More

    ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಭಿಕ್ಷಾಟನೆ

    ಕಿರುವಾರ ಎಸ್​.ಸುದರ್ಶನ್​ ಕೋಲಾರ
    ನಗರದಲ್ಲಿ ಮಕ್ಕಳ ಭಿಕ್ಷಾಟನೆ ಹೆಚ್ಚಾಗಿದ್ದು, ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ.
    ಕಂದಮ್ಮನನ್ನು ಎದೆಗಪ್ಪಿಕೊಂಡು ಬೇಡುವ ತಾಯಂದಿರು, ಇಳಿವಯಸ್ಸಿನಲ್ಲಿ ದೇಗುಲಗಳ ಮುಂದೆ ಕೈಯೊಡ್ಡುವ ವೃದ್ಧರು, ಕಾಲಿಲ್ಲ, ಕೈಯಿಲ್ಲ ಎಂದು ಸಿಗ್ನಲ್​ನಲ್ಲಿ ಸಹಾಯ ಮಾಡಿ ಎಂದು ಕೆಲವರು… ಇದು ಕೋಲಾರ ನಗರ ಸೇರಿ ವಿವಿಧೆಡೆ ಕಂಡುಬರುವ ಭಿಕ್ಷಾಟನೆಯ ದೃಶ್ಯಗಳು…

    ಹೋಟೆಲ್​ಗಳು, ಬಸ್​ ನಿಲ್ದಾಣ, ಸಿಗ್ನಲ್​, ರೈಲ್ವೆ ನಿಲ್ದಾಣ, ದೇಗುಲಗಳ ಮುಂದೆ ಭಿಾಟನೆ ಹೆಚ್ಚಾಗಿ ನಡೆಯುತ್ತದೆ. ನಿಮಗೆ ಹಣದ ಬದಲು ತಿಂಡಿ, ಊಟ ಕೊಡಿಸುತ್ತೇವೆ, ತೆಗೆದುಕೊಳ್ಳಿ ಎಂದಾಗ ಬೇಡ ಎಂದು ಸಬೂಬು ಹೇಳಿ ಹಣಕ್ಕೆ ಬೇಡಿಕೆ ಇಡುತ್ತಾರೆ. ಹಣ ನೀಡಲು ನಿರಾಕರಿಸಿದಾಗ ಮದ್ಯ ಸೇವನೆಗೆ ತಾನೆ ಕೇಳುತ್ತಿರುವುದು ಎಂದು ಆಕ್ಷೇಪ ವ್ಯಕ್ತಪಡಿಸಿದರೆ ಮೌನವಾಗಿ ವಾಪಸ್​ ಹೋಗುತ್ತಾರೆ.
    ಬಸ್​ ನಿಲ್ದಾಣ, ದೇವಾಲಯ, ಸಂತೆ, ರೈಲ್ವೆ ನಿಲ್ದಾಣ, ಆಸ್ಪತ್ರೆಗಳ ಆವರಣಗಳಲ್ಲಿ ಕೆಲವರು ಭಿೆ ಬೇಡುವುದನ್ನು ವೃತ್ತಿಯಾಗಿಸಿಕೊಂಡಿದ್ದಾರೆ. ನಮ್ಮದು ಆಂಧ್ರ, ತಮಿಳುನಾಡು, ಕೇರಳ… ನಮ್ಮ ಕಡೆಯವರು ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ನಮ್ಮ ಬಳಿ ಹಣವಿಲ್ಲ ಸಹಾಯ ಮಾಡಿ ಎಂದು ಹಣ ಮಾಡುವ ಉಪಾಯ ಕಂಡುಕೊಂಡಿದ್ದಾರೆ. ಇನ್ನು ಕೆಲವರು ಕೆಲಸಕ್ಕೆಂದು ಬಂದಿದ್ದೆವು. ಕೆಲಸ ಮಾಡಿಸಿಕೊಂಡ ಮಾಲೀಕ ಕೂಲಿ ಕೊಡದೆ ಮೋಸ ಮಾಡಿದ್ದಾರೆ. ಊರಿಗೆ ತೆರಳಲು ನಮ್ಮ ಬಳಿ ಹಣವಿಲ್ಲ, ದಾನ ಮಾಡಿ ಎಂದು ಬೇಡಿಕೆಯಿಡುತ್ತಾರೆ. ನಗರದಲ್ಲಿ ಮಸೀದಿ, ಕೋಲಾರಮ್ಮ, ಸೋಮೇಶ್ವರ ದೇವಾಲಯ, ಜಿಲ್ಲೆಯ ಬಂಗಾರು ತಿರುಪತಿ, ಚಿಕ್ಕ ತಿರುಪತಿ, ಕುರುಡಮಲೆ, ಆವಣಿ ರಾಮೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಕುಳಿತು ಭಿಕ್ಷೆ ಬೇಡುತ್ತಾರೆ.

    ಸಮರ್ಪಕವಾಗಿ ಜಾರಿಯಾಗದ ಕಾನೂನು
    ಭಿಕ್ಷಾಟನೆ ಅಪರಾಧವೆಂದು ಘೋಷಿಸಿ ಭಿಕ್ಷುಕರನ್ನು ಶಿಕ್ಷೆಗೆ ಒಳಪಡಿಸುವ ಕಾನೂನು (ಭಿಾಟನಾ ನಿಷೇಧ ಅಧಿನಿಯಮ 1975) ರಾಜ್ಯದಲ್ಲಿ ಜಾರಿಯಲ್ಲಿದೆ. ಜತೆಗೆ, ಭಿಕ್ಷುಕರಿಗೆ ಊಟ, ವಸತಿ, ವೃತ್ತಿ ತರಬೇತಿ ನೀಡಿ ಮುಖ್ಯವಾಹಿನಿಗೆ ತರಬೇಕಾದ ದೊಡ್ಡ ಜವಾಬ್ದಾರಿ ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರ ಸ್ಥಳಿಯ ಸಂಸ್ಥೆಗಳ ಮೇಲಿದೆ. ಆದರೆ, ಜಿಲ್ಲೆಯಲ್ಲಿ ಭಿಕ್ಷುಕರಿಗೆ ಪುನರ್ವಸತಿ ಕಲ್ಪಿಸುವ ಪರಿಹಾರ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು ಕೇಂದ್ರದಲ್ಲಿ 126 ಮಂದಿ ನಿರಾಶ್ರಿತರು, 77 ಮಂದಿ ಮಾನಸಿಕ ಅಸ್ವಸ್ಥರು ಆಶ್ರಯಪಡೆದುಕೊಂಡಿದ್ದಾರೆ.
    16 ವರ್ಷದ ಹೆಣ್ಣು ಮಕ್ಕಳು ಹಾಗೂ 18 ವರ್ಷ ತುಂಬಿದ ಗಂಡು ಮಕ್ಕಳು ಭಿಾಟನೆಯಲ್ಲಿ ತೊಡಗಿದ್ದು ಕಂಡಲ್ಲಿ ಬಂಧಿಸಲು ಅವಕಾಶವಿರುತ್ತದೆ. ಬಂಧಿಸಿದ ಭಿಕ್ಷುಕರನ್ನು ನಿಯಾಮಾನುಸಾರ ಅಧಿಕಾರಿಗಳ ಹಂತದಲ್ಲೆ ಪ್ರಾಥಮಿಕ ವಿಚಾರಣೆ ನಡೆಸಿ ವೃತ್ತಿಪರ ಭಿಕ್ಷುಕರೆಂದು ದೃಢಪಟ್ಟಲ್ಲಿ ತಾಲೂಕು ತಹಸೀಲ್ದಾರ್​ ಆದೇಶದ ಮೇರೆಗೆ ಪರಿಹಾರ ಕೇಂದ್ರಕ್ಕೆ ದಾಖಲಿಸಬಹುದು.

    ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು
    ಪೊಲೀಸರು ಭಿಕ್ಷುಕರನ್ನು ನಿರಾಶ್ರಿತರ ಕೇಂದ್ರಕ್ಕೆ ಸೇರಿಸುತ್ತಾರೆ. ಅವರನ್ನು ಪರಿವರ್ತನೆ ಮಾಡಿ ವಾರಸುದಾರರನ್ನು ಹುಡುಕಿ ಕಾಯಂ ವಿಳಾಸಕ್ಕೆ ಕಳುಹಿಸುವ ಪ್ರಯತ್ನ ಮಾಡುತ್ತಾರೆ. ಆದರೂ ಕೆಲವರು ಮತ್ತೆ ಭಿಕ್ಷಾಟನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಪೊಲಿಸರು ಭಿಕ್ಷುಕರನ್ನು ಹಿಡಿದು ನಿರಾಶ್ರಿತರ ಕೇಂದ್ರ ಸೇರಿಸುವ ಮೊದಲು ತಹಸೀಲ್ದಾರ್​ ಎದುರು ಹಾಜರುಪಡಿಸಬೇಕು, ಇದು ಬಹಳ ಸಮಯ ತೆಗೆದುಕೊಳ್ಳುವ ಪ್ರಕ್ರಿಯೆ ಆಗಿರುವುದರಿಂದ ಯಾರೂ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕೌಟುಂಬಿಕ ಕಲಹ, ಆಸ್ತಿ ವಿವಾದ, ಜೀವನದಲ್ಲಿ ಜಿಗುಪ್ಸೆ ಇತ್ಯಾದಿ ಕಾರಣಗಳಿಂದ ಮನೆ ಬಿಟ್ಟು ಬಂದವರು ಭಿಾಟನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೀರಂಡಹಳ್ಳಿ ಸಮೀಪ ನಿರಾಶ್ರಿತರ ಪರಿಹಾರ ಕೇಂದ್ರ ಕಾರ್ಯನಿರ್ವಹಿಸುತ್ತಿದೆ.

    ಭಿಕ್ಷಾಟನೆ ನಿಮೂರ್ಲನೆಗೆ ಸೆಸ್​ ಸಂಗ್ರಹ
    ಕಂದಾಯ ಹಾಗೂ ಅನೇಕ ತೆರಿಗೆಗಳಲ್ಲಿ ಭಿಕ್ಷಾಟನೆ ನಿಮೂರ್ಲನಕ್ಕಾಗಿ ಸರ್ಕಾರ ಸೆಸ್​ ಮೂಲಕ ಹಣ ಸಂಗ್ರಹಿಸುತ್ತದೆ. ಪ್ರತಿ ವರ್ಷ ಸೆಸ್​ನಿಂದ ಕೋಟ್ಯಂತರ ರೂಪಾಯಿ ಸಂಗ್ರಹವಾಗುತ್ತದೆ. ಭಿಾಟನೆ ನಿಮೂರ್ಲನೆಗೆ ಹಾಗೂ ಭಿಕ್ಷುಕರ ಪುನರ್ವಸತಿಗಾಗಿ ಸರ್ಕಾರ, ವಿವಿಧ ಕೌಶಲ ತರಬೇತಿ, ಸ್ವ ಉದ್ಯೋಗಕ್ಕೆ ಸಹಕಾರ, ನಿರ್ಗತಿಕ ಅರ್ಹರನ್ನು ಹೊರಗುತ್ತಿಗೆ ಆಧಾರದ ಮೇರೆಗೆ ಕೆಲಸಕ್ಕೆ ನೇಮಕ ಮಾಡಿಕೊಳ್ಳುವುದು. ಪಿಂಚಣಿ ಮತ್ತು ಅಂಗವಿಕಲರ ವೇತನ ಮೊದಲಾದ ಯೋಜನೆಗಳನ್ನು ಜಾರಿಗೊಳಿಸಿದೆ. ಸರ್ಕಾರದ ಯೋಜನೆಗಳನ್ನು ಸಮರ್ಥವಾಗಿ ಅನುಷ್ಠಾನಗೊಳಸಬೇಕಾದ ಅಧಿಕಾರಿಗಳಿಗೆ ಮಾತ್ರ ಭಿಕ್ಷುಕರು ಕಾಣುವುದಿಲ್ಲ ಎಂಬುದು ವಿಷಾದಕರ ಸಂಗತಿ.

    ಜಿಲ್ಲಾಮಟ್ಟದ ಸಮಿತಿ ಕಾರ್ಯ ಕುಂಠಿತ..?
    ಕರ್ನಾಟಕ ಭಿಕ್ಷಾಟನೆ ನಿಷೇಧ ಕಾಯಿದೆ 1975ರ ಸೆಕ್ಷನ್​ (5) ರನ್ವಯ ರಚಿಸಲಾಗಿಗುವ ಸ್ಥಳಿಯ ಸಮಿತಿಗೆ ಅಯಾ ಜಿಲ್ಲೆಯ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುತ್ತಾರೆ. ನಿರಾಶ್ರಿತರ ಪರಿಹಾರ ಕೇಂದ್ರಗಳ ನಿರ್ವಹಣೆ ಸಂಪೂರ್ಣ ಅಧಿಕಾರ ಹೊಂದಿರುತ್ತಾರೆ. ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ಕೃಷಿ ಇಲಾಖೆ ಜೆಡಿ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಡಿ, ಜಿಲ್ಲಾ ಸಮಾಜ ಕಲ್ಯಾಣಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸರ್ಕಾರಿ ವಕೀಲ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಜಿಲ್ಲಾ ಸಮಿತಿಯು ಭಿಕ್ಷಾಟನೆ ನಿಮೂರ್ಲನೆಗೆ ಕ್ರಮವಹಿಸಬೇಕು. ಆದರೆ, ಜಿಲ್ಲೆಯಲ್ಲಿ ಸಮಿತಿಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸದೆ ಇರುವುದು ಎಗ್ಗಿಲ್ಲದೆ ಭಿಾಟನೆ ನಡೆಯಲು ಕಾರಣವಾಗಿದೆ.

    ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಭಿಕ್ಷಾಟನೆ
    ಭಿಕ್ಷಾಟನೆಯಲ್ಲಿ ತೊಡಗಿಸಿಕೊಂಡಿರುವವರ ಬಗ್ಗೆ ಮಾಹಿತಿ ನೀಡಿದರೆ ಅವರನ್ನು ರಕ್ಷಣೆ ಮಾಡಲಾಗುವುದು. ಈ ವಾರದಲ್ಲಿ 20 ಮಂದಿಯನ್ನು ಪತ್ತೆ ಮಾಡಿ ಬೀರಂಡಹಳ್ಳಿ ನಿರಾಶ್ರಿತರ ಕೇಂದ್ರಕ್ಕೆ ಕಳುಹಿಸಲಾಗಿದೆ.
    ಶ್ರೀನಿವಾಸ್​, ಜೆಡಿ, ಸಮಾಜ ಕಲ್ಯಾಣ ಇಲಾಖೆ
    ಭಿಕ್ಷಾಟನೆಯಲ್ಲಿ ತೊಡಗಿಸಿಕೊಂಡಿರುವವರ ಬಗ್ಗೆ ಮಾಹಿತಿ ನೀಡಿದರೆ ಅವರನ್ನು ರಕ್ಷಣೆ ಮಾಡಲಾಗುವುದು. ಈ ವಾರದಲ್ಲಿ 20 ಮಂದಿಯನ್ನು ಪತ್ತೆ ಮಾಡಿ ಬೀರಂಡಹಳ್ಳಿ ನಿರಾಶ್ರಿತರ ಕೇಂದ್ರಕ್ಕೆ ಕಳುಹಿಸಲಾಗಿದೆ.
    ಶ್ರೀನಿವಾಸ್​, ಜೆಡಿ, ಸಮಾಜ ಕಲ್ಯಾಣ ಇಲಾಖೆ
    ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಭಿಕ್ಷಾಟನೆ
    ದೇವಾಲಯಗಳು ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಭಿಾಟನೆ ಎಗ್ಗಿಲ್ಲದೆ ನಡೆಯುತ್ತಿದೆ. ಅವರನ್ನು ಪ್ರಶ್ನೆ ಮಾಡಿದರೆ ಸರ್ಕಾರ ಸೌಲಭ್ಯಗಳನ್ನು ಕಲ್ಪಿಸಿಲ್ಲ ಎಂದು ಹೇಳುತ್ತಾರೆ. ಇಲಾಖಾಧಿಕಾರಿಗಳು ಭಿಕ್ಷುಕರನ್ನು ಪತ್ತೆ ಮಾಡಿ ಪುನರ್ವಸತಿ ಕಲ್ಪಿಸುವ ಕೆಲಸ ಮಾಡಬೇಕು.
    ರಾಜೇಶ್​ ಸಿಂಗ್​, ಬಿಜೆಪಿ ಮುಖಂಡ, ಕೋಲಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts