More

    ಬೆಂಗಳೂರಿನಲ್ಲಿ ಶಾಲಾ ಶುಲ್ಕದ ಹೆಸರಲ್ಲಿ ಮಕ್ಕಳನ್ನು ಭಿಕ್ಷೆಗೆ ಕಳುಹಿಸುವ ದಂಧೆ

    ಬೆಂಗಳೂರು : ನಗರದಲ್ಲಿ ಮಕ್ಕಳು ಹೊಸ ರೀತಿಯಲ್ಲಿ ಭಿಕ್ಷೆ ಬೇಡಲು ಆರಂಭಿಸಿದ್ದಾರೆ. ಇಷ್ಟು ದಿನ ಗೊಂಬೆ, ಪೆನ್ನು ಮಾರಾಟ ಮಾಡಿಕೊಂಡು ಭಿಕ್ಷೆ ಬೇಡುತ್ತಿದ್ದ ಮಕ್ಕಳು ಇದೀಗ ಶಾಲೆಗೆ ಶುಲ್ಕ ಪಾವತಿಸಲು ಸಹಾಯ ಮಾಡಿ ಎಂದು ಭಿಕ್ಷೆ ಬೇಡಲು ಆರಂಭಿಸಿದ್ದಾರೆ.

    ಕೆಲವು ದೃಷ್ಕರ್ವಿುಗಳು ಮಕ್ಕಳನ್ನು ಬಳಸಿಕೊಂಡು ಈ ರೀತಿಯ ಕೃತ್ಯಕ್ಕೆ ಮುಂದಾಗಿದ್ದಾರೆ. ಮಕ್ಕಳು ರಸ್ತೆಗಳಲ್ಲಿ ಹೆಸರು, ಅಪ್ಪ-ಅಮ್ಮನ ವಿವರ ಹಾಗೂ ಶಾಲೆಯ ಹೆಸರು ಬಳಸಿಕೊಂಡು ಶುಲ್ಕ ಪಾವತಿಸಲು ಹಣ ನೀಡುವಂತೆ ವಾಹನ ಸವಾರರನ್ನು ಪೀಡಿಸುತ್ತಿದ್ದಾರೆ. ಸದ್ಯ ಶಾಲೆಗಳು ಆರಂಭವಾಗಿಲ್ಲ. ಖಾಸಗಿ ಶಾಲೆಗಳು ಮಾತ್ರ ಮೊದಲ ಕಂತಿನ ಶುಲ್ಕ ವನ್ನು ಪಾಲಕರಿಂದ ಪಡೆದುಕೊಳ್ಳಬಹುದು ಎಂದು ಸರ್ಕಾರ ಆದೇಶ ನೀಡಿದೆ.

    ಇದನ್ನೂ ಓದಿ: ಪ್ರತಿಭಟನೆ ಹಿಂಸೆಗೆ ತಿರುಗಿಸುವ ಹುನ್ನಾರ: ಟ್ರ್ಯಾಕ್ಟರ್​ ಸುಟ್ಟು ಭಸ್ಮ ಮಾಡಿದ ಕಿಡಿಗೇಡಿಗಳು

    ಮಕ್ಕಳು ಭಿಕ್ಷೆ ಬೇಡುವುದು ಅವರ ಹಕ್ಕುಗಳ ವಿರುದ್ಧವಾಗಿದೆ. ಮಕ್ಕಳ ನ್ಯಾಯ(ರಕ್ಷಣೆ- ಪೋಷಣೆ) ಕಾಯ್ದೆ 2015ರ ಪ್ರಕಾರ ಮಕ್ಕಳು ಭಿಕ್ಷೆ ಬೇಡಲು ಕಳುಹಿಸುವವರನ್ನು ಶಿಕ್ಷೆಗೆ ಗುರುಪಡಿಸಬೇಕು. ಸಾರ್ವಜನಿಕರಿಗೆ ಈ ರೀತಿಯ ಮಕ್ಕಳು ಕಂಡು ಬಂದರೆ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ ನಾವು ಮಕ್ಕಳನ್ನು ರಕ್ಷಿಸುತ್ತೇವೆ.ಮಕ್ಕಳು ಭಿಕ್ಷೆ ಬೇಡುವ ಬಗ್ಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ದೂರು ನೀಡಿದ್ದೇವೆ ಎನ್ನುತ್ತಾರೆ ಚೈಲ್ಡ್ ರೈಟ್ಸ್ ಟ್ರಸ್ಟ್​ನ ಸಂಚಾಲಕ ನಾಗಸಿಂಹ ಜಿ.ರಾವ್.

    ಹತ್ತೇ ನಿಮಿಷಕ್ಕೆ ಏರ್​ಪೋರ್ಟ್ ಪ್ರಯಾಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts