More

    ಕುಡಿವ ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಿ

    ಸಿಂದಗಿ: ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ತಾಲೂಕು ಟಾಸ್ಕ್‌ಫೋರ್ಸ್ ಸಮಿತಿಯ ಸಿಂದಗಿ ಹಾಗೂ ಆಲಮೇಲ ತಾಲೂಕು ಅಧಿಕಾರಿಗಳ ಸಭೆ ಶಾಸಕ ಅಶೋಕ ಮನಗೂಳಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.

    ಕುಡಿವ ನೀರಿನ ಸಮರ್ಪಕ ವ್ಯವಸ್ಥೆ, ನೀರಿನ ಮೂಲ, ಸಂಗ್ರಹಾಗಾರ ಟ್ಯಾಂಕ್, ಲಭ್ಯವಿರುವ ನೀರಿನ ಪ್ರಮಾಣದ ಕುರಿತು ಶಾಸಕರು ಮಾಹಿತಿ ಪಡೆದರು.
    ಮತಕ್ಷೇತ್ರದಲ್ಲಿ ಬೇಸಿಗೆಗೆ ನೀರಿನ ಅಭಾವವಾಗುವ ಸಾಧ್ಯತೆ ಪರಿಗಣಿಸಿ ಸಂಬಂಧಿಸಿದ ಸ್ಥಳೀಯ ಗ್ರಾಪಂ ಆಡಳಿತ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳೆಲ್ಲರೂ ತಕ್ಷಣವೇ ಕಾರ್ಯಪ್ರವೃತ್ತರಾಗಿ ಸಮಸ್ಯೆ ಉಲ್ಬಣಿಸದಂತೆ ತುಂಬ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

    ಈಗಾಗಲೇ ಕೆಲವು ಹಳ್ಳಿಯ ಜನರು ತಮಗೆ ನೀರಿನ ಸಮಸ್ಯೆ ಆಗುತ್ತಿದೆ ಎಂದು ದೂರು ನೀಡುತ್ತಿದ್ದು, ಸಿಂದಗಿ ಪಟ್ಟಣದಲ್ಲಿಯೂ ಈ ಸಮಸ್ಯೆ ಕೇಳಿಬರುತ್ತಿದೆ. ನೀರಿನ ಸಂಪನ್ಮೂಲವಿದ್ದರೂ ನೀರು ಸಿಗುತ್ತಿಲ್ಲ ಏಕೆ ? ಎಂದು ಪುರಸಭೆ ಮುಖ್ಯಾಧಿಕಾರಿಯನ್ನು ಪ್ರಶ್ನಿಸಿದ ಶಾಸಕರು, ನಗರದಲ್ಲಿನ ನೀರು ಶುದ್ಧೀಕರಣ ಘಟಕದ ನವೀಕರಣಕ್ಕೆ 40 ಲಕ್ಷ ರೂ. ಅನುದಾನವಿದೆ. ಅದನ್ನು ಬಳಸಿಕೊಂಡು ದುರಸ್ತಿಯಲ್ಲಿರುವ ಪಂಪ್‌ಹೌಸ್ ಮೋಟಾರ್ ಸರಿಪಡಿಸಬೇಕು. ನೀರು ಬಿಡಲು ಅಗತ್ಯ ನೌಕರರನ್ನು ನೇಮಿಸಬೇಕು ಎಂದರು.

    ತಾಲೂಕು ಪಂಚಾಯಿತಿ ಪಿಡಿಒಗಳು ಪಂಚಾಯಿತಿಗಳಲ್ಲಿ ಇರುವುದಿಲ್ಲ. ಗ್ರಾಮಸ್ಥರ ಕರೆಗಳನ್ನು ಸ್ವೀಕಾರ ಮಾಡುವುದಿಲ್ಲ. ಹೀಗಾದರೆ ಬೇಸಿಗೆಯ ಸ್ಥಿತಿ ನಿಭಾಯಿಸುವುದು, ಸಾರ್ವಜನಿಕ ಕೆಲಸಗಳನ್ನು ಮಾಡುವುದು ಅಸಾಧ್ಯ. ಕೂಡಲೇ ಎಲ್ಲ ಪಿಡಿಒಗಳು ಎಚ್ಚೆತ್ತುಕೊಂಡು ಪ್ರತಿ ಮಾಹೆ ಸಭೆ ನಡೆಸಿ, ಜನರ ಕುಂದು-ಕೊರತೆ ಆಲಿಸಬೇಕು. ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವತ್ತ ನಿಗಾವಹಿಸಬೇಕು. ಇಲ್ಲವಾದರೆ ಪರಿಣಾಮ ನೆಟ್ಟಗಿರದು ಎಂದು ತಾಕೀತು ಮಾಡಿದರು.

    ಬರ ಪರಿಹಾರದ ಜತೆಗೆ ರೈತರಿಗೆ ಬೆಳೆಗಳ ಮಾಹಿತಿ ಒದಗಿಸುವ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಪಶು ಇಲಾಖೆ ಅಧಿಕಾರಿಗಳಿಂದ ಒಣ ಮೇವಿನ ಸಂಗ್ರಹದ ಕುರಿತು ವಿವರ ಪಡೆದು, ಬೇಡಿಕೆ ಬಗ್ಗೆ ಎಚ್ಚರವಹಿಸುವಂತೆ ಕೃಷಿ ಸಹಾಯಕ ನಿರ್ದೇಶಕ ಎಚ್.ವೈ.ಸಿಂಗೆಗೋಳ ಅವರಿಗೆ ಸೂಚಿಸಿದರು.

    ತಹಸೀಲ್ದಾರ್ ಡಾ.ಪ್ರದೀಪಕುಮಾರ ಹಿರೇಮಠ, ತಾಪಂ ಇಒ ರಾಮು ಅಗ್ನಿ ಸೇರಿ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts