More

    ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಆಗಮನ ಹಿನ್ನೆಲೆ ಗಡಿಯಲ್ಲಿ ಬಿಗಿ ‌ಪೊಲೀಸ್ ಬಂದೋಬಸ್ತ್​

    ಚಿಕ್ಕೋಡಿ: ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಆಗಮನ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಬೆಳಗಾವಿ ಗಡಿಯಲ್ಲಿ ಬಿಗಿ ‌ಪೊಲೀಸ್ ಬಂದೋಬಸ್ತ್​ ಏರ್ಪಡಿಸಲಾಗಿದೆ.

    ನಿಪ್ಪಾಣಿ ತಾಲೂಕು ಒಂದರಲ್ಲಿಯೇ 6 ಕೆಎಸ್​ಆರ್​ಪಿ ತುಕಡಿ ನಿಯೋಜಿಸಲಾಗಿದೆ. ಕುಗನೊಳ್ಳಿ ಚೆಕ್​​ಪೋಸ್​​ಗೆ ಒಬ್ಬರು ಎಸ್​ಪಿ, ಒಬ್ಬರು ಹೆಚ್ಚುವರಿ ಎಸ್​ಪಿ, ಮೂವರು ಡಿಎಸ್​ಪಿ, 8 ಮಂದಿ ಪಿಐ, 30 ಮಂದಿ ಪಿಎಸ್​ಐ, 5 ಡಿಆರ್ ತುಕಡಿ ಹಾಗೂ 450 ಪೊಲೀಸ್​ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

    ಚಿಕ್ಕೋಡಿ ಉಪವಿಭಾಗದಲ್ಲಿನ 20 ಚೆಕ್​ಪೋಸ್ಟಗಳಿಗೆ ನಾಕಾ ಬಂಧಿ ಹಾಕಲಾಗಿದೆ. ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಎಲ್ಲ ದಾರಿಯಲ್ಲೂ ಸಹ ನಾಕಾ ಬಂಧಿ ಇರಿಸಲಾಗಿದ್ದು, ಗಡಿಗೆ ಎಂಟ್ರಿ ಕೊಡುತ್ತಿರುವ ಪ್ರತಿಯೊಂದು ವಾಹನಗಳನ್ನು ಪೊಲೀಸರು ತೀವ್ರ ತಪಾಸಣೆ ಮಾಡುತ್ತಿದ್ದಾರೆ.

    ಗಡಿ ವಿಚಾರವಾಗಿ ಮಹಾರಾಷ್ಟ್ರ ಸರ್ಕಾರ ಹೊಸ ಖ್ಯಾತೆ ತೆಗೆದಿದೆ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಹೇಳುತ್ತಿದೆ. ಆದರೆ, ವಾಸ್ತವ ಏನೆಂದರೆ, ಮಹಾರಾಷ್ಟ್ರದಲ್ಲಿರುವ ಅನೇಕ ಗಡಿ ಗ್ರಾಮಗಳು ಅಭಿವೃದ್ಧಿಯಿಂದ ವಂಚಿತವಾಗಿದ್ದು, ಕರ್ನಾಟಕಕ್ಕೆ ಸೇರ್ಪಡೆಯಾಗಲು ಬಯಸಿವೆ. ವಿವಾದದ ನಡುವೆ ಮಹಾರಾಷ್ಟ್ರ ಸರ್ಕಾರದ ಸಚಿವರು ಬೆಳಗಾವಿಗೆ ಬರುತ್ತಿದ್ದು, ಗಲಾಟೆಯಾಗುವ ಸಾಧ್ಯತೆಯಿರುವ ಕಾರಣ ಪೊಲೀಸ್​ ಬಂದೋಬಸ್ತ್​ ಮಾಡಲಾಗಿದೆ. (ದಿಗ್ವಿಜಯ ನ್ಯೂಸ್​)

    ಕಾಂತಾರ ಮತ್ತು ರಿ‍ಷಭ್ ಶೆಟ್ಟಿ ಬಗ್ಗೆ ನಟಿ ಅನಸೂಯ ಭಾರದ್ವಜ್​ ಮಾಡಿದ ಕಾಮೆಂಟ್​ ವೈರಲ್​!

    ಅವಳಿ ಸಹೋದರಿಯರನ್ನು ಮದ್ವೆಯಾದ ಬೆನ್ನಲ್ಲೇ ಯುವಕನಿಗೆ ಬಿಗ್​ ಶಾಕ್​! ವೈರಲ್​ ವಿಡಿಯೋದಿಂದ ಎದುರಾಯ್ತು ಸಂಕಷ್ಟ

    ಯುವಕನಿಂದ ಖಾಸಗಿ ಅಂಗಗಳ ಸ್ಪರ್ಶ! ಹಳದಿ ಬಣ್ಣದ ಬಟ್ಟೆಗೆ ಹೆದರುವ ನಟಿ ಐಶ್ವರ್ಯಾರ ನೋವಿನ ಕತೆಯಿದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts