More

    ಜಿಲ್ಲೆಯಲ್ಲಿ ಭಿಕ್ಷಾಟನೆ ನಿಮೂರ್ಲನೆಗೆ ಕ್ರಮ

    ಕೋಲಾರ: ಜಿಲ್ಲೆಯಲ್ಲಿ ಭಿಕ್ಷಾಟನೆ ತಡೆಗಟ್ಟಲು ಸಮಾಜ ಕಲ್ಯಾಣ ಇಲಾಖೆ ಹಾಗೂ ನಿರಾಶ್ರಿತರ ಪರಿಹಾರ ಕೇಂದ್ರದ ಅಧಿಕಾರಿಗಳು ಕ್ರಮ ಕೈಗೊಂಡಿದ್ದು, ಕಾರ್ಯಾಚರಣೆ ನಡೆಸಿ ಭಿಕ್ಷುಕರನ್ನು ಹಿಡಿದು ನಿರಾಶ್ರಿತ ಕೇಂದ್ರಕ್ಕೆ ದಾಖಲು ಮಾಡುತ್ತಿದ್ದಾರೆ.

    ಜ.14ರಂದು ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಭಿಕ್ಷಾಟನೆ ಎಂಬ ಶೀರ್ಷಿಕೆಯಡಿ ವಿಜಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟಿಸಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ನಿರಂತರ ಕಾರ್ಯಾಚರಣೆ ನಡೆಸಿ ಭಿಾಟನೆಯಲ್ಲಿ ತೊಡಗಿರುವವರನ್ನು ಬಂಧಿಸಿ ನಿರಾಶ್ರಿತರ ಕೇಂದ್ರಕ್ಕೆ ಕಳುಹಿಸುತ್ತಿದ್ದಾರೆ.
    ಭಿಕ್ಷಾಟನೆ ಕಾಯ್ದೆ- 1975ರ ಅನ್ವಯ ಬೀರಾಂಡಿಹಳ್ಳಿ ಸಮೀಪ ನಿರಾಶ್ರಿತರ ಪರಿಹಾರ ಕೇಂದ್ರ ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲೆಯ ದೇವಸ್ಥಾನ, ಮಸೀದಿಗಳು, ಚರ್ಚ್​ಗಳು, ಜನಸಂದಣಿ ಇರುವ ಸ್ಥಳಗಳು, ಬಸ್​ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವವರನ್ನು ವಾರದಲ್ಲಿ 3&4 ದಿನ ಕಾರ್ಯಾಚರಣೆ ನಡೆಸಿ ನಿರಾಶ್ರಿತ ಕೇಂದ್ರಕ್ಕೆ ದಾಖಲಿಸಲಾಗುತ್ತಿದೆ.
    ಕಳೆದ ಮೂರು ತಿಂಗಳಲ್ಲಿ 413 ನಿರಾಶ್ರಿತರ ಪೈಕಿ 49 ಮಂದಿಯನ್ನು ಕೇಂದ್ರಕ್ಕೆ ಕರೆ ತಂದು ಪೋಷಿಸಲಾಗಿದೆ. ಆ ನಂತರ 49 ಮಂದಿಯನ್ನು ಬಿಡುಗಡೆ ಮಾಡಿ ವಾರಸುದಾರರ ಜತೆ ಮನೆಗಳಿಗೆ ಕಳುಹಿಸಿಕೊಡಲಾಗಿದೆ.
    ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಉಪಸ್ಥಿತಿಯಲ್ಲಿ ನಗರ ಬಸ್​ ನಿಲ್ದಾಣ, ಸೋಮೇಶ್ವರ ದೇವಸ್ಥಾನ, ಕೋಲಾರಮ್ಮನ ದೇವಸ್ಥಾನದ ಬಳಿ ಕೇಂದ್ರದ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿದ್ದು, ಬಸ್​ ನಿಲ್ದಾಣದಲ್ಲಿ ಒಬ್ಬ ವೃದ್ದೆ ಹಾಗೂ 3 ಜನ ಗಂಡಸರು ಭಿಕ್ಷುಕರನ್ನು ಬಂಧಿಸಲಾಗಿದೆ.
    ಕೋಲಾರದ ಮಸೀದಿ ಮುಂಭಾಗ ಶುಕ್ರವಾರ ಬಿಕ್ಷುಕರ ಸಂಖ್ಯೆ ಅಧಿಕವಾಗಿದ್ದು, ಅಂದು ಅವರನ್ನು ಬಂಧಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾರ್ಯಾಚರಣೆ ವೇಲೇ ಬಂದೋಬಸ್ತ್​ ನೀಡಲು ಸಿಪಿಐಗೆ ಪತ್ರ ಬರೆಯಲಾಗಿದೆ.

    ಭಿಕ್ಷಾಟನೆಯೇ ಕೆಲವರ ವೃತ್ತಿ
    ಬಂಧಿಸಿ ತಂದ ನಿರಾಶ್ರಿತರಲ್ಲಿ ಜಿಲ್ಲೆಯ ವಿವಿಧ ತಾಲೂಕು ವ್ಯಾಪ್ತಿಯ ಹಳ್ಳಿಗಳ ವೃದ್ಧರು ಭಿಕ್ಷೆ ಬೇಡುವುದನ್ನು ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಅವರನ್ನು ಬಂಧಿಸಿ ಕೇಂದ್ರಕ್ಕೆ ತಂದಾಗ ಮರುದಿನವೇ ತಹಸೀಲ್ದಾರರಿಂದ ಆದೇಶ ಮಾಡಿಸಿ ಕೊಂಡು ತಾವೇ ವಾರಸುದಾರರು ಎಂಬುದಾಗಿ ಮಾಹಿತಿ ನೀಡಿ ಭಿಕ್ಷುಕರನ್ನು ಬಿಡಿಸಿಕೊಂಡು ಹೋಗುತ್ತಿರುತ್ತಾರೆ. ಮತ್ತೆ ಕೆಲವು ದಿನಗಳ ಬಳಿಕ ಭಿಕ್ಷಾಟನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಬಿಡುಗಡೆಯಾದ ನಂತರವೂ ಮತ್ತೆ ಅವರು ಭಿಕ್ಷಾಟನೆಯಲ್ಲಿ ತೊಡಗಿಸಿಕೊಂಡರೆ ಕಾನೂನು ಪ್ರಕಾರ ಕ್ರಮವಹಿಸಲು ಅಧಿಕಾರಿಗಳು ಚಿಂತಿಸಿದ್ದಾರೆ. ಬಂಧಿಸಿ ತಂದ ನಿರಾಶ್ರಿತರಿಗೆ ಊಟ- ಉಪಹಾರ, ವಸತಿ ಬಟ್ಟೆ, ಹಾಸಿಗೆ ಹೊದಿಕೆ ವ್ಯವಸ್ಥೆ ಮಾಡಲಾಗಿದೆ.

    ಕೌಶಲ ಕುರಿತು ತರಬೇತಿ
    ನಿರಾಶ್ರಿತರಿಗೆ ಪ್ರತಿದಿನ ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ ಇದೆ. ಮನರಂಜನೆಗಾಗಿ ಟಿವಿ ಅಳವಡಿಸಲಾಗಿದೆ. ಕೆನರಾಬ್ಯಾಂಕ್​ ಗ್ರಾಮೀಣ ಸ್ವಯಂ ಉದ್ಯೋಗ ಸಂಸ್ಥೆಯಿಂದ ನಿರಾಶ್ರಿತರಿಗೆ ಫಿನಾಯಿಲ್​, ಸಬೀನಾ ಪೌಡರ್​, ವಾಷಿಂಗ್​ ಪೌಡರ್​, ಪೇಪರ್​ ಬ್ಯಾಗ್ಸ್​ ತಯಾರಿಕೆ ತರಬೇತಿ ನೀಡಲಾಗುತ್ತಿದೆ.

    ಜಿಲ್ಲೆಯಲ್ಲಿ ಭಿಕ್ಷಾಟನೆ ನಿಮೂರ್ಲನೆಗೆ ಕ್ರಮ
    ಕೋಲಾರ ನಿರಾಶ್ರಿತರ ಪರಿಹಾರ ಕೇಂದ್ರದ ಅಧ್ಯಕ್ಷರಾದ ಜಿಲ್ಲಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಕೇಂದ್ರಕ್ಕೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿ ಸೂಚನೆ ನೀಡುತ್ತಿರುತ್ತಾರೆ. ಕೇಂದ್ರವು ಭಿಕ್ಷಾಟನೆಯನ್ನು ನಿಷೇಧ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ.
    ಮಂಜುನಾಥ್​, ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts