More

    ಬೆಳೆಗಳಿಗೆ ಕನಿಷ್ಠ ಬೆಂಬಲ ಕೊಡಿ; ಸಂಯುಕ್ತ ಹೋರಾಟ-ಕರ್ನಾಟಕ ಸಂಘಟನೆ ಆಗ್ರಹ

    ಬಳ್ಳಾರಿ: ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ(ಎಂಎಸ್‌ಪಿ) ಬೆಲೆ ಒದಗಿಸಲು ಕಾನೂನು ಜಾರಿಮಾಡುವಂತೆ ಒತ್ತಾಯಿಸಿ ಸಂಯುಕ್ತ ಹೋರಾಟ-ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ನಗರದ ಎಪಿಎಂಸಿಯ ಶ್ರಮಿಕರ ಭವನದ ಎದುರು ಭಾನುವಾರ ರೈತರು ಪ್ರತಿಭಟನೆ ನಡೆಸಿದರು.

    ಕೇಂದ್ರ ಸರ್ಕಾರ 2021ರ ಡಿ.9 ರಂದು ಬೆಂಬಲ ಬೆಲೆಗಾಗಿ ಕಾನೂನು ರಚಿಸುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವುದಾಗಿ ಲಿಖಿತವಾಗಿ ಕೊಟ್ಟಿದ್ದ ಭರವಸೆ ಈವರೆಗೂ ಈಡೇರಿಸಿಲ್ಲ. ಇದರ ಜತೆಗೆ ರೈತರ ಮೇಲಿನ ಸುಳ್ಳು ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು. ಲಖೀಂಪುರ್ ಖೇರಿ ರೈತರ ಹತ್ಯಾಕಾಂಡದ ಪ್ರಮುಖ ಪಿತೂರಿ ಆರೋಪಿ ಅಜಯ್ ಮಿಶ್ರಾರನ್ನು ಕೇಂದ್ರ ಸಂಪುಟದಿಂದ ವಜಾಗೊಳಿಸಿ, ಅಪರಾಧಿಗಳನ್ನು ಶಿಕ್ಷಿಸಬೇಕು. ಐತಿಹಾಸಿಕ ದೆಹಲಿ ಹೋರಾಟದಲ್ಲಿ ಮೃತಪಟ್ಟಿರುವ ರೈತರ ಕುಟುಂಬಗಳಿಗೆ ಪರಿಹಾರವನ್ನು ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

    ಸಂಘಟನೆಯ ಪದಾಧಿಕಾರಿಗಳಾದ ಈರಣ್ಣ, ಗುರಳ್ಳಿರಾಜ, ಬಸವರಾಜ್, ಹನುಮಂತ, ಮಂಜು, ಆನಂದ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts