More

    ಭಿಕ್ಷೆ ಬೇಡಿ ಕೂಡಿಟ್ಟ ಹಣವನ್ನು ದೇವಸ್ಥಾನಕ್ಕೆ ನೀಡಿದ ಭಿಕ್ಷುಕಿ! ಹಣದ ಮೊತ್ತ ಕೇಳಿದ್ರೆ ಅಚ್ಚರಿ ಪಡ್ತೀರಾ

    ಭುವನೇಶ್ವರ: ಹಣ ಅಂದರೆ ಹೆಣ ಕೂಡ ಬಾಯಿ ಬಿಡುತ್ತದೆ ಎಂಬ ಮಾತಿದೆ. ಈ ಕಾಲದಲ್ಲಿ ಹಣಕ್ಕಾಗಿ ಮನುಷ್ಯರು ಯಾವ ಮಟ್ಟಕ್ಕಾದರೂ ಇಳಿಯುತ್ತಾರೆ. ಹಣವಿದ್ದರೆ ಸಮಾಜದಲ್ಲಿ ಘನತೆ, ಗೌರವ ಬರುತ್ತದೆ ಅಂತಾ ಅಡ್ಡದಾರಿ ಹಿಡಿಯುತ್ತಾರೆ. ಕೋಟಿ ಕೋಟಿ ರೂಪಾಯಿ ಗಳಿಸಿಟ್ಟಿರುವ ವ್ಯಕ್ತಿಯು ಒಂದೇ ಒಂದು ರೂಪಾಯಿ ಖರ್ಚು ಮಾಡಲು ಹಿಂದು ಮುಂದು ನೋಡುತ್ತಾರೆ. ಏಕೆಂದರೆ, ಹಣವನ್ನೇ ತಮ್ಮ ಸರ್ವಸ್ವ ಎಂದು ಭಾವಿಸಿರುತ್ತಾರೆ.

    ಆದರೆ, ಕೆಲವೇ ಕೆಲ ಮಂದಿ ಇದಕ್ಕೆ ತದ್ವಿರುದ್ಧವಾಗಿ ಇರುತ್ತಾರೆ. ಇನ್ನೊಬ್ಬರಿಗೆ ಸಹಾಯ ಮಾಡಲೆಂದೇ ನಾವು ಈ ಭೂಮಿಯಲ್ಲಿ ಜನಿಸಿದ್ದೇವೆ ಎಂದು ತಿಳಿದುಕೊಂಡಿರುತ್ತಾರೆ. ತಮ್ಮ ಸಂಪಾದನೆಯ ಬಹುಪಾಲನ್ನು ನಿರ್ಗತಿಕರಿಗೆ ಅಥವಾ ಕಷ್ಟದಲ್ಲಿದ್ದವರಿಗೆ ಹಂಚುತ್ತಾ, ಇತರರ ಖುಷಿಯಲ್ಲಿ ತಮ್ಮ ಖುಷಿಯನ್ನು ಕಾಣುತ್ತಿರುತ್ತಾರೆ. ಇಂದು ನಾವು ಹೇಳ ಹೊರಟಿರುವ ವ್ಯಕ್ತಿಯು ಕೂಡ ಇದಕ್ಕೆ ಉತ್ತಮ ಉದಾಹರಣೆಯಾಗಿದ್ದಾರೆ.

    ಹೆಸರು ತುಲಾ ಬೆಹಾರಾ. ಇವರಿಗೆ 70 ವಯಸ್ಸು. ಒಡಿಶಾದ ಕೊಂಧಮಾಲ ಜಿಲ್ಲೆಯ ಫುಲ್ಬಾನಿ ಗ್ರಾಮದ ನಿವಾಸಿ. ಭಿಕ್ಷೆ ಬೇಡುವುದೇ ಇವರ ಕಾಯಕ. ಭಿಕ್ಷೆ ಬೇಡಿ ಸಂಪಾದಿಸಿದ್ದ ಸುಮಾರು 1 ಲಕ್ಷ ರೂ. ಹಣವನ್ನು ಜಗನ್ನಾಥ ದೇವಸ್ಥಾನಕ್ಕೆ ದೇಣಿಗೆ ನೀಡಿದ್ದು, ಅದನ್ನು ದೇವಸ್ಥಾನದ ಜೀರ್ಣೋದ್ಧಾರಕ್ಕೆ ಬಳಸಿಕೊಳ್ಳುವುದಾಗಿ ದೇವಸ್ಥಾನದ ಸಮಿತಿ ತಿಳಿಸಿದೆ.

    ಬೆಹರಾ ಅವರ ಉದಾರತೆ ಕುರಿತು ಜಗನ್ನಾಥ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಸುನಾಸಿರ್​ ಮಹಾಪಾತ್ರ ಹಾಗೂ ಇತರೆ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ, ಉಳಿದ ಜೀವನವನ್ನು ನೆಮ್ಮದಿಯಾಗಿ ಕಳೆಯಲು ಬೆಹಾರಾ ಅವರಿಗೆ ದೇವಸ್ಥನದ ವತಿಯಿಂದಲೇ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಬೆಹರಾ ಅವರು ನೀಡಿದ ಹಣವನ್ನು ದೇವಸ್ಥಾನದ ಜೀರ್ಣೋದ್ಧಾರಕ್ಕೆ ಬಳಸುವುದಾಗಿ ತಿಳಿಸಿದರು.

    ಕಟಕ್​ನ ಚಾವುಲಿಯಗಂಜ್ ಮೂಲದ ತುಲಾ ಬೆಹರಾ, ಕೂಲಿ ಕಾರ್ಮಿಕನಾಗಿದ್ದ ಪ್ರಫುಲ್ಲ ಬೆಹರಾರನ್ನು ಪ್ರೀತಿಸಿ ಮದುವೆಯಾರು. ನಂತರ ಪತಿ ಮತ್ತು ಪತ್ನಿ ಫುಲ್ಬಾನಿಗೆ ವಲಸೆ ಹೋದರು. ಎರಡು ದಶಕಗಳ ಹಿಂದೆ ಪ್ರಫುಲ್ಲ ತೀರಿಕೊಂಡಿದ್ದರಿಂದ ಮಕ್ಕಳಿಲ್ಲದ ಬೆಹರಾ ಅಂದಿನಿಂದ ಒಂಟಿ ಜೀವನ ನಡೆಸುತ್ತಿದ್ದಾರೆ. ಭಿಕ್ಷಾಟನೆಯಿಂದ ಬಂದ ಹಣದಲ್ಲಿ ಒಂದಿಷ್ಟು ಖರ್ಚು ಮಾಡಿ, ಉಳಿದ ಹಣವನ್ನು ಅಂಚೆ ಕಚೇರಿಯಲ್ಲಿ ಉಳಿಸುತ್ತಿದ್ದರು. ಇದೀಗ ಆ ಹಣವನ್ನು ದೇವಸ್ಥಾನಕ್ಕೆ ನೀಡಿದ್ದಾರೆ.

    ನನ್ನ ಅಸ್ತಿತ್ವ ಮತ್ತು ಉಳಿವಿಗೆ ನಾನು ಜಗನ್ನಾಥನಿಗೆ ಋಣಿಯಾಗಿದ್ದೇನೆ. ನಾನು ನನ್ನ ಜೀವನದ ಕೊನೆಯ ಘಟ್ಟದಲ್ಲಿದ್ದೇನೆ. ಇಷ್ಟು ಹಣ ಇಟ್ಟುಕೊಂಡು ನಾನೇನು ಮಾಡಲಿ, ಅದಕ್ಕೆ ಇದನ್ನು ಪರಮಾತ್ಮನಿಗೆ ಅರ್ಪಿಸಿದ್ದೇನೆ. ನನ್ನ ಪತಿ ತೀರಿಕೊಂಡ ನಂತರ ಕೆಲ ವರ್ಷ ದುಡಿಮೆ ಮಾಡಿ ಜೀವನ ಸಾಗಿಸುತ್ತಿದ್ದೆ. ಬಳಿಕ ಭಿಕ್ಷಾಟನೆಗೆ ಇಳಿದೆ. ಇದರಿಂದ ಬಂದ ಹಣದಲ್ಲಿ ಒಂದಿಷ್ಟು ಖರ್ಚು ಮಾಡಿ ಉಳಿದದ್ದನ್ನು ಪೋಸ್ಟ್ ಆಫೀಸ್​ನಲ್ಲಿ ಉಳಿಸಿದೆ. ಇದೀಗ ಜಗನ್ನಾಥನಿಗೆ ನೀಡಿದ್ದೇನೆ ಎಂದು ತುಲಾ ಬೆಹರಾ ಹೇಳಿದರು. (ಏಜೆನ್ಸೀಸ್​)

    ಸಾರ್ವಜನಿಕರಿಂದ ಕಿರುಕುಳ ಆರೋಪ: ಸಿರವಾರ ಪಿಎಸ್​ಐ ಗೀತಾಂಜಲಿ ಶಿಂಧೆ ಅಮಾನತು

    ತಮಿಳುನಾಡು ರಾಜಕಾರಣದಲ್ಲಿ ಅಣ್ಣಾಮಲೈ ದುಬಾರಿ ವಾಚ್​ನದ್ದೇ ಸದ್ದು! ಇದರ ವಿಶೇಷತೆ ತಿಳಿದ್ರೆ ಹುಬ್ಬೇರಿಸ್ತೀರಾ​

    ಕೋಳಿ ಕೂಗೋದ್ರಿಂದ ನಮಗೆ ನಿದ್ದೆ ಇಲ್ಲದಂತಾಗಿದೆ; ಸಮಸ್ಯೆಯಿಂದ ಪಾರು ಮಾಡಿ ಎಂದು ಪೊಲೀಸರ ಮೊರೆ ಹೋದ ಬೆಂಗಳೂರು ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts