More

    ಹಿಂದಿ ಮಾತನಾಡುವ ಪ್ರದೇಶದಿಂದಲೇ ಐಪಿಎಲ್‌ಗೆ 2 ಹೊಸ ತಂಡ, ಬಿಸಿಸಿಐ ಬಯಕೆ

    ನವದೆಹಲಿ: ಮುಂದಿನ ವರ್ಷದ ಐಪಿಎಲ್ ಟೂರ್ನಿಗೆ 2 ಹೊಸ ತಂಡಗಳನ್ನು ಸೇರ್ಪಡೆಗೊಳಿಸಲು ಬಿಸಿಸಿಐ ಈಗಾಗಲೆ ಪ್ರಕ್ರಿಯೆಯನ್ನು ಆರಂಭಿಸಿದ್ದು, ಇವೆರಡು ಹೊಸ ತಂಡಗಳು ಹಿಂದಿ ಭಾಷೆ ಮಾತನಾಡುವ ಪ್ರದೇಶಗಳಿಂದಲೇ ಬರಬೇಕೆಂದು ಬಯಸಿದೆ. ಹಿಂದಿ ಭಾಷೆ ಮಾತನಾಡುವ ಪ್ರದೇಶದ ಬೃಹತ್ ಮಾರುಕಟ್ಟೆ ವ್ಯಾಪ್ತಿ ಇದಕ್ಕೆ ಕಾರಣವಾಗಿದೆ. ಜತೆಗೆ ಐಪಿಎಲ್ ಟೂರ್ನಿಗೆ ಪಾನ್ ಇಂಡಿಯಾ ಸಮತೋಲನ ತರಲು ಬಯಸಿದೆ.

    ವಲಯವಾರು ಅಸಮತೋಲನವನ್ನು ತಪ್ಪಿಸಲು ಮತ್ತು ಮಾರುಕಟ್ಟೆ ಅವಕಾಶವನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಹೊಸ 2 ತಂಡಗಳನ್ನು ಸೇರ್ಪಡೆಗೊಳಿಸಲಿದೆ. ಇದಕ್ಕಾಗಿ ಹೊಸ ತಂಡಗಳನ್ನು ಸೇರಿಸಬಹುದಾದ 6 ನಗರಗಳನ್ನು ಪಟ್ಟಿ ಮಾಡಿದೆ. ಅವುಗಳೆಂದರೆ ಗುವಾಹಟಿ, ರಾಂಚಿ, ಕಟಕ್ (ಎಲ್ಲವೂ ಪೂರ್ವ), ಅಹಮದಾಬಾದ್ (ಪಶ್ಚಿಮ), ಲಖನೌ (ಕೇಂದ್ರ ವಲಯ) ಮತ್ತು ಧರ್ಮಶಾಲಾ (ಉತ್ತರ).

    ಬಿಸಿಸಿಐ ಈಗಾಗಲೆ ಹೊಸ ತಂಡವೊಂದರ ಮೂಲಬೆಲೆ 2 ಸಾವಿರ ಕೋಟಿ ರೂ. ಎಂದು ತಿಳಿಸಿದ್ದು, ತಂಡಗಳ ಹರಾಜು ದಿನಾಂಕವನ್ನು ಇನ್ನೂ ನಿಗದಿಪಡಿಸಿಲ್ಲ. ಬಿಡ್ ದಾಖಲೆ ಪತ್ರ ಖರೀದಿಸಲು ಅಕ್ಟೋಬರ್ 5ರವರೆಗೆ ಸಮಯ ನೀಡಲಾಗಿದೆ.

    ಕ್ರಿಕೆಟ್ ಮಾರುಕಟ್ಟೆಯಲ್ಲಿ ಹಿಂದಿ ಭಾಷೆ ಮಾತನಾಡುವ ಪ್ರದೇಶದ ಪ್ರಭಾವ ಅತ್ಯಂತ ಅಧಿಕವಾಗಿದೆ ಎಂದು ಅಂಕಿಅಂಶಗಳಿಂದ ತಿಳಿದುಬಂದಿದೆ. ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಪ್ರಸಾರವಾದ 2020ರ ಐಪಿಎಲ್ ಟೂರ್ನಿಯ ಒಟ್ಟು 4 ಶತಕೋಟಿ ನಿಮಿಷಗಳ ವೀಕ್ಷಣೆಯಲ್ಲಿ ಶೇ. 65 ಹಿಂದಿ ಭಾಷೆ ಮಾತನಾಡುವ ಪ್ರದೇಶದ್ದೇ ಆಗಿದೆ. ಇನ್ನು ಸೋನಿ ನೆಟ್‌ವರ್ಕ್‌ನ ಹಿಂದಿ ಚಾನಲ್ ‘ಸೋನಿ ಟೆನ್3’ ಇತ್ತೀಚೆಗೆ ದೇಶದ ನಂ. 1 ಕ್ರೀಡಾ ಚಾನಲ್ ಆಗಿ ಗುರುತಿಸಲ್ಪಟ್ಟಿದೆ.

    ಹಾಲಿ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ಶೇ. 50.7 ವೀಕ್ಷಕರು ಹಿಂದಿ ಕ್ರೀಡಾ ಚಾನಲ್‌ಅನ್ನೇ ವೀಕ್ಷಿಸುತ್ತಿದ್ದಾರೆ. ಶೇ. 10.6 ಇಂಗ್ಲಿಷ್ (ಸೋನಿ ಸಿಕ್ಸ್) ವೀಕ್ಷಿಸುತ್ತಿದ್ದಾರೆ ಎನ್ನಲಾಗಿದೆ. ದೇಶದ ದಕ್ಷಿಣ ಭಾಗದಿಂದ ಈಗಾಗಲೆ 3 ತಂಡಗಳು (ಚೆನ್ನೈ, ಬೆಂಗಳೂರು, ಹೈದರಾಬಾದ್) ಐಪಿಎಲ್‌ನಲ್ಲಿ ಆಡುತ್ತಿವೆ. ಇದು ದೇಶದ ಯಾವುದೇ ವಲಯಗಳ ಪೈಕಿ ಅತ್ಯಧಿಕ ಪ್ರತಿನಿಧಿತ್ವವಾಗಿದೆ. ಹೀಗಾಗಿ ಈ ಬಾರಿ ದಕ್ಷಿಣ ಭಾರತದ ನಗರದಿಂದ ಐಪಿಎಲ್‌ಗೆ ಹೊಸ ತಂಡದ ಸೇರ್ಪಡೆಯನ್ನು ಬಿಸಿಸಿಐ ಬಯಸಿಲ್ಲ. ಸದ್ಯ ಉತ್ತರ ವಲಯದಿಂದ (ಡೆಲ್ಲಿ, ಪಂಜಾಬ್) 2 ತಂಡಗಳಿದ್ದರೆ, ಪೂರ್ವ (ಕೋಲ್ಕತ), ಪಶ್ಚಿಮ (ಮುಂಬೈ), ಕೇಂದ್ರ (ರಾಜಸ್ಥಾನ) ವಲಯದಿಂದ ತಲಾ 1 ತಂಡಗಳಿವೆ.

    ಕ್ರಿಕೆಟಿಗ ಶಿಖರ್ ಧವನ್ ದಾಂಪತ್ಯದಲ್ಲಿ ಬಿರುಕು, ಪತ್ನಿ ಆಯೇಷಾಗೆ ವಿಚ್ಛೇದನ

    ಕಹಳೆ ಊದುತ್ತ ಓವಲ್ ಗೆಲುವನ್ನು ಸಂಭ್ರಮಿಸಿದ ಕೊಹ್ಲಿ! ಇದರ ಅರ್ಥವೇನೆಂದು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts