More

    ಭಾರತ ಧರ್ಮ, ಸಂಸ್ಕೃತಿಗಳ ತಾಣ

    ಬೀಳಗಿ: ಅನುಭವದ ಅಭಿವ್ಯಕ್ತಿಯೇ ಸಾಹಿತ್ಯ. ಕಾವ್ಯಗಳಲ್ಲಿ ನವರಸಗಳು, ರತಿ ಭಾವ, ಅಲಂಕಾರ ಮುಖ್ಯವಾಗಿದೆ. ರಾಮಾಯಣ, ಮಹಾಭಾರತ ನವರಸ ಹೊಂದಿದ ಮಹಾಕೃತಿಗಳು ಎಂದು ತಾಪಂ ಇಒ ಎಂ.ಕೆ. ತೊದಲಬಾಗಿ ಹೇಳಿದರು.

    ಸ್ಥಳೀಯ ರುದ್ರಗೌಡ ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಹಿರಿಯ ಸಾಹಿತಿ ಬಿ.ಎನ್. ಮುಂಡರಗಿ ರಚಿತ ‘ಬೀಳಗಿ ಧಾರ್ಮಿಕ ಸೌರ್ಹಾದತೆ’ ಕೃತಿ ಬಿಡುಗಡೆ ಹಾಗೂ ಭಾವಗೀತ ಗಾಯನ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

    ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪ್ರೊ.ಜಿ.ಕೆ. ತಳವಾರ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಮೊದಲು ಮನೆಯಲ್ಲಿ ಸೌಹಾರ್ದ ವಾತಾವರಣ ಕಟ್ಟಿಕೊಟ್ಟರೆ ಧರ್ಮ, ಸಮಾಜದಲ್ಲಿ ಸೌಹಾರ್ದತೆ ಕಟ್ಟಲು ಸಾಧ್ಯವಾಗುತ್ತದೆ ಎಂದರು.

    ಪ್ರಾಂಶುಪಾಲ ಡಾ.ಎಸ್.ಎಚ್.ತೆಕ್ಕೆನ್ನವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಓದಿಗಿಂತ ವೇದಿಕೆಗಳು ಅಗಾಧ ಜ್ಞಾನ ಕೊಡುತ್ತವೆ. ಜನರು ಮನರಂಜನೆ ಕಾರ್ಯಕ್ರಮಗಳ ಜತೆಗೆ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಜ್ಞಾನ ಸಂಪಾದಿಸಿಕೊಳ್ಳಬೇಕು ಎಂದು ಯುವ ಸಮೂಹಕ್ಕೆ ಸಲಹೆ ನೀಡಿದರು.

    ಅಭಾಶಸಾಪ ತಾಲೂಕು ಅಧ್ಯಕ್ಷ ಗುರುರಾಜ ಲೂತಿ ಮಾತನಾಡಿ, ಭಾರತ ಧರ್ಮ, ಸಂಸ್ಕೃತಿಗಳ ತಾಣವಾಗಿದೆ. ಎಲ್ಲ ಧರ್ಮಗಳು ಮನುಷ್ಯರಾಗಿ ಬದುಕುವ ಸಂದೇಶ ನೀಡಿವೆ. ಕೃತಿಯು ಬೀಳಗಿ ಪಟ್ಟಣದ 101 ಕ್ಷೇತ್ರಗಳನ್ನು ದರ್ಶನ ಮಾಡಿಸುವ ಮಾಹಿತಿ ಕೋಶವಾಗಿದೆ ಎಂದರು.

    ಕಲ್ಮಠದ ಗುರುಪಾದ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು. ತಾಲೂಕು ಕಸಾಪ ಅಧ್ಯಕ್ಷ ಡಿ.ಎಂ. ಸಾಹುಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಹಿರೇಮಠ ನಿರೂಪಿಸಿದರು. ಪಿ.ಬಿ. ಹಿರೇಮಠ ಸ್ವಾಗತಿಸಿದರು. ಕೆ.ಎಂ.ಗಾಮಾ ವಂದಿಸಿದರು.

    ಗಮನ ಸೆಳೆದ ಸ್ವರಚಿತ ಗಾಯನ
    ರವೀಂದ್ರ ಉಪ್ಪಾರ, ಜ್ಯೋತಿಬಾ ಅವತಾಡೆ, ಸದಾನಂದ ಏಳಗಂಟಿ, ಸಿದ್ದಪ್ಪ ಬಿದರಿ, ಶ್ರೀಶೈಲ ಸಿಕ್ಕೇರಿ, ಕಸ್ತೂರಿ ಪತ್ತಾರ, ಈಶ್ವರ ಬಾಳಗಿ, ಶಿವಾನಂದ ಯರನಾಳ, ಸರೋಜಿನಿ ಕುಂಬಾರ, ಸದಾಶಿವ ಆಗೋಜಿ ಸ್ವರಚಿತ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಗಮನ ಸೆಳೆದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts