More

    Web Exclusive | ಸಕ್ಕರೆ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ; 2ನೇ ರಾಜಧಾನಿ ಬೆಳಗಾವಿಯಲ್ಲಿ ಬಿಜೆಪಿಗೆ ಭೀಮಬಲ

    ರಾಯಣ್ಣ ಆರ್.ಸಿ. ಬೆಳಗಾವಿ

    ಒಂದು ಕಾಲಕ್ಕೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಸಕ್ಕರೆ ಜಿಲ್ಲೆ ಬೆಳಗಾವಿಯಲ್ಲೀಗ ಬಿಜೆಪಿಯದ್ದೇ ಪಾರುಪತ್ಯ. ಜಿಲ್ಲೆಯ 18 ಶಾಸಕರ ಪೈಕಿ 13 ಶಾಸಕರು ಬಿಜೆಪಿಗರೇ ಆಗಿದ್ದು, ಬೆಳಗಾವಿಯ ಕಮಲಪಡೆ ನಾಯಕರಿಗೆ ಭೀಮಬಲ ಬಂದಂತಾಗಿದೆ. ಬಿಎಸ್​ವೈ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಹುಕ್ಕೇರಿ ಶಾಸಕ ಉಮೇಶ ಕತ್ತಿ ಅವರಿಗೂ ಸಚಿವ ಸ್ಥಾನ ಲಭಿಸಿದ್ದು, ಜಿಲ್ಲೆಯಲ್ಲಿರುವ ಸಚಿವರ ಸಂಖ್ಯೆ ಈಗ 5ಕ್ಕೇರಿದೆ.

    ಕಳೆದ ಬಾರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬೆಜೆಪಿ ಸರ್ಕಾರ ರಚನೆ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸೇರಿ ಅನೇಕ ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿಗೆ ಆಗಮಿಸಿ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಂಡಿದ್ದು ಈಗ ಇತಿಹಾಸ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಿಲ್ಲೆಯ ಬಹುತೇಕ ಎಲ್ಲ ಶಾಸಕರಿಗೆ ಒಂದಿಲ್ಲೊಂದು ರೀತಿಯಲ್ಲಿ ಅಧಿಕಾರ ಮತ್ತು ಅನುದಾನ ನೀಡುತ್ತಿದ್ದಾರೆ. ಆದರೂ ಗ್ರಾಪಂ ಚುನಾವಣೆಯಲ್ಲಿ ಕೆಲ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ. ಶೀಘ್ರದಲ್ಲಿಯೇ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯತಿ ಹಾಗೂ ಮಹಾನಗರ ಪಾಲಿಕೆ ಚುನಾವಣೆ ಜರುಗಲಿವೆ. ಹೀಗಾಗಿ ಬೇರು ಮಟ್ಟದಲ್ಲಿ ಬಿಜೆಪಿ ಮತ್ತಷ್ಟು ಗಟ್ಟಿಕೊಳ್ಳಬೇಕಾಗಿದೆ.

    ಸಚಿವ ಸ್ಥಾನದ ವಿಚಾರವಾಗಿ ಬೆಂಗಳೂರು ಬಿಟ್ಟರೆ ಎಲ್ಲ ಜಿಲ್ಲೆಗಳಿಗಿಂತ ಬೆಳಗಾವಿಗೆ ಹೆಚ್ಚು ಪ್ರಾತಿನಿಧ್ಯ ನೀಡಲಾಗಿದೆ. ಇದು ಬೇರೆ ಜಿಲ್ಲೆಯ ಶಾಸಕರ ಆಕ್ರೋಶಕ್ಕೂ ಕಾರಣವಾಗಿದೆ. ಬಿಜೆಪಿ 10 ಶಾಸಕರು ವಿವಿಧ ನಿಗಮ ಮಂಡಳಿಗಳಲ್ಲಿದ್ದಾರೆ. ಬಿಜೆಪಿ ಮುಖಂಡ ಈರಣ್ಣ ಕಡಾಡಿ ಅವರಿಗೂ ಕೆಲ ತಿಂಗಳ ಹಿಂದಷ್ಟೇ ರಾಜ್ಯಸಭಾ ಸದಸ್ಯ ಸ್ಥಾನ ನೀಡಲಾಗಿದೆ.

    ಯಾರಿಗೆ ಯಾವ ಹುದ್ದೆ?

    1) ಲಕ್ಷ್ಮಣ ಸವದಿ- ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ 2) ರಮೇಶ ಜಾರಕಿಹೊಳಿ- ಜಲಸಂಪನ್ಮೂಲ ಸಚಿವ, 3)ಉಮೇಶ ಕತ್ತಿ- ನೂತನ ಸಚಿವ 4) ಶ್ರೀಮಂತ ಪಾಟೀಲ- ಜವಳಿ ಸಚಿವ, 5) ಶಶಿಕಲಾ ಜೊಲ್ಲೆ- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ 6) ಆನಂದ ಮಾಮನಿ- ವಿಧಾನಸಭಾ ಉಪಸಭಾಧ್ಯಕ್ಷ 7) ಮಹಾಂತೇಶ ಕವಟಗಿಮಠ- ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ, 8) ಬಾಲಚಂದ್ರ ಜಾರಕಿಹೊಳಿ- ಕೆಎಂಎಫ್ ಅಧ್ಯಕ್ಷ 9) ಪಿ.ರಾಜೀವ- ಬಂಜಾರ ಅಭಿವೃದ್ಧಿ ನಿಗಮ ಅಧ್ಯಕ್ಷ 10) ಮಹೇಶ ಕುಮಠಳ್ಳಿ- ಕೊಳೆಗೇರಿ ನಿಗಮ ಮಂಡಳಿ ಅಧ್ಯಕ್ಷ 11) ಶಂಕರಗೌಡ ಪಾಟೀಲ- ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, 12) ಮಾಜಿ ಶಾಸಕ ವಿಶ್ವನಾಥ ಪಾಟೀಲ- ಕಾಡಾ ಅಧ್ಯಕ್ಷ, ಬೆಳಗಾವಿ 13) ಧುರ್ಯೋದನ ಐಹೊಳೆ- ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ ಅಧ್ಯಕ್ಷ 14) ಈರಣ್ಣ ಕಡಾಡಿ- ರಾಜ್ಯಸಭಾ ಸದಸ್ಯ

    ಹುಕ್ಕೇರಿಯಿಂದ ಏಳು ಬಾರಿ ಗೆದ್ದಿರುವ ಉಮೇಶ ಕತ್ತಿ ಅವರು ವಿಧಾನಸಭೆಯ ಹಿರಿಯ ಸದಸ್ಯರಲ್ಲಿ ಒಬ್ಬರು. ಅವರಿಗೆ ಸಚಿವ ಸ್ಥಾನ ನೀಡಿರುವುದು ಸ್ವಾಗತಾರ್ಹವಾಗಿದೆ.

    | ರಮೇಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಸಚಿವ

    ನಿವೃತ್ತ ಸೈನಿಕರ ಪುತ್ರಿಯನ್ನೇ ಅಪಹರಿಸಿ ಮತಾಂತರಿಸಿದನಾ ಕರ್ನಾಟಕದ ಈ ವ್ಯಕ್ತಿ?!

    ಈ ವಿಷಯದಲ್ಲಿ ಬೆಂಗಳೂರು ದೇಶದಲ್ಲೇ 2ನೇ ಹಾಗೂ ಜಗತ್ತಿನಲ್ಲೇ 6ನೇ ಕೆಟ್ಟ ನಗರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts