More

    ಬಿಡಿಕೆ ಕೋಲ್ಟ್ಸ ಚಾಂಪಿಯನ್

    ಹುಬ್ಬಳ್ಳಿ: ಚಾಂಪಿಯನ್ಸ್ ನೆಟ್ ಕ್ರಿಕೆಟ್ ಕೋಚಿಂಗ್ ಸೆಂಟರ್ ನಡೆಸಿದ ಲೀಲಾವತಿ ಪ್ಯಾಲೇಸ್ ಕಪ್ 14 ವಯೋಮಿತಿಯ ಕ್ರಿಕೆಟ್ ಟೂರ್ನಿಯಲ್ಲಿ ನಗರದ ಬಿಡಿಕೆ ಕೋಲ್ಟ್ಸ್ ತಂಡ ಟ್ರೋಫಿ ಜಯಿಸಿದೆ.

    ದೇಶಪಾಂಡೆನಗರ ಜಿಮ್ಖಾನಾ ಮೈದಾನದಲ್ಲಿ ಭಾನುವಾರ ನಡೆದ ಫೈನಲ್​ನಲ್ಲಿ ಫಸ್ಟ್ ಕ್ರಿಕೆಟ್ ಅಕಾಡೆಮಿ ತಂಡದ ವಿರುದ್ಧ 92ರನ್​ಗಳಿಂದ ಭರ್ಜರಿ ಜಯ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ

    ಕೋಲ್ಟ್ಸ್ ನಿಗದಿತ 30 ಓವರ್​ಗಳಲ್ಲಿ 7 ವಿಕೆಟ್​ಗೆ 142ರನ್ ಗಳಿಸಿತ್ತು. ಮಣಿಕಂಠ ಗರಿಷ್ಠ 70 ರನ್ ಗಳಿಸಿದರು. ಫಸ್ಟ್ ಕ್ರಿಕೆಟ್ ಅಕಾಡೆಮಿ 50ರನ್ ಗೆ ಆಲೌಟ್ ಆಯಿತು.

    ಮಣಿಕಂಠ ಎಸ್. ಹಾಗೂ ವಿಶಾಲ ಡೋಂಗ್ರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಶೈಬಾಜ್ ಜೆ. ಸರಣಿ ಶ್ರೇಷ್ಠ, ಶ್ರೇಯಾಂಸ್ ಸರಣಿಯ ಉತ್ತಮ ಬೌಲರ್, ಮಣಿಕಂಠ ಎಸ್. ಉತ್ತಮ ಬ್ಯಾಟ್ಸಮನ್ ಹಾಗೂ ವಸಂತ ಮುರ್ಡೆಶ್ವರ ಕ್ರಿಕೆಟ್ ಅಕಾಡೆಮಿಯ ಅಖಿಲ ಎಸ್. ಭರವಸೆಯ ಆಟಗಾರ ಪ್ರಶಸ್ತಿ ಪಡೆದರು.

    ಪಂದ್ಯ ಆರಂಭಕ್ಕೆ ವೈಭವ ಸಮೂಹ ಸಂಸ್ಥೆಗಳ ನಿರ್ದೇಶಕ ಎಚ್.ಎನ್. ನಂದಕುಮಾರ ಟಾಸ್ ಹಾಕಿದರು. ಪಂಜುರ್ಲಿ ಗ್ರುಪ್ ಆಫ್ ಹೋಟೆಲ್​ನ ಮಾಲೀಕ ರಾಜೇಂದ್ರ ಶೆಟ್ಟಿ, ಶಶಿಕಾಂತ ಶೆಟ್ಟಿ, ವಿಮಲ

    ಗ್ರುಪ್ಸ್​ನ ಪ್ರಧಾನ ವ್ಯವಸ್ಥಾಪಕ ವಿಜಯಕುಮಾರ ಸಂಪಾಜೆ, ಕೆಎಸ್​ಸಿಎ ಧಾರವಾಡ ವಲಯ ಮಾಜಿ ಸಂಚಾಲಕ ಬಾಬಾ ಬೂಸದ ಟ್ರೋಫಿ ವಿತರಿಸಿದರು. ವಿಜಯ ಕುಲಕರ್ಣಿ ಸ್ವಾಗತಿಸಿದರು. ಸಂದೇಶ ಬೈಲಪ್ಪನವರ ವಂದಿಸಿದರು.

    ಸಂಕ್ಷಿಪ್ತ ಸ್ಕೋರ್: ಬಿಡಿಕೆ ಕೋಲ್ಟ್ಸ್ ಹುಬ್ಬಳ್ಳಿ-30 ಓವರ್​ಗಳಲ್ಲಿ 7 ವಿಕೆಟ್​ಗೆ 142 ರನ್ (ಮಣಿಕಂಠ ಎಸ್. 70, ವಿನಾಯಕ ಪಾಂಡೆ 27, ರೋಹಿತ್ 23, ಶೈಬಾಜ್ ಜೆ. 22ಕ್ಕೆ 2, ಸುಘೊಷ ಎಸ್.ಜೆ. 27ಕ್ಕೆ 2, ಶ್ರೇಯಾಂಸ್ 32ಕ್ಕೆ 2).

    ಫಸ್ಟ್ ಕ್ರಿಕೆಟ್ ಅಕಾಡೆಮಿ-20.4 ಓವರ್​ಗಳಲ್ಲಿ 50ಕ್ಕೆ ಆಲೌಟ್ (ಶೈಬಾಜ್ 10, ಭುವನ ಬಿ. 6ಕ್ಕೆ 2, ಸೌರಭ ಗುಡಿ 7ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts