More

    ಮನೆಯ ಹೊರಗೆ ಮಲಗಿದ್ದ ಬಾಲಕನ ಮೇಲೆ ಕರಡಿ ದಾಳಿ

    ಬರೇಲಿ: ಮನೆಯ ಹೊರಗೆ ಮಲಗಿದಾಗ ಬಾಲಕನ ಮೇಲೆ ಕರಡಿ ದಾಳಿ ಮಾಡಿದ್ದು, ಈ ಘಟನೆಯಲ್ಲಿ ಬಾಲಕನಿಗೆ ಗಾಯವಾಗಿದ್ದು, ರಕ್ಷಿಸಲು ಹೋದ ಆತನ ತಂದೆ ಕೂಡ ಗಾಯಗೊಂಡ ಘಟನೆ ನಡೆದಿದೆ.
    ಶಹಜಹಾನ್ಪುರದ ಖುತರ್ ಬ್ಲಾಕ್​​ನ ಬರ್ಖಲಿಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬಾಲಕನ ತಂದೆ ಕಾಲಿಗೆ ಗಾಯಗಳಾಗಿವೆ.
    ಗಾಯಗೊಂಡ ವ್ಯಕ್ತಿಯನ್ನು ಬಾಬು ಷಾ ಎಂದು ಗುರುತಿಸಲಾಗಿದೆ.

    ಇದನ್ನೂ ಓದಿ: ಶಾಲಾ ಮ್ಯಾನೇಜರ್​ ಕರೆದರೆಂದು ಮನೆಗೆ ಹೋದ ವಿದ್ಯಾರ್ಥಿನಿಗೆ ಕಾದಿತ್ತು ಗಂಡಾಂತರ!

    ಶುಕ್ರವಾರ ರಾತ್ರಿ, ಶಾ ತನ್ನ 9 ವರ್ಷದ ಮಗ ಮತ್ತು ಇಬ್ಬರು ಪುತ್ರಿಯರೊಂದಿಗೆ ಮನೆಯ ಹೊರಗೆ ಮಲಗಿದ್ದ. ಈ ವೇಳೆ, ಹಸುವಿನ ಧ್ವನಿ ಕೇಳಿಬಂತು. ಷಾ ಅಲ್ಲಿಗೆ ಹೋದಾಗ ಅಲ್ಲಿ ಕರಡಿ ಇದ್ದುದು ಕಂಡುಬಂತು.
    ಹಿತ್ತಲಿನಲ್ಲಿ ಮಲಗಿದ್ದ ಬಾಲಕ ಶಾಬಾಜ್ ಮೇಲೆ ಕರಡಿ ಹಲ್ಲೆ ಮಾಡಿತು. ಅಲ್ಲಿದ್ದ ಆತನ ಪುತ್ರಿಯರು ಗಾಬರಿಯಿಂದ ಮನೆಯೊಳಗೆ ಧಾವಿಸಿದರು. ಮಗನನ್ನು ರಕ್ಷಿಸುವಾಗ ಷಾ ಗಾಯಗೊಂಡಿದ್ದಾನೆ.
    ಕರಡಿ ತನ್ನ ಮಗನ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದು. ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಷಾ ಹೇಳಿದ್ದಾನೆ. ಶಬಾಜ್ ನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

    ಇದನ್ನೂ ಓದಿ: ಪ್ಲಾಸ್ಮಾ ದಾನಿಗಳ ಕುಟುಂಬಗಳಿಗೆ ವಿಶೇಷ ಆರೋಗ್ಯ ಪ್ರೋತ್ಸಾಹ ಧನ ಘೋಷಿಸಿದ ಗೋವಾ ಸರ್ಕಾರ

    ವರದಿಯ ಪ್ರಕಾರ, ಕಳೆದ 20 ವರ್ಷಗಳಲ್ಲಿ ಶಹಜಹಾನ್ಪುರದಲ್ಲಿ ಕರಡಿ ದಾಳಿ ನಡೆದಿರುವುದು ಇದೇ ಮೊದಲು. ಈ ಗ್ರಾಮ ಅರಣ್ಯ ಪ್ರದೇಶದಿಂದ ಅಂದಾಜು ಒಂದು ಕಿಮೀ ಮಾತ್ರ ದೂರದಲ್ಲಿದೆ ಮತ್ತು ಕರಡಿಯ ಹೆಜ್ಜೆ ಗುರುತುಗಳನ್ನು ನಾವು ಕಂಡುಕೊಂಡಿದ್ದೇವೆ. ಆದರೆ ಕಳೆದ ಹಲವಾರು ವರ್ಷಗಳಿಂದ ಇಲ್ಲಿಂದ ಯಾವುದೇ ಕರಡಿ ದಾಳಿ ವರದಿಯಾಗಿಲ್ಲದ ಕಾರಣ ಈ ಸದ್ಯ ನಡೆದ ಘಟನೆ ತುಂಬ ಆತಂಕಕಾರಿಯಾಗಿದೆ ಎಂದು ಉಪ-ವಿಭಾಗೀಯ ಅರಣ್ಯ ಅಧಿಕಾರಿ ಎಂ.ಎನ್. ಸಿಂಗ್ ತಿಳಿಸಿದ್ದಾರೆ.
    ಅರಣ್ಯ ಪ್ರದೇಶದ ಹೊರಗೆ ಪ್ರಾಣಿ ದಾಳಿ ನಡೆದರೆ ಕುಟುಂಬಕ್ಕೆ ಪರಿಹಾರ ನೀಡಲಾಗುವುದು ಎಂದು ಸಿಂಗ್ ಹೇಳಿದರು. ಕುಟುಂಬಕ್ಕೆ ಅರಣ್ಯ ಇಲಾಖೆ ಅಗತ್ಯ ಸಹಾಯ ನೀಡುತ್ತದೆ. “ಪ್ರಾಣಿಯನ್ನು ಸೆರೆಹಿಡಿಯುವವರೆಗೂ ಮನೆಯ ಹೊರಗಡೆ, ಬಯಲಿನಲ್ಲಿ ಮಲಗಕೂಡದು, ಪ್ರಾಣಿ ದಾಳಿ ವಿರುದ್ಧ ಎಚ್ಚರವಹಿಸುವಂತೆ ಗ್ರಾಮಸ್ಥರಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

    ಕೊಳದಲ್ಲಿ 50 ಸಾವಿರ ಮೌಲ್ಯದ ಮೊಬೈಲ್​ ಕಳೆದುಕೊಂಡು ಕಂಗಾಲಾಗಿದ್ದ ವ್ಯಕ್ತಿಗೆ ಕಾದಿತ್ತು ಅಚ್ಚರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts