More

    ಇಂದು ಬಿಸಿಸಿಐ 90ನೇ ಎಜಿಎಂ, ದಕ್ಷಿಣ ಆಫ್ರಿಕಾ ಪ್ರವಾಸ ಭವಿಷ್ಯ ನಿರ್ಧಾರ ನಿರೀಕ್ಷೆ

    ಕೋಲ್ಕತ: ವಿಶ್ವ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎನಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) 90ನೇ ವಾರ್ಷಿಕ ಮಹಾಸಭೆ (ಎಜಿಎಂ) ಶನಿವಾರ ನಡೆಯಲಿದೆ. ಒಮಿಕ್ರಾನ್ ಆತಂಕದಿಂದಾಗಿ ಅನಿಶ್ಚಿತ ಎನಿಸಿರುವ ಟೀಮ್ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸ ಸೇರಿದಂತೆ ಹಲವು ಮಹತ್ವದ ವಿಚಾರಗಳ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. ಒಟ್ಟು 24 ಅಂಶಗಳ ಅಜೆಂಡಾವನ್ನು ಸಭೆ ಒಳಗೊಂಡಿದೆ.

    ಹಾಲಿ ಯೋಜನೆಯ ಪ್ರಕಾರ ಭಾರತ ತಂಡ 3 ಟೆಸ್ಟ್, 3 ಏಕದಿನ ಮತ್ತು 4 ಟಿ20 ಪಂದ್ಯಗಳ ಸರಣಿಗಾಗಿ ಡಿಸೆಂಬರ್ 9ರಂದು ಮುಂಬೈನಿಂದ ಜೊಹಾನ್ಸ್‌ಬರ್ಗ್‌ಗೆ ವಿಮಾನ ಏರಬೇಕಿದೆ. ಆದರೆ ಸದ್ಯ ಜೊಹಾನ್ಸ್‌ಬರ್ಗ್‌ನಲ್ಲೇ ವೈರಸ್ ಹೊಸ ತಳಿಯ ಹಾವಳಿ ಹೆಚ್ಚಾಗಿದೆ. ಹೀಗಾಗಿ ಪ್ರವಾಸದ ಬಗ್ಗೆ ಬಿಸಿಸಿಐ ಗಂಭೀರ ಚಿಂತನೆ ನಡೆಸಲಿದೆ. ಜತೆಗೆ, ಒಂದು ವೇಳೆ ಪ್ರವಾಸವನ್ನು ರದ್ದುಗೊಳಿಸಿದರೆ, ಅದೇ ಸಮಯದಲ್ಲಿ ತವರಿನಲ್ಲಿ ಬೇರೆ ಸರಣಿಗಳನ್ನು ಆಡುವ ಬಗ್ಗೆಯೂ ಚರ್ಚಿಸಬೇಕಾಗಿದೆ.

    ಹರಾಜು ದಿನಾಂಕ ನಿರ್ಧಾರ?
    8 ತಂಡಗಳು ಈಗಾಗಲೆ ಆಟಗಾರರ ರಿಟೇನ್ ಪಟ್ಟಿ ಅಂತಿಮಗೊಳಿಸಿದ್ದು, ಐಪಿಎಲ್ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ದಿನಾಂಕದ ಬಗ್ಗೆಯೂ ಬಿಸಿಸಿಐ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಿದೆ. ಇನ್ನು ಬೆಟ್ಟಿಂಗ್ ಕಂಪನಿ ಜತೆಗಿನ ಸಂಪರ್ಕದ ಆರೋಪ ಎದುರಿಸುತ್ತಿರುವ ಸಿವಿಸಿ ಕ್ಯಾಪಿಟಲ್ಸ್ ಸಂಸ್ಥೆಗೆ ಅಹಮದಾಬಾದ್ ್ರಾಂಚೈಸಿಯ ಒಡೆತನವನ್ನು ನೀಡುವ ಬಗ್ಗೆಯೂ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕಿದೆ. ಸಿವಿಸಿ ಕ್ಯಾಪಿಟಲ್ಸ್ 5,600 ಕೋಟಿ ರೂ. ಬಿಡ್ ಸಲ್ಲಿಸಿ ಅಹಮದಾಬಾದ್ ್ರಾಂಚೈಸಿಯ ಒಡೆತನ ಗೆದ್ದಿತ್ತು. ಕಳೆದ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ತೋರಿದ ನೀರಸ ನಿರ್ವಹಣೆ ಬಗ್ಗೆ ಚರ್ಚೆ, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಸಂಬಂಧಿತ ವಿಚಾರಗಳು ಮತ್ತು ರಾಷ್ಟ್ರೀಯ ಆಯ್ಕೆಗಾರರ ಗುತ್ತಿಗೆ ವಿಸ್ತರಣೆಯೂ ಸಭೆಯ ಅಜೆಂಡಾದಲ್ಲಿದೆ.

    ಆಟಗಾರರ ಹಿಂದೇಟು?
    ಒಮಿಕ್ರಾನ್ ಹಾವಳಿಯ ಬಗ್ಗೆ ಭೀತಿ ಹೊಂದಿರುವ ಭಾರತ ತಂಡದ ಕೆಲ ಆಟಗಾರರು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ವರದಿಯಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ದಿನದಿಂದ ದಿನಕ್ಕೆ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಬುಧವಾರ ಇದು 8 ಸಾವಿರ ದಾಟಿತ್ತು. ಇದರಿಂದ ಕೆಲ ಆಟಗಾರರು ಕಳವಳ ವ್ಯಕ್ತಪಡಿಸಿದ್ದಾರೆ. ಹೀಗಾಗಿ ತಂಡ ಆಯ್ಕೆಯನ್ನೂ ವಿಳಂಬಗೊಳಿಸಲಾಗಿದೆ. ನಾಯಕ ವಿರಾಟ್ ಕೊಹ್ಲಿ ಕೂಡ ಇದೇ ಕಾರಣಕ್ಕಾಗಿ ಬಿಸಿಸಿಐ ಜತೆ ಆಟಗಾರರ ಚರ್ಚಿಸುತ್ತಿದ್ದಾರೆ ಎಂದಿದ್ದಾರೆ. ಕಳೆದ ಇಂಗ್ಲೆಂಡ್ ಪ್ರವಾಸದಲ್ಲೂ ಮ್ಯಾಂಚೆಸ್ಟರ್ ಟೆಸ್ಟ್‌ಗೆ ಮುನ್ನ ಕರೊನಾ ಭೀತಿ ಎದುರಾದಾಗಲೂ ಕೆಲ ಆಟಗಾರರು ಆಡಲು ಹಿಂದೇಟು ಹಾಕಿದ್ದರು. ಆಗ ಬಿಸಿಸಿಐ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಜತೆ ಚರ್ಚಿಸಿ ಪಂದ್ಯ ರದ್ದುಗೊಳಿಸಿತ್ತು. ಈಗಲೂ ಸ್ವತಃ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯೇ ಪ್ರವಾಸವನ್ನು ಮುಂದೂಡುವಂತೆ ಮಾಡಲು ಬಿಸಿಸಿಐ ಒತ್ತಡ ಹೇರುತ್ತಿದೆ ಎನ್ನಲಾಗಿದೆ.

    ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿ ವೇಳಾಪಟ್ಟಿ ಪ್ರಕಟ, ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಕಣಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts