More

    ಕರೊನಾ ವಿರುದ್ಧ ಹೋರಾಡುತ್ತಿರುವ ಪತಿಗಾಗಿ ಮಿಡಿಯಿತು ಪೊಲೀಸ್​ ಪತ್ನಿಯ ಮನಸ್ಸು: ನಡದೇ ಸಾಗಿದಳು!

    ಬೆಳಗಾವಿ: ಕರೊನಾ ನಿಯಂತ್ರಿಸಲು ಹೇರಲಾಗಿರುವ ವೀಕೆಂಡ್ ಲಾಕ್​ಡೌನ್​ ಹಿನ್ನೆಲೆಯಲ್ಲಿ ಕೋವಿಡ್​-19 ಭೀತಿಯ ನಡುವೆಯೂ ಕರ್ತವ್ಯ ನಿರ್ವಹಿಸುತ್ತಿರುವ ತನ್ನ ಪತಿಯ ಆರೋಗ್ಯಕ್ಕಾಗಿ ಬೆಳಗಾವಿ ಮಹಿಳೆ ವಹಿಸಿದ ಕಾಳಜಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

    ಇದನ್ನೂ ಓದಿ: ರಾಜ್ಯದ ಜನತೆಗೆ ಆತಂಕ ಬೇಡ, ಮತ್ತೆ ಲಾಕ್ ಡೌನ್ ಇಲ್ಲ: ಗೃಹ ಸಚಿವ ಬಸವರಾಜ ಬೊಮ್ಮಾಯಿ

    ಲಾಕ್​ಡೌನ್​ ಹಿನ್ನೆಲೆಯಲ್ಲಿ ಹೊಟೆಲ್, ಶಾಪ್ ಎಲ್ಲವೂ ಬಂದ್​ ಆಗಿರುವ ಹಿನ್ನಲೆಯಲ್ಲಿ ಪತಿ ಊಟಕ್ಕಾಗಿ ಪರದಾಡಬಾರದೆಂದು ಸುಮಾರು 6 ಕಿ.ಮೀ ನಡೆದುಕೊಂಡು ಬಂದು ಪತಿಗೆ ಟಿಫನ್​ ನೀಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ಟ್ರಾಫಿಕ್ ಪೊಲೀಸ್ ಅಲ್ಲಿಖಾನ್ ಬೆಳಗಾವಿಯ ಎಂಡಿಕೂಟ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕರೊನಾ ಭೀತಿಯ ನಡುವೆ ಪತಿ ಹಸಿವಿನಿಂದ ಬಳಲಬಾರದೆಂಬ ಕಾಳಜಿಯಿಂದ ಪತ್ನಿ ನೂರ್​ಜಹನ್, ತಿಂಡಿ ತಯಾರಿಸಿಕೊಂಡು ಬೆಳಗಾವಿಯ ಎಪಿಎಂಸಿ ಮಾರ್ಕೆಟ್ ಯಾರ್ಡ್​ನಿಂದ 6 ಕಿ.ಮೀ ದೂರವಿರುವ ಎಂಡಿಕೂಟ್​ವರೆಗೆ ನಡೆದುಕೊಂಡ ಬಂದು ಪತಿಗೆ ತಿಂಡಿ ನೀಡಿದ್ದಾರೆ.

    ಇದನ್ನೂ ಓದಿ: VIDEO| ಬೆಂಗಳೂರಿನಲ್ಲೊಂದು ಮನಕಲಕುವ ಘಟನೆ: ಬದುಕು ಇಷ್ಟೇನಾ ಎನಿಸುವಂತಹ ದೃಶ್ಯವಿದು

    ಪತ್ನಿ ನೀಡಿದ ತಿಂಡಿಯನ್ನು ತಿಂದು ಟ್ರಾಫಿಕ್​ ಪೊಲೀಸ್​ ಅಲಿಖಾನ್​ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಕುಟುಂಬದಿಂದ ದೂರವಿದ್ದು, ಕರೊನಾ ನಿಯಂತ್ರಣದಲ್ಲಿ ಹೋರಾಡುತ್ತಿರುವ ಪೊಲೀಸರ ಶ್ರಮಕ್ಕೆ ಒಂದು ಸಲಾಂ ಹೇಳಲೇಬೇಕು. (ದಿಗ್ವಿಜಯ ನ್ಯೂಸ್​)

    ದಿನಕ್ಕೆ 24 ಕಿ.ಮೀ. ಸೈಕಲ್​ ತುಳಿದು ಶೇ.98.5 ಅಂಕಗಳ ಗುರಿ ಸಾಧಿಸಿದಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts