More

    ಕೆಕೆಆರ್‌ಡಿಬಿ ಪ್ರಗತಿ ಪರಿಶೀಲನೆ ಸಭೆ ರದ್ದುಪಡಿಸಿ: ಹೈಕ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಸಿರಿಗೇರಿ ಪನ್ನರಾಜ್ ಆಗ್ರಹ

    ಬಳ್ಳಾರಿ: ಕಲಬುರಗಿಯಲ್ಲಿ ಸಚಿವ ನಾರಾಯಣಗೌಡ ನೇತೃತ್ವದಲ್ಲಿ ಜು.13ರಂದು ನಡೆಯುವ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಪ್ರಗತಿ ಪರಿಶೀಲನೆ ಸಭೆ ಸಂವಿಧಾನ ಬಾಹಿರವಾಗಿದ್ದು, ರದ್ದುಪಡಿಸಬೇಕು ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಸಿರಿಗೇರಿ ಪನ್ನರಾಜ್ ಒತ್ತಾಯಿಸಿದರು.

    ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ 371ಜೆ ಅಡಿ ಮಂಡಳಿ ರಚಿಸಲಾಗಿದ್ದು, ಸರ್ಕಾರದಂತೆ ಸ್ವತಂತ್ರ ಕೆಲಸ ಮಾಡಲು ಹಾಗೂ ಈ ಭಾಗದ ಸಚಿವರೊಬ್ಬರು ಮಂಡಳಿಗೆ ಅಧ್ಯಕ್ಷರಾಗಲೂ ಅವಕಾಶವಿದೆ. ಆದರೆ, ಈಗ ಸರ್ಕಾರ ಎರಡು ವರ್ಷಗಳಿಂದ ಮಂಡಳಿಯನ್ನು ನಿಷ್ಕ್ರಿಯಗೊಳಿಸುತ್ತಾ ಬಂದಿದ್ದು, ಶಾಸಕರನ್ನು ಅಧ್ಯಕ್ಷರನ್ನಾಗಿ ಮಾಡಲು ಅವಕಾಶ ನೀಡಿ ಮಂಡಳಿಯನ್ನು ಕೆಳದರ್ಜೆಗೆ ಇಳಿಸಿತು. ಈವರೆಗೆ ಎರಡು ವರ್ಷ ಕಳೆದರೂ ಮಂಡಳಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡದೆ, ಮಂಡಳಿಯ ಅಧಿಕಾರವನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಈ ಭಾಗದ ಅಭಿವೃದ್ಧಿಗೆ ತೊಡಕಾಗುವಂತೆ ಮಾಡಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

    ಈ ಭಾಗದ ಕೆಲ ಜನಪ್ರತಿನಿಧಿಗಳನ್ನು ಮಂಡಳಿಗೆ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಬೇಕು. ಆದರೆ, ಈವರೆಗೆ ಸರ್ಕಾರದಿಂದ ಈ ಕೆಲಸ ನಡೆದಿಲ್ಲ. ಮಂಡಳಿ ರಚನೆಯಾಗದೆ ಇರುವುದರಿಂದ ಕಾಮಗಾರಿಗಳು ನಿಂತಿವೆ. ಮಂಡಳಿಗೆ ವಿಶೇಷ ಕಾರ್ಯದರ್ಶಿ ನೇಮಕ, 2500 ಕೋಟಿ ರೂ. ಅನುದಾನ ನೀಡಬೇಕು. 371ಜೆ ಅನುಷ್ಠಾನದಲ್ಲಿ ಅನ್ಯಾಯವಾಗುತ್ತಿದ್ದು, ಇದಕ್ಕೊಂದು ಆಯೋಗ ರಚಿಸಬೇಕು. ಜಿಲ್ಲಾವಾರು ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು. ಈ ವಿಚಾರವಾಗಿ ಇತ್ತೀಚೆಗೆ ಬೆಂಗಳೂರಲ್ಲಿ ನಡೆದ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಬೆರಳೆಣಿಕೆ ಜನಪ್ರತಿನಿಧಿಗಳು ಮಾತ್ರ ಹಾಜರಾಗಿದ್ದರು. ಉಳಿದವರು ಸಭೆ ಕಡೆಗೆ ಮುಖಮಾಡಲಿಲ್ಲ. ಹೀಗಾದರೆ ನಮ್ಮ ಭಾಗದ ಆಭಿವೃದ್ಧಿ ಹೇಗೆ ಸಾಧ್ಯ ಎಂದು ಬೇಸರ ವ್ಯಕ್ತಪಡಿಸಿದ ಪನ್ನರಾಜ್, ಜು.15ರಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಪರಿಶೀಲನಾ ಸಭೆ ರದ್ದುಪಡಿಸುವಂತೆ ಒತ್ತಾಯಿಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts