More

    ಕರೊನಾ ಸೋಂಕಿತ ಉಚ್ಚ ನ್ಯಾಯಾಲಯದ​ ಸಿಬ್ಬಂದಿಗೂ ಹಾಸಿಗೆ ಸಿಗುತ್ತಿಲ್ಲ; ಹೈಕೋರ್ಟ್ ಕಳವಳ

    ಬೆಂಗಳೂರು: ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಕರೊನಾ ಸೋಂಕು ಇದೀಗ ಕಳೆದ ವರ್ಷ ಉಂಟು ಮಾಡಿದ ಅವಾಂತರವನ್ನೇ ಸೃಷ್ಟಿಸುವ ಸಾಧ್ಯತೆಗಳು ಗೋಚರಿಸುತ್ತಿವೆ. ಈಗಾಗಲೇ ಬೆಡ್ ಸಿಗುತ್ತಿಲ್ಲ, ಸೋಂಕಿತರ ಶವಸಂಸ್ಕಾರಕ್ಕೂ ಕ್ಯೂ ಎಂಬ ಸುದ್ದಿಗಳು ಕೇಳಿಬಂದಿವೆ.

    ಈ ಮಧ್ಯೆ ಸೋಂಕು ಹೆಚ್ಚುತ್ತಿರುವ ಸಂಬಂಧ ರಾಜ್ಯದ ಹೈಕೋರ್ಟ್ ಕೂಡ ಕಳವಳ ವ್ಯಕ್ತಪಡಿಸಿದೆ. ಆರಂಭಿಕ ಹಂತದಲ್ಲಿ ಕಾಣಿಸಿಕೊಂಡ ಕರೊನಾಗಿಂತ ಕರೊನಾ ಎರಡನೇ ಅಲೆ ವೇಗವಾಗಿ ಹರಡುತ್ತಿದ್ದು, ಕೋವಿಡ್-19 ಪಾಸಿಟಿವ್ ದೃಢಪಟ್ಟಿರುವ ಹೈಕೋರ್ಟ್ ಸಿಬ್ಬಂದಿಗೂ ಹಾಸಿಗೆ ಸಿಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದೆ.

    ಇದನ್ನೂ ಓದಿ: ರಾಜಧಾನಿಯಲ್ಲಿ ಕೋವಿಡ್ ಶವ ಸಂಸ್ಕಾರಕ್ಕೂ ಕ್ಯೂ! ಚಿತಾಗಾರದ ಮುಂದೆ ಗಂಟೆಗಟ್ಟಲೆ ನಿಂತ ಆಂಬ್ಯುಲೆನ್ಸ್​ 

    ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಸೂಚನೆ ಕೊಟ್ಟಿರುವ ಸರ್ಕಾರ, ಹಾಸಿಗೆಗಳ ಕೊರತೆ ಬಗ್ಗೆ ಸರ್ಕಾರ ಉತ್ತರಿಸಬೇಕು ಎಂದು ಹೇಳಿದೆ. ಮಾತ್ರವಲ್ಲ ಖಾಸಗಿ ಆಸ್ಪತ್ರೆಗಳ ಶುಲ್ಕದ ಬಗ್ಗೆ, ಆ್ಯಂಬುಲೆನ್ಸ್​​ಗಳ ಲಭ್ಯತೆ ಬಗ್ಗೆ ಹಾಗೂ ಸೋಂಕಿತರ ಅಂತ್ಯಕ್ರಿಯೆಗೆ ಕೈಗೊಂಡ ಕ್ರಮಗಳ ಬಗ್ಗೆಯೂ ವಿವರಣೆ ನೀಡುವಂತೆ ಸೂಚಿಸಿದೆ. ಅಲ್ಲದೆ ಜನರ ತೊಂದರೆಗೆ ಸ್ಪಂದಿಸಲು ಉನ್ನತ ಸಮಿತಿ ರಚಿಸಲು ಸಾಧ್ಯವೇ? ಎಂದು ಕೇಳಿರುವ ಹೈಕೋರ್ಟ್​, ನಾಗರಿಕರು ತಮ್ಮ ಕಷ್ಟ ಹೇಳಿಕೊಳ್ಳಲು ವೇದಿಕೆ ಕಲ್ಪಿಸುವಂತೆ ಹಾಗೂ ಹೆಲ್ಪ್​ಲೈನ್​ಗಳನ್ನು ಮತ್ತೆ ಆರಂಭಿಸಲು ಕ್ರಮಕೈಗೊಳ್ಳಲು ನಿರ್ದೇಶನ ನೀಡಿದೆ.

    ದೇಶದಲ್ಲಿ ಸೋಂಕಿನ ಪ್ರಮಾಣ ಈಗಿರುವುದೇ ನಿಖರವಲ್ಲ; ಅಸಲಿ ಸಂಖ್ಯೆ ಅದಕ್ಕಿಂತಲೂ 5-10 ಪಟ್ಟು ಅಧಿಕ ಎನ್ನುತ್ತಿದ್ದಾರೆ ಇವರು…

    ಅತ್ಯಾಚಾರಿಗಳಿಂದ ತಪ್ಪಿಸಿಕೊಳ್ಳಲು ಮೂರನೇ ಮಹಡಿಯಿಂದ ಜಿಗಿದ ಯುವತಿ; ಇಲ್ಲಿ ಹೆಣ್ಣಿಗೆ ಹೆಣ್ಣೇ ಶತ್ರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts