More

    ಬಿಸಿಸಿಐಗೆ ಜನರಲ್​ ಮ್ಯಾನೇಜರ್​ ಬೇಕಾಗಿದ್ದಾರೆ!

    ಮುಂಬೈ: ಕರೊನಾ ಹಾವಳಿ ಮತ್ತು ಲಾಕ್​ಡೌನ್​ನಿಂದಾಗಿ ಆರ್ಥಿಕ ಮುಗ್ಗಟ್ಟು ಹೆಚ್ಚಿರುವ ಕಾರಣದಿಂದಾಗಿ ಹಲವರು ಕೆಲಸ ಕಳೆದುಕೊಳ್ಳುತ್ತಿರುವ ನಡುವೆ ವಿಶ್ವದ ಶ್ರೀಮಂತ ಕ್ರಿಕೆಟ್​ ಸಂಸ್ಥೆಯಾಗಿರುವ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಯಲ್ಲಿ (ಬಿಸಿಸಿಐ) ಹೊಸ ಉದ್ಯೋಗಾವಕಾಶ ಸೃಷ್ಟಿಯಾಗಿದೆ. ಗೇಮ್​ ಡೆವಲಪ್​ಮೆಂಟ್​ ಪ್ರಧಾನ ವ್ಯವಸ್ಥಾಪಕರ ಹುದ್ದೆಗೆ ಬಿಸಿಸಿಐ ಶುಕ್ರವಾರ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

    ಮಂಡಳಿ ಸಮಗ್ರ ಕ್ರಿಕೆಟ್​ ವ್ಯವಹಾರಗಳ ಮ್ಯಾನೇಜರ್​ ಆಗಿದ್ದ ಸಾಬಾ ಕರೀಂ ಅವರಿಗೆ ಹುದ್ದೆ ತ್ಯಜಿಸಲು ಸೂಚಿಸಿದ ಬೆನ್ನಲ್ಲೇ ಬಿಸಿಸಿಐ ಈ ಅರ್ಜಿಗಳನ್ನು ಆಹ್ವಾನಿಸಿದ್ದು, ಆಗಸ್ಟ್​ 7ರ ಗಡುವು ನೀಡಿದೆ. ಗೇಮ್​ ಡೆವಲಪ್​ಮೆಂಟ್​ ಮುಖ್ಯಸ್ಥರ ಹುದ್ದೆಯನ್ನು ಈ ಹಿಂದೆ ಕೊನೆಯದಾಗಿ ರತ್ನಾಕರ್​ ಶೆಟ್ಟಿ ಅವರು ಅಲಂಕರಿಸಿದ್ದರು. 2018ರ ಮಾರ್ಚ್​ನಲ್ಲಿ ಅವರು ನಿವೃತ್ತಿ ಹೊಂದಿದ ಬಳಿಕ ಈ ಹುದ್ದೆ ಖಾಲಿ ಉಳಿದಿದೆ.

    ಇದನ್ನೂ ಓದಿ: ಐಪಿಎಲ್​ ದಿನಾಂಕ ಫಿಕ್ಸ್​, ಧೋನಿ ಅಭಿಮಾನಿಗಳಲ್ಲಿ ಸಂತಸ

    ಭಾರತ ತಂಡದ ಮಾಜಿ ಆಟಗಾರ ಸಾಬಾ ಕರೀಂ 2017ರ ಡಿಸೆಂಬರ್​ನಲ್ಲಿ ಬಿಸಿಸಿಐನ ಕ್ರಿಕೆಟ್​ ವ್ಯವಹಾರಗಳ ಪ್ರಧಾನ ವ್ಯವಸ್ಥಾಪಕ ಹುದ್ದೆಯನ್ನು ಅಲಂಕರಿಸಿದ್ದರು. ದೇಶೀಯ ಕ್ರಿಕೆಟ್​ ಮತ್ತು ಮಹಿಳಾ ಕ್ರಿಕೆಟ್​ನ ಉಸ್ತುವಾರಿಯನ್ನು ಅವರು ವಹಿಸಿಕೊಂಡಿದ್ದರು. ಬಿಸಿಸಿಐ ವೆಬ್​ಸೈಟ್​ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಗೇಮ್​ ಡೆವಲಪ್​ಮೆಂಟ್​ ಜನರಲ್​ ಮ್ಯಾನೇಜರ್​ಗೆ ದೇಶೀಯ ಕ್ರಿಕೆಟ್​ ವೇಳಾಪಟ್ಟಿಯ ನಿರ್ವಹಣೆಯ ಜತೆಗೆ ಪಂದ್ಯ ಆಡುವ ನಿಯಮಾವಳಿಗಳು, ಪಿಚ್​ಮತ್ತು ಹೊರಾಂಗಣ ಸಹಿತ ಕ್ರೀಡಾಂಗಣಗಳ ಗುಣಮಟ್ಟದ ಮೇಲ್ವಿಚಾರಣೆ ವಹಿಸಿಕೊಳ್ಳುವ ಜವಾಬ್ದಾರಿಯನ್ನು ನೀಡಲಾಗುತ್ತದೆ.

    ಕ್ರಿಕೆಟ್​ ಇಲ್ಲದಿದ್ದರೂ ದಿನಕ್ಕೆ 10 ಗಂಟೆ ಟಿವಿಯಲ್ಲಿ ಕಾಣಿಸಿಕೊಳ್ತಿದ್ದಾರೆ ವಿರಾಟ್​ ಕೊಹ್ಲಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts