೀಲನೆಗೆ ಮುಂದಾಗುತ್ತಿಲ್ಲ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆರೋಪಿಸಿದರು.

    ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಎರಡು ಕೋಟಿ ಉದ್ಯೋಗ, ವಿದೇಶಿ ಹಣ ವಾಪಸ್ ಹಾಗೂ ಬಡವರ ಖಾತೆಗೆ ಹಣ ಹಾಕಲಿಲ್ಲ. ಕಳೆದ ಬಜೆಟ್‌ನಲ್ಲಿ ಕೋವಿಡ್ ಲಸಿಕೆಗೆಂದು ತೆಗೆದಿರಿಸಿದ 35 ಸಾವಿರ ಕೋಟಿ ರೂ. ಏನಾಯ್ತು ಎಂಬುದರ ಬಗ್ಗೆ ಮೋದಿ ಹೇಳುತ್ತಿಲ್ಲ. ಎಲ್ಲರಿಗೂ ಲಸಿಕೆ ಉಚಿತ ಎನ್ನುತ್ತಲೇ, ಶೇ.25 ಖಾಸಗಿ ಮಾರಾಟ ಎನ್ನುತ್ತಾರೆ. ಸಮಯಕ್ಕೆ ಸರಿಯಾಗಿ ಆಕ್ಸಿಜನ್ ಪೂರೈಸದ ಕಾರಣ ಹಲವರು ಮೃತಪಟ್ಟರು. ತೈಲ ಬೆಲೆ ನೂರರ ಗಡಿ ದಾಟಿಸಿದ್ದು ಮೋದಿ ಸಾಧನೆ ಎಂದು ಛೇಡಿಸಿದರು.

    ಬಿಜೆಪಿಯಲ್ಲಿ ಸರಿ ಇಲ್ಲ: ಬಿಜೆಪಿಯಲ್ಲಿ ಆಂತರಿಕವಾಗಿ ಎಲ್ಲವೂ ಸರಿಯಿಲ್ಲ ಎಂಬುದು ಅವರ ಶಾಸಕರ ಹೇಳಿಕೆಯಿಂದಲೇ ತಿಳಿಯುತ್ತದೆ. ಅದು ಅವರ ಆಂತರಿಕ ವಿಚಾರವಾದರೂ, ಯಡಿಯೂರಪ್ಪರನ್ನು ಬದಲಿಸಬೇಕೆಂದು ಹೊರಟಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಒಂದು ಸಿಡಿ ಇದೆ, ಯಡಿಯೂರಪ್ಪ ಮತ್ತೊಬ್ಬ ರಮೇಶ್ ಜಾರಕಿಹೊಳಿ ಆಗ್ತಾರೆ ಅಂತಾರೆ, ಯೋಗೀಶ್ವರ ಬಳಿ ಸಿಡಿ ಇದೆ ಎನ್ನುತ್ತಿದ್ದು, ಅದೆಲ್ಲ ಬಹಿರಂಗ ಆಗಬೇಕು ಎಂದು ಉಗ್ರಪ್ಪ ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts