More

    ಹತ್ತು ಲಕ್ಷ ಜನರಿಗೆ ಉಚಿತ ಊಟ: ಮಾಜಿ ಸಚಿವ ಸಂತೋಷ್ ಲಾಡ್ ಹೇಳಿಕೆ ; ಬಳ್ಳಾರಿಯಲ್ಲಿ ಉಚಿತ ಕ್ಯಾಂಟಿನ್‌ಗೆ ಚಾಲನೆ

    ಬಳ್ಳಾರಿ: ಹಸಿವು ಮುಕ್ತ ರಾಜ್ಯವನ್ನಾಗಿಸುವ ಉದ್ದೇಶದಿಂದ ಎಸ್.ಲಾಡ್ ಫೌಂಡೇಷನ್‌ನಿಂದ ಆರಂಭಿಸಿರುವ ಉಚಿತ ಕ್ಯಾಂಟಿನ್‌ಗಳಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಸಾರ್ವಜನಿಕರಿಗೆ ಊಟ ನೀಡಲಾಗಿದೆ ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದರು.

    ನಗರದ ಎಪಿಎಂಸಿ ಮುಂಭಾಗದಲ್ಲಿ ಮಂಗಳವಾರ ಉಚಿತ ಕ್ಯಾಂಟಿನ್‌ಗೆ ಚಾಲನೆ ನೀಡಿ ಮಾತನಾಡಿದರು. ಮಾಜಿ ಸಿಎಂ ಸಿದ್ದರಾಮಯ್ಯ ಜನ್ಮದಿನ ನಿಮಿತ್ತ ಆ.2ರಂದು ನಗರದಲ್ಲಿ ಎರಡು ಕ್ಯಾಂಟಿನ್‌ಗಳನ್ನು ಆರಂಭಿಸಿದ್ದೆವು. ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದರು.

    ಉಚಿತ ಕ್ಯಾಂಟಿನ್‌ಗೆ ನನ್ನ ಗೆಳೆಯರು, ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಬೆಂಬಲ ನೀಡಿ ಸಹಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕ್ಯಾಂಟಿನ್‌ಗಳನ್ನು ರಾಜ್ಯಾದ್ಯಂತ ಆರಂಭಿಸುವ ಉದ್ದೇಶವಿದೆ. ಫೌಂಡೆಷೇನ್‌ನಿಂದ ಉತ್ತರ ಕರ್ನಾಟಕದ 12 ಜಿಲ್ಲೆಗಳಲ್ಲಿ ಒಲಿಂಪಿಕ್ಸ್ ಮಾದರಿ ಕ್ರೀಡೆಯನ್ನು ಜನವರಿಯಲ್ಲಿ ನಡೆಸಲು ನಿರ್ಧರಿಸಿದ್ದೇವೆ ಎಂದ ಸಂತೋಷ ಲಾಡ್, ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಆಭ್ಯರ್ಥಿ ಶ್ರೀನಿವಾಸ್ ಮಾನೆ ಜಯ ಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕ್ಲೀನಿಕ್ ಆನ್ ವ್ಹೀಲ್ಸ್ ಎಂಬ ವೈದ್ಯ ಶಿಬಿರವನ್ನು ಆರಂಭ ಮಾಡಲಾಗಿದ್ದು, ಇದರಿಂದ ಹಳ್ಳಿಗಳ ಕಡೆ ವೈದ್ಯರ ನಡೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದರಲ್ಲಿ ಪ್ರಿಯಾಂಕ ಗಾಂಧಿ, ಸೋನಿಯಾ ಗಾಂಧಿ, ರಾಹುಲ್‌ಗಾಂಧಿ ಹೆಸರಲ್ಲಿ ಮೂರು ರೀತಿಯ ವಾಹನಗಳನ್ನು ಹಳ್ಳಿಗಳ ಕಡೆ ಕಳುಹಿಸಲಾಗಿದೆ. ಈ ವಾಹನದಲ್ಲಿ ನುರಿ ವೈದ್ಯರು ಹಾಗೂ ತಂತ್ರಜ್ಞಾನ ಆಧಾರಿತ ಪ್ರಯೋಗಾಲಯ ಹೊಂದಿದ್ದು, ಎಲ್ಲ ತರಹದ ತಪಾಸಣೆ ಉಚಿತವಾಗಿ ನಡೆಸಲಾಗುವುದು ಎಂದರು.

    ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಮಹ್ಮಮದ್ ರಫೀಕ್, ಯುವ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷ ಸಿದ್ದು ಹಳ್ಳೇಗೌಡ, ಪದಾಧಿಕಾರಿಗಳಾದ ಮುಂಡ್ರಿಗಿ ನಾಗರಾಜ, ಮಾನಯ್ಯ, ಫಾರಂ ವಿಕ್ಕಿ, ಜಿ.ಜೆ.ರಾವಿ ಕುಮಾರ್, ಅರುಣ್ ಕುಮಾರ್, ಕೆ.ತಾಯಪ್ಪ, ಬಿ.ಎಂ.ಪಾಟೀಲ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts