More

    ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಭಿಕ್ಷುಕರ ದೇಣಿಗೆ: ಕೊಟ್ಟ ಹಣ ಕೇಳಿದ್ರೆ ಹೌಹಾರ್ತೀರಾ!

    ಅಯೋಧ್ಯೆ: ಉತ್ತರ ಪ್ರದೇಶದ ಸರಯೂ ನದಿ ದಡದಲ್ಲಿರುವ ಸಾಂಸ್ಕೃತಿಕ ನಗರಿ ಅಯೋಧ್ಯೆಯಲ್ಲಿ ಭವ್ಯವಾಗಿ ತಲೆಯೆತ್ತಿರುವ ಶ್ರೀರಾಮಮಂದಿರಕ್ಕೆ ಲಕ್ಷಾಂತರ ಆಸ್ತೀಕ ಮಹಾಶವರು ದೇಣಿಗೆ ನೀಡಿದ್ದಾರೆ. ಇದರಲ್ಲಿ ಬಡವ-ಬಲ್ಲಿದನೆಂಬ ಭೇದವಿಲ್ಲ. ಇದಕ್ಕೆ ಭಿಕ್ಷುಕರು ಸಹ ಹೊರತಾಗಿಲ್ಲ.

    ಇದನ್ನೂ ಓದಿ: ಜ.22ಕ್ಕೆ ಅಯೋಧ್ಯೆ ರಾಮ ಮಂದಿರದಲ್ಲಿ ತೆರೆಯಲಿವೆ ಹೈದರಾಬಾದ್​ನ 118 ಬಾಗಿಲು?
    ಅವರವರ ಭಕ್ತಿ, ಶಕ್ತ್ಯಾನುಸಾರ ದೇಗುಲದ ನಿರ್ಮಾಣ ಕಾರ್ಯದಲ್ಲಿ ಆ ಮೂಲಕ ಜನ ಭಾಗಿಯಾಗಿದ್ದಾರೆ. ಪ್ರಯಾಗರಾಜ್ ಜೊತೆಗೆ ಕಾಶಿ ಪ್ರಾಂತ್ಯದ ಕೆಲವು ಭಿಕ್ಷುಕರು ಅಯೋಧ್ಯೆ ರಾಮಮಂದಿರಕ್ಕೆ ಭಾರಿ ದೇಣಿಗೆ ನೀಡಿಡಿರುವುದಾಗಿ ವರದಿಯಾಗಿದೆ.

    ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಸಿದ್ಧತೆಗಳು ನಡೆಯುತ್ತಿವೆ. ಈ ದೇವಾಲಯವನ್ನು ನೋಡಲು ಇಡೀ ದೇಶವಾಸಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದೇ ಜನವರಿ 22ರಂದು ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಲಿದೆ. ಒಂದೆಡೆ ಈ ಆಚರಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ.

    ಇದೇ ವೇಳೆ ಅತ್ಯಂತ ಮಹತ್ವಾಕಾಂಕ್ಷೆಯಿಂದ ನಿರ್ಮಾಣವಾಗುತ್ತಿರುವ ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಅನೇಕ ಭಕ್ತರು ಇನ್ನೂ ತಮ್ಮ ಪಾಲಿನ ಸಹಾಯ ಮಾಡುತ್ತಿದ್ದಾರೆ. ಶ್ರೀರಾಮ ದೇವರ ಮೇಲಿನ ಭಕ್ತಿಯನ್ನು ತೋರಿಸುತ್ತಿದ್ದಾರೆ. ಸಾಧ್ಯವಾದಷ್ಟು ಹಣ, ಉಡುಗೊರೆ ಮತ್ತು ವಸ್ತುಗಳ ರೂಪದಲ್ಲಿ ನೀಡುತ್ತಿದ್ದಾರೆ. ಆರೆಸ್ಸೆಸ್ ಸಂಘಟನೆ ಸಮರ್ಪಣ್ ನಿಧಿ ಮಂದಿರ ನಿರ್ಮಾಣಕ್ಕೆ ಅಭಿಯಾನ ನಡೆಸುತ್ತಿರುವುದು ಗೊತ್ತೇ ಇದೆ. ಈ ಕ್ರಮದಲ್ಲಿ, ಕಾಶಿಯಿಂದ ಕೆಲವು ಭಿಕ್ಷುಕರು ನವೆಂಬರ್ 2020 ರಲ್ಲಿ ಆರ್‌ಎಸ್‌ಎಸ್ ಕಚೇರಿಗೆ ಭೇಟಿ ನೀಡಿ ಈ ಅಭಿಯಾನದಲ್ಲಿ ನಮ್ಮನ್ನೂ ಪರಿಗಣಿಸಬೇಕು ಎಂದು ಕೇಳಿಕೊಂಡರು. ಆದರೆ ಮೊದಲಿಗೆ ಸಂಘಟಕರು ಹಿಂದೇಟು ಹಾಕಿದರೂ ಕಡೆಗೆ ಭಿಕ್ಷುಕರ ಮನವಿ ಮೇರೆಗೆ ದೇಣಿಗೆ ಸ್ವೀಕರಿಸಲು ಒಪ್ಪಿದರು.

    ಇದರ ಫಲವಾಗಿ ಪ್ರಯಾಗರಾಜ್ ಮತ್ತು ಕಾಶಿ ಪ್ರಾಂತ್ಯದ 27 ಜಿಲ್ಲೆಗಳ 300ಕ್ಕೂ ಹೆಚ್ಚು ಭಿಕ್ಷುಕರು ರಾಮಮಂದಿರ ನಿರ್ಮಾಣಕ್ಕೆ 4.50 ಲಕ್ಷ ರೂ. ದೇಣಿಗೆ ನೀಡಿದರು.

    ಭಿಕ್ಷುಕರಲ್ಲದೆ ರಸ್ತೆಬದಿಯಲ್ಲಿ ಪಾದರಕ್ಷೆ ದುರಸ್ತಿಮಾಡಿಕೊಡುವವರು, ಕಸ ಗುಡಿಸುವ 4 ಸಾವಿರಕ್ಕೂ ಹೆಚ್ಚು ಮಂದಿ ತಮ್ಮ ದುಡಿಮೆಯ ಒಂದಿಷ್ಟು ಹಣವನ್ನು ರಾಮಮಂದಿರಕ್ಕೆ ದಾನ ಮಾಡಿದ್ದಾರೆ ಎನ್ನಲಾಗಿದೆ.

    ಮ್ಯಾಂಚೆಸ್ಟರ್‌ಗೆ ತೆರಳುತಿದ್ದ ವಿಮಾನ ಬರ್ಮುಡಾದಲ್ಲಿ ಹಠಾತ್​ ಭೂಸ್ಪರ್ಷ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts