More

    ಕೋಳಿ ಕೂಗೋದ್ರಿಂದ ನಮಗೆ ನಿದ್ದೆ ಇಲ್ಲದಂತಾಗಿದೆ; ಸಮಸ್ಯೆಯಿಂದ ಪಾರು ಮಾಡಿ ಎಂದು ಪೊಲೀಸರ ಮೊರೆ ಹೋದ ಬೆಂಗಳೂರು ನಿವಾಸಿ

    ಬೆಂಗಳೂರು: ಅಜ್ಜಿ ಮತ್ತು ಕೋಳಿ ಕಥೆ ನೆನಪಿರಬಹುದು. ಬಾಲ್ಯದಲ್ಲಿ ಎಲ್ಲರೂ ಈ ಕಥೆಯನ್ನು ಕೇಳಿರುತ್ತೀರಿ. ಕೋಳಿ ಕೂಗಿದಾಗ ಬೆಳಗಾಯ್ತು ಎಂಬುದು ಹಳ್ಳಿ ಜನರ ನಂಬಿಕೆ. ಹಿಂದೆಲ್ಲಾ ಬೆಳಗ್ಗೆ ಎಳಲು ಅಲಾರಾಂ ಕಲ್ಪನೆ ಇದ್ದಿರಲಿಲ್ಲ. ಬದಲಾಗಿ ಕೂಳಿಯ ಕೂಗೇ ಆ ದಿನದ ಅಲಾರಾಂ ಆಗಿತ್ತು. ಆದರೆ ಇಲ್ಲೊಬ್ಬ ಪೊಲೀಸರ ಮೊರೆ ಹೋಗಿ, ಹೊತ್ತಲ್ಲದ ಹೊತ್ತಲ್ಲಿ ಕೋಳಿ ಕೂಗುತ್ತಿದೆ. ಇದರಿಂದ ನಿದ್ದೆಗೆ ಸಮಸ್ಯೆಯಾಗುತ್ತಿದೆ ಎಂದಿದ್ದಾನೆ.

    ಜೆ.ಪಿ.ನಗರದ 8ನೇ ಹಂತದ ಮನೆಯೊಂದರಲ್ಲಿ ಕೋಳಿ ಮಾತ್ತು ಬಾತುಕೋಳಿ ಸಾಕಾಣೆ ಮಾಡುತ್ತಿದ್ದಾರೆ. ಇದು ಸುತ್ತಲಿನ ಮನೆಮಂದಿಯ ನಿದ್ದೆಗೆ ಭಂಗ ತಂದಿದೆ. ಹೀಗಾಗಿ ವ್ಯಕ್ತಿಯೊಬ್ಬ ಸಮಸ್ಯೆಯಿಂದ ಪಾರು ಮಾಡುವಂತೆ ಪೊಲೀಸರಲ್ಲಿ ಆಗ್ರಹಿಸಿದ್ದಾನೆ.

    ಈ ಬಗ್ಗೆ ನಗರ ಪೊಲೀಸರಿಗೆ ಟ್ವೀಟ್ ಮಾಡಿರುವ ನಿವಾಸಿಯೊಬ್ಬ, ನಮ್ಮ ವಠಾರದ ಮನೆಯೊಂದರಲ್ಲಿ ಕೋಳಿ ಸಾಕಾಣೆ ಮಾಡುತ್ತಿದ್ದಾರೆ. ಇವುಗಳು ಮುಂಜಾನೆ ಮೂರು ಗಂಟೆಗೆಲ್ಲಾ ಕೋಳಿಗಳು ಜೋರಾಗಿ ಕೂಗುತ್ತಿವೆ. ಇದರಿಂದ ನಮ್ಮ ಎರಡು ವರ್ಷದ ಮಗ ನಿದ್ದೆಯಿಂದ ಎದ್ದು ಬಿಡುತ್ತಾನೆ. ಕೊನೆಗೆ ನಮಗೂ ನಿದ್ದೆ ಇಲ್ಲದಂತೆ ಆಗುತ್ತದೆ. ಈ ಬಗ್ಗೆ ಸೂಕ್ತ ಕ್ರಮ ವಹಿಸಿ ಎಂದ ಟ್ವೀಟ್ ಮೂಲಕ ಆಗ್ರಹಿಸಿದ್ದಾನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts