More

    ಕೆನಡಾಗೆ ಹಾರಲಿದೆ ಅಪಘಾತಕ್ಕೀಡಾಗಿದ್ದ ಬೀದಿನಾಯಿ!; ವಿದೇಶಿ ಮಹಿಳೆಯಿಂದ ಬಳ್ಳಾರಿಯ 2 ವರ್ಷದ ಶ್ವಾನ ದತ್ತು

    | ಶ್ರೀಕಾಂತ ಅಕ್ಕಿ ಬಳ್ಳಾರಿ

    ಎರಡು ವರ್ಷದ ಹಿಂದೆ ಬಳ್ಳಾರಿಯಲ್ಲಿ ಅಪಘಾತಕ್ಕೊಳಗಾದ ಬೀದಿ ನಾಯಿಯೊಂದು ಉತ್ತರ ಅಮೆರಿಕ ಖಂಡದ ಕೆನಡಾ ದೇಶಕ್ಕೆ ತೆರಳುವ ಭಾಗ್ಯ ಪಡೆಯುವ ಮೂಲಕ ಗಣಿ ಜಿಲ್ಲೆಯಲ್ಲಿ ಹೃದಯ ರ್ಸ³ ಘಟನೆಗೆ ಸಾಕ್ಷಿಯಾಗಿದೆ. ಕೇವಲ ಅಲ್ಲಿಗೆ ಹೋಗುವುದಷ್ಟೇ ಅಲ್ಲದೆ, ಇನ್ಮುಂದೆ ಅಲ್ಲಿಯೆ ನೆಲೆಸಲಿದೆ.

    ಸದ್ಯ ದೆಹಲಿಯ ಕಣ್ಣನ್ ಅನಿಮಲ್ ವೆಲ್​ಫೇರ್ ಸಂಸ್ಥೆಯ ಆರೈಕೆಯಲ್ಲಿರುವ ಈ ನಾಯಿಗೆ ಅನಂತ್ಯಾ ಎಂದು ಹೆಸರಿಡಲಾಗಿದೆ. ಪಾಸ್​ಪೋರ್ಟ್ ರೆಡಿ ಮಾಡುವ ಜತೆಗೆ ಆರೋಗ್ಯ ಪರೀಕ್ಷೆ ಮಾಡಲಾಗುತ್ತಿದೆ. ದಾಖಲಾತಿ ಪ್ರಕ್ರಿಯೆ ಮುಗಿದ ಕೂಡಲೇ ಕೆನಡಾಗೆ ತೆರಳಲಿದೆ. ಅಲ್ಲಿನ ಮಹಿಳೆಯೊಬ್ಬರು ನಾಯಿಯನ್ನು ದತ್ತು ಪಡೆಯಲು ಮುಂದೆ ಬಂದಿದ್ದು, ನೋಂದಣಿ ಮಾಡಿಸಿದ್ದಾರೆ.

    ಎರಡು ವರ್ಷದ ಹಿಂದೆ ನಗರದ ರೆಡಿಯೋ ಪಾರ್ಕ್ ಬಳಿ ಕಾರಿನ ಕೆಳಗಡೆ ಮೂರು ತಿಂಗಳ ಬೀದಿ ನಾಯಿಮರಿಯೊಂದು ಸಿಲುಕಿ, ಅದರ ಮುಖವೆಲ್ಲ ಜಜ್ಜಿಹೋಗಿತ್ತು. ಈ ವಿಷಯ ಪ್ರಾಣಿಗಳನ್ನು ಸಂರಕ್ಷಣೆ ಮಾಡುವ ನಗರದ ಹ್ಯೂಮನ್ ವರ್ಲ್ಡ್ ಪಾರ್ ಅನಿಮಲ್ಸ್ ಸಂಸ್ಥೆ ಗಮನಕ್ಕೆ ಬಂತು. ಕೂಡಲೇ ನಾಯಿಮರಿಯನ್ನು ರಕ್ಷಿಸಿ, ಬೆಂಗಳೂರು, ಚೆನ್ನೈನಲ್ಲಿ ಚಿಕಿತ್ಸೆ ಕೊಡಿಸಿದ್ದರೂ ಪ್ರಯೋಜನವಾಗಲಿಲ್ಲ. ನಂತರ ಖುದ್ದು ಸಂಸ್ಥೆಯ ಎಸ್.ಎ.ನಿಖಿತಾ, ದೆಹಲಿಗೆ ಹೋಗಿ ಅಲ್ಲಿ ಪ್ರಾಣಿಗಳನ್ನು ಸಂರಕ್ಷಣೆ ಮಾಡುವ ಕಣ್ಣನ್ ಏನಿಮಲ್ ವೆಲ್​ಫೇರ್ ಸಂಸ್ಥೆಯ ನೇತೃತ್ವದಲ್ಲಿ ಉತ್ತಮ ಚಿಕಿತ್ಸೆ ಕೊಡಿಸಿದರು.

    ಅದಾದ ಬಳಿಕ ನಾಯಿಮರಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂತು. ನಂತರ ನಾಯಿಮರಿಯ ಆರೈಕೆ ಮಾಡುತ್ತೇವೆಂದು ಇದೇ ಸಂಸ್ಥೆ ದೆಹಲಿಯಲ್ಲಿ ಉಳಿಸಿಕೊಂಡಿತು. ನಾಯಿಗೆ ಸದ್ಯ ಎರಡು ವರ್ಷ. ಈ ಬೀದಿ ನಾಯಿಮರಿ ನಮಗೆ ಹೇಗೆ ಸಿಕ್ಕಿತು ಎಂಬುದರ ಕುರಿತಾಗಿ ಫೇಸ್​ಬುಕ್​ನಲ್ಲಿ ಅನಿಮಲ್ ವೆಲ್​ಫೇರ್ ಸಂಸ್ಥೆ ಉದ್ಯೋಗಿಯೊಬ್ಬ ಈಚೆಗೆ ಪೋಸ್ಟ್ ಮಾಡಿದ್ದರು. ಇದನ್ನು ಗಮನಿಸಿದ ಕೆನಡಾದ ಮಹಿಳೆ, ಈ ನಾಯಿಯನ್ನು ದತ್ತು ಪಡೆಯುತ್ತೇನೆ ಎಂದು ಮುಂದೆ ಬಂದಿದ್ದಾರೆ.

    ಸಂರಕ್ಷಣೆಯಿಲ್ಲದೆ ಬಳಲುತ್ತಿವೆ ಮೂಕಜೀವಿಗಳು

    ದೇಶ ಮಾತ್ರವಲ್ಲದೆ, ಬಳ್ಳಾರಿಯಲ್ಲಿಯೆ ವಿದೇಶಿ ತಳಿಗಳಾದ ಪಮ್ಮೊರಿಯನ್, ಡಾಲ್, ಬ್ಲಾ್ಯಕ್ ಬರ್ರಿ ಸೇರಿ ಸುಮಾರು 26 ತಳಿಯ ಆರು ಸಾವಿರ ವಿದೇಶಿ ನಾಯಿಗಳನ್ನು ಮನೆಯ ಮಕ್ಕಳಂತೆ ನಾಗರಿಕರು ಸಾಕುತ್ತಿದ್ದಾರೆ. ದುರಂತವೆಂದರೆ ಬೀದಿ ನಾಯಿಗಳಿಗೆ ಒಂದೊತ್ತಿನ ಊಟ ಹಾಕುವವರು ಗತಿಯಿಲ್ಲ. ನಗರದಲ್ಲಿ 20 ಸಾವಿರಕ್ಕೂ ಹೆಚ್ಚು ಬೀದಿ ನಾಯಿಗಳಿದ್ದು, ಸಂರಕ್ಷಣೆಯಿಲ್ಲದೆ ಬಳಲುತ್ತಿವೆ. ಹಲವು ಹಸಿವಿನಿಂದ ಸಾಯುತ್ತಿವೆ. ಇಂತ ಸಂದರ್ಭದಲ್ಲಿ ಸ್ವದೇಶಕ್ಕೆ ಬೇಡವಾದ ನಾಯಿಯೊಂದು ವಿದೇಶಿಗರ ಮಡಿಲಲ್ಲಿ ಆರೈಕೆಯಾಗುವ ಅವಕಾಶ ಪಡೆದಿದೆ.

    ಎರಡು ವರ್ಷದ ಹಿಂದೆ ಬಳ್ಳಾರಿ ನಗರದ ರೆಡಿಯೊ ಪಾರ್ಕ್ ಬಳಿ ಸಿಕ್ಕ ನಾಯಿಮರಿ ಈಗ ಕೆನಡಾ ದೇಶಕ್ಕೆ ಹೊರಡುತ್ತಿದೆ. ಅವತ್ತು ನಾಯಿಗೆ ಚಿಕಿತ್ಸೆ ಕೊಡಿಸಿ, ದೆಹಲಿ ಸಂಸ್ಥೆಯಲ್ಲಿ ಬಿಟ್ಟಿದ್ದವು. ಸದ್ಯ ಇದೇ ನಾಯಿಯನ್ನು ದತ್ತು ತೆಗೆದುಕೊಳ್ಳಲು ಕೆನಡಾದ ಮಹಿಳೆ ಮುಂದಾಗಿದ್ದಾರೆ.

    | ಎಸ್.ಎ.ನಿಖಿತಾ ಕೋ ಫೌಂಡರ್, ಹ್ಯೂಮನ್ ವರ್ಲ್ಡ್ ಫಾರ್ ಅನಿಮಲ್ಸ್, ಬಳ್ಳಾರಿ

    ದಂಪತಿಗೆ ಸೋಂಕು; ಕ್ವಾರಂಟೈನ್ ಕೇಂದ್ರದಲ್ಲೇ ವಿವಾಹ‌ ವಾರ್ಷಿಕೋತ್ಸವ!

    ದೇಶದಲ್ಲಿ ಸೋಂಕಿನ ಪ್ರಮಾಣ ಈಗಿರುವುದೇ ನಿಖರವಲ್ಲ; ಅಸಲಿ ಸಂಖ್ಯೆ ಅದಕ್ಕಿಂತಲೂ 5-10 ಪಟ್ಟು ಅಧಿಕ ಎನ್ನುತ್ತಿದ್ದಾರೆ ಇವರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts