More

    ಐಪಿಎಲ್​​ಗೆ ಕಾಡುತ್ತಿದೆ ಕರೊನಾ ಭೂತ; ವೈದ್ಯಕೀಯ ಸಮಿತಿ ಸಿಬ್ಬಂದಿಯಲ್ಲೂ ಸೋಂಕು

    ದುಬೈನಲ್ಲಿ ನಡೆಯಲಿರುವ ಐಪಿಎಲ್​ ಒಂದು ಒಂದು ಕಾರಣಕ್ಕೆ ಸುದ್ದಿಯಾಗುತ್ತಿದೆ. ಫ್ರಾಂಚೈಸಿಗಳು ಈಗಾಗಲೇ ಯುಎಇ ಸೇರಿಕೊಂಡು, ಸಿದ್ಧತೆಯಲ್ಲಿ ತೊಡಗಿವೆ. ಆಟಗಾರರೂ ಅಭ್ಯಾಸ ಶುರು ಮಾಡಿದ್ದಾರೆ.

    ಆದರೆ ಈ ಬಾರಿಯ ಐಪಿಎಲ್​​ಗೆ ಕರೊನಾ ಭೂತ ಕಾಡುತ್ತಿದೆ. ಚೆನ್ನೈ ಸೂಪರ್​ ಕಿಂಗ್ಸ್​​ನ 13 ಮಂದಿಯಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿತ್ತು ಇದೀಗ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ವೈದ್ಯಕೀಯ ತಂಡದ ಸಿಬ್ಬಂದಿಯೋರ್ವರಲ್ಲಿ ಸೋಂಕು ದೃಢಪಟ್ಟಿದೆ. ಇದನ್ನೂ ಓದಿ: ಇಬ್ಬರು ಭಾರತೀಯರನ್ನು ಉಗ್ರಪಟ್ಟಿಗೆ ಸೇರಿಸುವ ಪಾಕ್​ ಪ್ರಯತ್ನಕ್ಕೆ ಪಂಚ ರಾಷ್ಟ್ರಗಳ ಪಂಚ್​

    ಬಿಸಿಸಿಐನ ಹಿರಿಯ ವೈದ್ಯಾಧಿಕಾರಿಯೋರ್ವರಿಗೆ ಕರೊನಾ ಇರುವುದು ದೃಢಪಟ್ಟಿದೆ. ಸೋಂಕಿನ ಯಾವುದೇ ಲಕ್ಷಣಗಳೂ ಇಲ್ಲ. ಅವರೀಗ ಐಸೋಲೇಟ್​ ಆಗಿದ್ದಾರೆ. ಸದ್ಯಕ್ಕಂತೂ ಯಾರದ್ದೂ ಸಂಪರ್ಕದಲ್ಲಿ ಇಲ್ಲ. ಯುಎಇಗೆ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ಸೋಂಕು ತಗುಲಿರುವ ಸಾಧ್ಯತೆ ಇದೆ. ಅಗತ್ಯ ಚಿಕಿತ್ಸೆ ನೀಡಲಾಗುತ್ತಿದ್ದು, ಮುಂದಿನ ಸುತ್ತಿನ ಟೆಸ್ಟ್​ನಲ್ಲಿ ನೆಗೆಟಿವ್​ ರಿಪೋರ್ಟ್​ ಬರುವ ಭರವಸೆ ಇದೆ. ಹಾಗೇ ನ್ಯಾಷನಲ್​ ಕ್ರಿಕೆಟ್​ ಅಕಾಡೆಮಿಯ ಇಬ್ಬರಲ್ಲೂ ಕರೊನಾ ಇರುವುದು ದೃಢಪಟ್ಟಿದ್ದು, ಐಸೋಲೇಟ್​ ಆಗಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. (ಏಜೆನ್ಸೀಸ್​) 

    ಬಿಜೆಪಿ ರಾಜಕಾರಣಿಗೆ ಶಾಕ್​ ನೀಡಿದ ಫೇಸ್​ಬುಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts