More

    ಆಯುಧ ಪೂಜೆಗೆ ಖರೀದಿಯ ಭರಾಟೆ

    ಬಳ್ಳಾರಿ: ನಾಡಹಬ್ಬ ವಿಜಯದಶಮಿಯ ಅಂಗವಾಗಿ ಮಂಗಳವಾರ ಆಯುಧ ಪೂಜೆಗಾಗಿ ಅಗತ್ಯ ವಸ್ತುಗಳ ಬೆಲೆಗಳ ಏರಿಕೆ ನಡುವೆಯೂ ಜನರಿಂದ ಅಗತ್ಯ ವಸ್ತುಗಳ ಖರೀದಿ ಭರಾಟೆಯಿಂದ ನಡೆಯಿತು.

    ವಿಜಯದಶಮಿ ಹಬ್ಬದ ಮುನ್ನಾದಿನ ಆಯುಧ ಪೂಜೆ ಇದ್ದು, ಮನೆಗಳಲ್ಲಿನ ವೃತ್ತಿ ಸಂಬಂಧಿತ ಪರಿಕರಗಳು, ವಸ್ತುಗಳು, ವಾಹನಗಳು ಇತರ ಸಲಕರಣೆಗಳನ್ನು ಆಯುಧಗಳೆಂದೇ ಭಾವಿಸಿ, ಪೂಜೆ ಸಲ್ಲಿಸಲು ಸನ್ನದ್ಧರಾಗಿದ್ದಾರೆ. ಇದಕ್ಕಾಗಿ ಹೂವು, ಹಣ್ಣು, ಮಾವಿನೆಲೆ, ಬಾಳೆಕಂಬ, ವೀಳ್ಯದೆಲೆ, ತೆಂಗಿನಕಾಯಿ, ಕುಂಬಳಕಾಯಿ, ತರಕಾರಿ, ಅಲಂಕಾರಿಕ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದು, ಸೋಮವಾರ ಕಂಡುಬಂತು. ನಗರದ ಕನಕದುರ್ಗಮ್ಮ ದೇವಸ್ಥಾನ ಆವರಣ, ಬೆಂಗಳೂರು ರಸ್ತೆ, ಮೋತಿ ವೃತ್ತ, ಕೌಲ್‌ಬಜಾರ್ ಪ್ರದೇಶಗಳಲ್ಲಿ ವ್ಯಾಪಾರ-ವಹಿವಾಟು ಜೋರಾಗಿ ನಡೆಯಿತು.

    ಗೋಡಂಬಿಯಿಂದ ದೇವಿ ಮೂರ್ತಿ ಅಲಂಕಾರ
    ಕಂಪ್ಲಿ: ಪಟ್ಟಣದ ಇಂದಿರಾನಗರದ ಬನ್ನಿಮಹಾಕಾಳಿ ದೇವಸ್ಥಾನದಲ್ಲಿ ದಸರಾ ನಿಮಿತ್ತ ಬನ್ನಿಮಹಾಕಾಳಿದೇವಿಯ ಮೂರ್ತಿಯನ್ನು ಸೋಮವಾರ ಗೋಡಂಬಿಯಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಅರ್ಚಕ ಗಿರೀಶ ಆಚಾರ್ ಪೌರೋಹಿತ್ಯದಲ್ಲಿ ಚಂಡಿ ಹೋಮ ನಡೆಯಿತು. ಪ್ರಧಾನ ಅರ್ಚಕ ಶ್ರೀನಿವಾಸ ನೇತೃತ್ವದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬನ್ನಿಮಹಾಂಕಾಳಿ ದೇವಸ್ಥಾನ ಸಮಿತಿ ಅಧ್ಯಕ್ಷ ಸಿ.ಎಚ್.ವೆಂಕಟೇಶ್ವರರಾವ್, ಪ್ರಮುಖರಾದ ಸುಬ್ರಹ್ಮಣ್ಯಂ, ಪಿ.ನಾಗೇಶ, ಪ್ರಭಾಕರರೆಡ್ಡಿ, ಕೆ.ಪ್ರಕಾಶ ಇತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts