More

    ಬಿಬಿಎಂಪಿ ವಾರ್ಡ್ ಮರುವಿಂಗಡಣೆ: ಅಂತಿಮ ಅಧಿಸೂಚನೆ ಪ್ರಕಟ; 13 ವಾರ್ಡ್​ಗಳ ಹೆಸರು ಬದಲಾವಣೆ

    ಬೆಂಗಳೂರು: ನಿರೀಕ್ಷೆಯಂತೆ ಬಿಬಿಎಂಪಿ ವಾರ್ಡ್ ಮರು ವಿಂಗಡಣೆಯ ಅಂತಿಮ ಅಧಿಸೂಚನೆಯನ್ನು ಸೋಮವಾರ ಸರ್ಕಾರ ಪ್ರಕಟಿಸಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಚಿಸಿದ್ದ 243 ವಾರ್ಡ್​ಗಳನ್ನು ಹಾಲಿ ಕಾಂಗ್ರೆಸ್ ಸರ್ಕಾರ 225ಕ್ಕೆ ಇಳಿಸಿ ಹೊರಡಿಸಿದ್ದ ಕರಡು ಅಧಿಸೂಚನೆಗೆ ಸಲ್ಲಿಕೆಯಾಗಿದ್ದ ಆಕ್ಷೇಪಣೆಗಳನ್ನು ಆಧರಿಸಿ ಈಗ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಈ ಅಧಿಸೂಚನೆಯ ಪ್ರತಿಯನ್ನು ಸರ್ಕಾರ ಇನ್ನಷ್ಟೇ ಹೈಕೋರ್ಟ್​ಗೆ ಸಲ್ಲಿಸಿ ಒಪ್ಪಿಗೆ ಪಡೆಯಲಿದೆ.

    ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಪರಿಶೀಲನಾ ಸಮಿತಿಯು ಮಾಡಿರುವ ಶಿಫಾರಸುಗಳನ್ನು ಸರ್ಕಾರವು ಒಪ್ಪಿರುತ್ತದೆ. ಜತೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿನಿಯಮ, 2020ರ ಕಲಂ 7ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, 2011ರ ಜನಗಣತಿ ಆಧಾರದ ಮೇರೆಗೆ ಬಿಬಿಎಂಪಿಗೆ ಸಂಬಂಧಿಸಿದಂತೆ ವಾರ್ಡ್​ವಾರು ಕ್ಷೇತ್ರ ಮರುವಿಂಗಡಣೆಯನ್ನು ಅಂತಿಮಗೊಳಿಸಿ ಅಧಿಸೂಚಿಸಲಾಗಿದೆ. ಇದರನ್ವಯ ಬಿಬಿಎಂಪಿಯಲ್ಲಿ ಇನ್ನು 225 ವಾರ್ಡ್​ಗಳು ಇರಲಿವೆ. ಜತೆಗೆ ಆಯಾ ವಾರ್ಡ್​ಗಳ ಸಂಖ್ಯೆ, ವಾರ್ಡ್​ವಾರು ನಕ್ಷೆ, ಗಡಿ, ವಾರ್ಡ್​ನೊಳಗೆ ಬರುವ ಪ್ರದೇಶಗಳನ್ನು ಕೂಡ ಅಂತಿಮಗೊಳಿಸಲಾಗಿದೆ. ಇದಲ್ಲದೆ, ಕೆಲ ವಾರ್ಡ್​ಗಳ ಅಂಕಿಗಳನ್ನು ಬದಲಿಸಲಾಗಿದೆ. ಆಕ್ಷೇಪಣೆ ಆಧರಿಸಿ ಕೆಲ ವಾರ್ಡ್​ಗಳ ವ್ಯಾಪ್ತಿಯ ಸೀಮಿತ ಪ್ರದೇಶವನ್ನು ಕೈಬಿಡಲಾಗಿದೆ. ಇಲ್ಲವೇ, ಹೊಸದಾಗಿ ಸೇರ್ಪಡೆ ಮಾಡಲಾಗಿದೆ.

    ಕೆಲ ವಾರ್ಡ್​ಗಳ ಹೆಸರು ಬದಲು

    ಕರಡು ಅಧಿಸೂಚನೆಯಲ್ಲಿ ಪ್ರಕಟಿಸಿದ್ದ 225 ವಾರ್ಡ್​ಗಳ ಹೆಸರ ಪೈಕಿ 13 ವಾರ್ಡ್​ಗಳ ಹೆಸರನ್ನು ಹೊಸದಾಗಿ ನಾಮಕರಣ ಮಾಡಲಾಗಿದೆ. ಇನ್ನುಳಿದ ಹೆಸರುಗಳನ್ನು ಹಾಗೆಯೆ ಉಳಿಸಿಕೊಳ್ಳಲಾಗಿದೆ.

    ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಬ್ಯಾಡರಹಳ್ಳಿ ವಾರ್ಡ್​ ಹೆಸರನ್ನು ಲಿಂಗಧೀರನಹಳ್ಳಿ ಎಂಬುದಾಗಿ ಬದಲಿಸಲಾಗಿದೆ. ಇದೇ ರೀತಿ ಮಹಾಲಕ್ಷ್ಮೀ ಲೇಔಟ್​ ಕ್ಷೇತ್ರದ ಮಾರಪ್ಪನಪಾಳ್ಯ ವಾರ್ಡ್​ನ್ನು “ರಾಜೀವ್​ನಗರ’, ನಂದಿನಿ ಲೇಔಟ್​ ವಾರ್ಡ್​ನ್ನು “ಡಾ. ಪುನೀತ್​ ರಾಜ್​ಕುಮಾರ್​’, ಡಾ. ಪುನೀತ್​ ರಾಜ್​ಕುಮಾರ್​ ವಾರ್ಡ್​ನ್ನು “ನಾಲ್ವಡಿ ಕೃಷ್ಣರಾಜ ಒಡೆಯರ್​’ ಹೆಸರಿಗೆ ಬದಲಿಸಲಾಗಿದೆ. ಸರ್ವಜ್ಞನಗರ ಕ್ಷೇತ್ರದ ಕೆಎಸ್​ಎ್​ಸಿ ಲೇಔಟ್​ ವಾರ್ಡ್​ನ್ನು “ಸುಬ್ಬಯ್ಯನಪಾಳ್ಯ’, ಶಿವಾಜಿನಗರ ಕ್ಷೇತ್ರದ ಎಸ್​.ಆರ್​.ನಗರ ವಾರ್ಡ್​ನ್ನು “ಸಂಪಂಗಿರಾಮನಗರ’ , ಶಾಂತಿನಗರ ಕ್ಷೇತ್ರದ “ಶಾಂತಲಾನಗರ’ ವಾರ್ಡ್​ನ್ನು “ಅಶೋಕನಗರ’ ಎಂದು ಹೊಸ ಹೆಸರು ಇಡಲಾಗಿದೆ.

    ರಾಜಾಜಿನಗರ ಕ್ಷೇತ್ರ ಹಾಗೂ ಬಸವನಗುಡಿ ಕ್ಷೇತ್ರಗಳಲ್ಲಿ ತಲಾ ಮೂರು ವಾರ್ಡ್​ಗಳ ಹೆಸರನ್ನು ಬದಲಿಸಲಾಗಿದೆ. ರಾಜಾಜಿನಗರ ಕ್ಷೇತ್ರದ ಪ್ರಕಾಶ್​ನಗರ ವಾರ್ಡ್​ನ್ನು “ಶ್ರೀರಾಮಮಂದಿರ’, ಶ್ರೀರಾಮಮಂದಿರ ವಾರ್ಡ್​ನ್ನು “ಶಿವನಗರ’ ಹಾಗೂ ಶಿವನಗರ ವಾರ್ಡ್​ನ್ನು ಹೆಸರನ್ನು “ರಾಜಾಜಿನಗರ’ ಎಂದು ಮರುನಾಮಕರಣಗೊಳಿಸಲಾಗಿದೆ. ಬಸವನಗುಡಿ ಕ್ಷೇತ್ರದಲ್ಲಿ ಹನುಮಂತನಗರ ವಾರ್ಡ್​ನ್ನು “ಗವಿಗಂಗಾಧರೇಶ್ವರ’, ಬಸವನಗುಡಿ ವಾರ್ಡ್​ನ್ನು “ದೊಡ್ಡ ಗಣಪತಿ’ ಹಾಗೂ ಗಿರಿನಗರ ವಾರ್ಡ್​ “ಸ್ವಾಮಿ ವಿವೇಕಾನಂದ ವಾರ್ಡ್​’ ಆಗಿ ಹೊಸ ಹೆಸರು ಇಡಲಾಗಿದೆ. ಚಿಕ್ಕಪೇಟೆ ಕ್ಷೇತ್ರದ ಸೋಮೇಶ್ವರನಗರ ವಾರ್ಡ್​ “ಬಿ.ವೆಂಕಟರೆಡ್ಡಿ ಎಂದೂ ಬದಲಾಗಲಿದೆ. ಮಹದೇವಪುರ ಕ್ಷೇತ್ರದ ಬೆಳತ್ತೂರು ವಾರ್ಡ್​ನ್ನು “ಹೂಡಿ’ ಹಾಗೂ ಹೂಡಿ ವಾರ್ಡ್​ನ್ನು “ಬೈರತಿ’ ವಾರ್ಡ್​ ಎಂದು ಬದಲಿಸಲಾಗಿದೆ.

    ಪಾಲಿಕೆ ಚುನಾವಣೆ ಇನ್ನೂ ಅನಿಶ್ಚಿತ

    ಬಿಬಿಎಂಪಿ ವಾರ್ಡ್ ಮರು ವಿಂಗಡಣೆ ಅಂತಿಗೊಳಿಸಿ ಅಧಿಸೂಚನೆ ಹೊರಡಿಸಿರುವುದರಿಂದ ಈ ವರ್ಷಾಂತ್ಯದಲ್ಲಿ ಪಾಲಿಕೆಗೆ ಚುನಾವಣೆ ನಡೆಯುವ ಸುದ್ದಿ ಹಬ್ಬಿದೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತವಾಗಿ ಸರ್ಕಾರ ಅಥವಾ ರಾಜ್ಯ ಚುನಾವಣಾ ಆಯೋಗ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಮುಂದಿನ ಬೇಸಿಗೆ ವೇಳೆಗೆ ಲೋಕಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಅದಕ್ಕೂ ಮುನ್ನ ಬಿಬಿಎಂಪಿ ಚುನಾವಣೆ ನಡೆಸಬಹುದಾಗಿದೆ. ಆದರೆ, ಹೊಸದಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ಪಾಲಿಕೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದರೂ ಚುನಾವಣೆ ಪೂರ್ವ ಚಟುವಟಿಕೆಗಳನ್ನ ಇನ್ನೂ ಸಾಕಷ್ಟು ಇವೆ. ಮುಖ್ಯವಾಗಿ ವಾರ್ಡ್​ವಾರು ಮೀಸಲು ಪಟ್ಟಿ ಪ್ರಕಟಿಸುವುದು ಕಷ್ಟದ ಕೆಲಸವಾಗಿದೆ. ಇದರಲ್ಲಿ ತಪು್ಪಗಳು ನುಸುಳಿದ್ದಲ್ಲಿ ಅದನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಲು ಅವಕಾಶ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಲೋಕಸಭಾ ಚುನಾವಣೆಗೂ ಮುನ್ನ ಬಿಬಿಎಂಪಿ ಚುನಾವಣೆ ನಡೆಸಿ ಗದ್ದುಗೆ ಹಿಡಿಯುವ ಹುಮ್ಮಸ್ಸು ಇದ್ದರೂ, ಆಡಳಿತಾರೂಢ ಕಾಂಗ್ರೆಸ್ ಸದ್ಯ ರಾಜಧಾನಿಯಲ್ಲಿ ಸ್ಥಗಿತಗೊಂಡಿರುವ ಕಾಮಗಾರಿಗಳನ್ನು ಆರಂಭಿಸಿ ಜನರ ಒಲವು ಗಳಿಸಿದರಷ್ಟೇ ಚುನಾವಣೆಗೆ ಹೋಗಲು ಸಾಧ್ಯ ಎಂಬ ಮಾತು ಕೇಳಿಬರುತ್ತಿದೆ.

    ಬದಲಾದ ವಾರ್ಡ್​ಗಳ ವಿವರ

    ವಾರ್ಡ್ ಸಂಖ್ಯೆ. ಹೊಸ ಹೆಸರು-ಹಿಂದಿನ ಹೆಸರು

    27 ಲಿಂಗಧೀರನಹಳ್ಳಿ- ಬ್ಯಾಡರಹಳ್ಳಿ

    46 ರಾಜೀವ್​ನಗರ- ಮಾರಪ್ಪನಪಾಳ್ಯ

    47 ಡಾ. ಪುನೀತ್ ರಾಜ್​ಕುಮಾರ್- ನಂದಿನಿ ಲೇಔಟ್

    50 ನಾಲ್ವಡಿ ಕೃಷ್ಣರಾಜ ಒಡೆಯರ್- ಡಾ. ಪುನೀತ್ ರಾಜ್​ಕುಮಾರ್

    83 ಸುಬ್ಬಯ್ಯನಪಾಳ್ಯ- ಕೆಎಸ್​ಎಫ್​ಸಿ ಲೇಔಟ್

    98 ಹೂಡಿ- ಬೆಳತ್ತೂರು

    99 ಬೈರತಿ- ಹೂಡಿ

    118 ಸಂಪಂಗಿರಾಮನಗರ -ಎಸ್.ಆರ್.ನಗರ

    165 ಬಿ.ವೆಂಕಟರೆಡ್ಡಿ- ಸೋಮೇಶ್ವರನಗರ

    167 ಅಶೋಕನಗರ- ಶಾಂತಲಾನಗರ

    196 ಗವಿಗಂಗಾಧರೇಶ್ವರ- ಹನುಮಂತನಗರ

    198 ದೊಡ್ಡ ಗಣಪತಿ-ಬಸವನಗುಡಿ

    200 ಸ್ವಾಮಿ ವಿವೇಕಾನಂದ- ಗಿರಿನಗರ

    ಬಿಬಿಎಂಪಿ ವಾರ್ಡ್ ವಿಂಗಡಣೆಯ ಅಂತಿಮ ಅಧಿಸೂಚನೆ

    ವಿಧಾನಸಭಾ ಕ್ಷೇತ್ರವಾರು ವಾರ್ಡ್ ಹೆಸರುಗಳ ವಿವರ

    ಯಲಹಂಕ ವಿಧಾನಸಭಾ ಕ್ಷೇತ್ರ

    1. ಕೆಂಪೇಗೌಡ

    2. ಚೌಡೇಶ್ವರಿ

    3. ಅಟ್ಟೂರು

    4. ಯಲಹಂಕ ಉಪನಗರ

    ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ

    5. ಕೋಗಿಲು

    6. ಜಕ್ಕೂರು

    7. ಥಣಿಸಂದ್ರ

    8. ಅಮೃತಹಳ್ಳಿ

    9. ಹೆಬ್ಬಾಳ ಕೆಂಪಾಪುರ

    10. ಬ್ಯಾಟರಾಯನಪುರ

    11. ಕೊಡಿಗೇಹಳ್ಳಿ

    12. ದೊಡ್ಡಬೊಮ್ಮಸಂದ್ರ

    13. ವಿದ್ಯಾರಣ್ಯಪುರ

    14. ಕುವೆಂಪುನಗರ

    ದಾಸರಹಳ್ಳಿ ವಿಧಾನಸಭಾ ಕ್ಷೇತ್ರ

    15. ಕಮ್ಮಗೊಂಡನಹಳ್ಳಿ

    16. ಮಲ್ಲಸಂದ್ರ

    17. ಚಿಕ್ಕಕಲ್ಲಸಂದ್ರ

    18. ಬಾಗಲಕುಂಟೆ

    19. ಟಿ.ದಾಸರಹಳ್ಳಿ

    20. ನೆಲಗದರನಹಳ್ಳಿ

    21. ಚೊಕ್ಕಸಂದ್ರ

    22. ಪೀಣ್ಯ ಕೈಗಾರಿಕೆ ಪ್ರದೇಶ

    23. ರಾಜಗೋಪಾಲನಗರ

    24. ಹೆಗ್ಗನಹಳ್ಳಿ

    25. ಸುಂಕದಕಟ್ಟೆ

    ಯಶವಂತಪುರ ವಿಧಾನಸಭಾ ಕ್ಷೇತ್ರ

    26. ದೊಡ್ಡಬಿದರಕಲ್ಲು

    27. ಬ್ಯಾಡರಹಳ್ಳಿ

    28. ಹೇರೋಹಳ್ಳಿ

    29. ಉಲ್ಲಾಳು

    30. ನಾಗದೇವನಹಳ್ಳಿ

    31. ಬಂಡೇಮಠ

    32. ಕೆಂಗೇರಿ

    33. ಹೆಮ್ಮಿಗೇಪುರ

    ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ

    34. ಜೆ.ಪಿ.ಪಾರ್ಕ್

    35. ಯಶವಂತಪುರ

    36. ಜಾಲಹಳ್ಳಿ

    37. ಪೀಣ್ಯ

    38. ಲಕ್ಷ್ಮೀದೇವಿನಗರ

    39. ಲಗ್ಗೆರೆ

    40. ಚೌಡೇಶ್ವರಿನಗರ

    41. ಕೊಟ್ಟಿಗೇಪಾಳ್ಯ

    42. ಶ್ರೀಗಂಧ ಕಾವಲ್

    43. ಮಲ್ಲತ್ತಹಳ್ಳಿ

    44. ಜ್ಞಾನಭಾರತಿ

    45. ರಾಜರಾಜೇಶ್ವರಿನಗರ

    ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರ

    46. ಮಾರಪ್ಪನಹಳ್ಳಿ

    47. ನಂದಿನಿ ಲೇಔಟ್

    48. ಮಹಾಲಕ್ಷ್ಮೀಪುರ

    49. ನಾಗಪುರ

    50. ಡಾ.ಪುನೀತ್ ರಾಜ್​ಕುಮಾರ್

    51. ಶಂಕರಮಠ

    52. ಶಕ್ತಿ್ತಣಪತಿನಗರ

    53. ವೃಷಭಾವತಿನಗರ

    ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ

    54. ಮತ್ತೀಕೆರೆ

    55. ಮಲ್ಲೇಶ್ವರ

    56. ಅರಮನೆನಗರ

    57. ರಾಜಮಹಲ್ ಗುಟ್ಟಹಳ್ಳಿ

    58. ಕಾಡುಮಲ್ಲೇಶ್ವರ

    59. ಸುಬ್ರಹ್ಮಣ್ಯನಗರ

    60. ಗಾಯತ್ರಿನಗರ

    ಹೆಬ್ಬಾಳ ವಿಧಾನಸಭಾ ಕ್ಷೇತ್ರ

    61. ರಾಧಾಕೃಷ್ಣ ದೇವಸ್ಥಾನ

    62. ಸಂಜಯನಗರ

    63. ಹೆಬ್ಬಾಳ

    64. ವಿಶ್ವನಾಥ ನಾಗೇನಹಳ್ಳಿ

    65. ಮನೋರಾಯನಪಾಳ್ಯ

    66. ಚಾಮುಂಡಿನಗರ

    67. ಗಂಗಾನಗರ

    68. ಜಯಚಾಮರಾಜೇಂದ್ರನಗರ

    ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರ

    69. ಕಾವಲ್​ಬೈರಸಂದ್ರ

    70. ಕುಶಾಲ್​ನಗರ

    71. ಮುನೇಶ್ವರನಗರ

    72. ದೇವರಜೀವನಹಳ್ಳಿ

    73. ಎಸ್.ಕೆ.ಗಾರ್ಡನ್

    74. ಸಗಾಯಪುರ

    75. ಪುಲಿಕೇಶಿನಗರ

    ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ

    76. ಹೆಣ್ಣೂರು

    77. ನಾಗವಾರ

    78. ಎಚ್​ಬಿಆರ್ ಲೇಔಟ್

    79. ಕಾಡುಗೊಂಡನಹಳ್ಳಿ

    80. ಕಾಚರಕನಹಳ್ಳಿ

    81. ಕಮ್ಮನಹಳ್ಳಿ

    82. ಬಾಣಸವಾಡಿ

    83. ಕೆಎಸ್​ಎಫ್​ಸಿ ಲೇಔಟ್

    84. ಲಿಂಗರಾಜಪುರ

    85. ಮಾರುತಿಸೇವಾನಗರ

    ಕೆ.ಆರ್.ಪುರ ವಿಧಾನಸಭಾ ಕ್ಷೇತ್ರ

    86. ಚಳ್ಳಕೆರೆ

    87. ಹೊರಮಾವು

    88. ಕಲ್ಕೆರೆ

    89. ವಿಜಿನಾಪುರ

    90. ರಾಮಮೂರ್ತಿನಗರ

    91. ಕೆ.ಆರ್.ಪುರ

    92. ಬಸವನಪುರ

    93. ದೇವಸಂದ್ರ

    94. ಎ.ನಾರಾಯಣಪುರ

    95. ವಿಜ್ಞಾನನಗರ

    96. ಎಚ್​ಎಎಲ್ ಏರ್​ಪೋರ್ಟ್

    ಮಹದೇವಪುರ ವಿಧಾನಸಭಾ ಕ್ಷೇತ್ರ

    97. ಕಾಡುಗೋಡಿ

    98. ಬೆಳತ್ತೂರು

    99. ಹೂಡಿ

    100. ಗರುಡಾಚಾರ್​ಪಾಳ್ಯ

    101. ದೊಡ್ಡನೆಕ್ಕುಂದಿ

    102. ಎಇಸಿಎಸ್ ಲೇಔಟ್

    103. ವೈಟ್​ಫೀಲ್ಡ್

    104. ವರ್ತರು

    105. ಮುನ್ನೆಕೊಳಲು

    106. ಮಾರತ್ತಹಳ್ಳಿ

    107. ಬೆಳ್ಳಂದೂರು

    ಸಿ.ವಿ. ರಾಮನ್​ನಗರ ವಿಧಾನಸಭಾ ಕ್ಷೇತ್ರ

    108. ಕಾಕ್ಸ್​ಟೌನ್

    109. ಬೆನ್ನಿಗಾನಹಳ್ಳಿ

    110. ಸಿ.ವಿ. ರಾಮನ್​ನಗರ

    111. ಕಗ್ಗದಾಸನಪುರ

    112. ಹೊಸ ತಿಪ್ಪಸಂದ್ರ

    113. ಹೊಯ್ಸಳನಗರ

    114. ಜೀವನ್​ಬಿಮಾನಗರ

    115. ಕೋನೇನ ಅಗ್ರಹಾರ

    ಶಿವಾಜಿನಗರ ವಿಧಾನಸಭಾ ಕ್ಷೇತ್ರ

    116. ರಾಮಸ್ವಾಮಿಪಾಳ್ಯ

    117. ವಸಂತನಗರ

    118. ಸಂಪಂಗಿರಾಮನಗರ

    119. ಶಿವಾಜಿನಗರ

    120. ಭಾರತಿನಗರ

    121. ಹಲಸೂರು

    ಗಾಂಧಿನಗರ ವಿಧಾನಸಭಾ ಕ್ಷೇತ್ರ

    122. ದತ್ತಾತ್ರೇಯ ದೇವಸ್ಥಾನ

    123. ಗಾಂಧಿನಗರ

    124. ಸುಭಾಷ್​ನಗರ

    125. ಓಕಳಿಪುರ

    126. ಬಿನ್ನಿಪೇಟೆ

    127. ಕಾಟನ್​ಪೇಟೆ

    128. ಚಿಕ್ಕಪೇಟೆ

    ರಾಜಾಜಿನಗರ ವಿಧಾನಸಭಾ ಕ್ಷೇತ್ರ

    129. ದಯಾನಂದನಗರ

    130. ಪ್ರಕಾಶ್​ನಗರ

    131. ಶ್ರೀರಾಮ ಮಂದಿರ

    132. ಶಿವನಗರ

    133. ಬಸವೇಶ್ವರನಗರ

    134. ಕಾಮಾಕ್ಷಿಪಾಳ್ಯ

    ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ

    135. ಡಾ. ರಾಜ್​ಕುಮಾರ್ ಅಗ್ರಹಾರ ದಾಸರಹಳ್ಳಿ

    136. ಗೋವಿಂದರಾಜನಗರ

    137. ಮಾರೇನಹಳ್ಳಿ

    138. ಕಾವೇರಿಪುರ

    139. ಮೂಡಲಪಾಳ್ಯ

    140. ಮಾರುತಿ ಮಂದಿರ

    141. ನಾಗರಭಾವಿ

    142. ಚಂದ್ರಾ ಲೇಔಟ್

    143. ನಾಯಂಡಹಳ್ಳಿ

    ವಿಜಯನಗರ ವಿಧಾನಸಭಾ ಕ್ಷೇತ್ರ

    144. ಕೆಂಪಾಪುರ ಅಗ್ರಹಾರ

    145. ವಿಜಯನಗರ

    146. ಹೊಸಹಳ್ಳಿ

    147. ಹಂಪಿನಗರ

    148. ಹೊಸ ಗುಡ್ಡದಹಳ್ಳಿ

    149. ಗಾಳಿ ಆಂಜನೇಯ ದೇವಸ್ಥಾನ

    150. ಅತ್ತಿಗುಪ್ಪೆ

    151. ದೀಪಾಂಜಲಿನಗರ

    152. ಆವಲಹಳ್ಳಿ

    ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ

    153. ಪಾದರಾಯನಪುರ

    154. ರಾಯಪುರಂ

    155. ದೇವರಾಜ್ ಅರಸ್​ನಗರ

    156. ಚಲವಾದಿಪಾಳ್ಯ

    157. ಕೆ.ಆರ್.ಮಾರುಕಟ್ಟೆ

    158. ಚಾಮರಾಜಪೇಟೆ

    159. ಆಜಾದ್​ನಗರ

    ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ

    160. ಧರ್ಮರಾಯಸ್ವಾಮಿ ದೇವಸ್ಥಾನ

    161. ಸಿಲ್ವರ್​ಜೂಬ್ಲಿ ಪಾರ್ಕ್

    162. ಸುಂಕೇನಹಳ್ಳಿ

    163. ವಿಶ್ವೇಶ್ವರಪುರ

    164. ಹೊಂಬೇಗೌಡನಗರ

    165. ಸೋಮೇಶ್ವರನಗರ

    ಶಾಂತಿನಗರ ವಿಧಾನಸಭಾ ಕ್ಷೇತ್ರ

    166. ಶಾಂತಿನಗರ

    167. ಶಾಂತಲಾನಗರ

    168. ನೀಲಸಂದ್ರ

    169. ವನ್ನಾರ್​ಪೇಟೆ

    170. ಜೋಗುಪಾಳ್ಯ

    171. ದೊಮ್ಮಲೂರು

    172. ಅಗರ

    ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ

    173. ಈಜಿಪುರ

    174. ಕೋರಮಂಗಲ

    175. ಜಕ್ಕಸಂದ್ರ

    176. ಆಡುಗೋಡಿ

    177. ಲಕ್ಕಸಂದ್ರ

    178. ಸುದ್ದಗುಂಟೆಪಾಳ್ಯ

    179. ಮಡಿವಾಳ

    180. ಸೋಮೇಶ್ವರ ದೇವಸ್ಥಾನ

    181. ಬಿಟಿಎಂ ಲೇಔಟ್

    ಜಯನಗರ ವಿಧಾನಸಭಾ ಕ್ಷೇತ್ರ

    182. ಬೈರಸಂದ್ರ

    183. ಗುರಪ್ಪನಪಾಳ್ಯ

    184. ಜಯನಗರ ಪೂರ್ವ

    185. ಜೆ.ಪಿ.ನಗರ

    186. ಶಾಕಾಂಬರಿನಗರ

    187. ಸಾರಕ್ಕಿ

    ಪದ್ಮನಾಭನಗರ ವಿಧಾನಸಭಾ ಕ್ಷೇತ್ರ

    188. ಯಡಿಯೂರು

    189. ಗಣೇಶ್​ವುಂದಿರ

    190. ದೇವಗಿರಿ ದೇವಸ್ಥಾನ

    191. ಬನಶಂಕರಿ ದೇವಸ್ಥಾನ

    192. ಕುಮಾರಸ್ವಾಮಿ ಲೇಔಟ್

    193. ಪದ್ಮನಾಭನಗರ

    194. ಚಿಕ್ಕಲಸಂದ್ರ

    195. ಹೊಸಕೆರೆಹಳ್ಳಿ

    ಬಸವನಗುಡಿ ವಿಧಾನಸಭಾ ಕ್ಷೇತ್ರ

    196. ಹನುಮಂತನಗರ

    197. ಶ್ರೀನಗರ

    198. ಬಸವನಗುಡಿ

    199. ವಿದ್ಯಾಪೀಠ

    200. ಗಿರಿನಗರ

    201. ಕತ್ರಿಗುಪ್ಪೆ

    ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ

    202. ಉತ್ತರಹಳ್ಳಿ

    203. ಸುಬ್ರಹ್ಮಣ್ಯಪುರ

    204. ವಸಂತಪುರ

    205. ಯಲಚೇನಹಳ್ಳಿ

    206. ಕೋಣನಕುಂಟೆ

    207. ಆರ್​ಬಿಐ ಲೇಔಟ್

    208. ಅಂಜನಾಪುರ

    209. ಗೊಟ್ಟಿಗೆರೆ

    210. ಕಾಳೇನ ಅಗ್ರಹಾರ

    211. ಬೇಗೂರು

    212. ನಾಗನಾಥಪುರ

    ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ

    213. ಜರಗನಹಳ್ಳಿ

    214. ಪುಟ್ಟೇನಹಳ್ಳಿ

    215. ಬಿಳೇಕಹಳ್ಳಿ

    216. ಹುಳಿಮಾವು

    217. ಕೋಡಿಚಿಕ್ಕನಹಳ್ಳಿ

    218. ಬೊಮ್ಮನಹಳ್ಳಿ

    219. ಹೊಂಗಸಂದ್ರ

    220. ಗಾರೆಭಾವಿಪಾಳ್ಯ

    221. ಎಚ್​ಎಸ್​ಆರ್ ಲೇಔಟ್

    222. ಇಬ್ಬಲೂರು

    223. ಮಂಗಮ್ಮನಪಾಳ್ಯ

    224. ಹೊಸ ರಸ್ತೆ

    ಆನೇಕಲ್ ವಿಧಾನಸಭಾ ಕ್ಷೇತ್ರ

    225. ಕೂಡ್ಲು

    ನಾಳೆ ಇಡೀ ಬೆಂಗಳೂರು ಬಂದ್ ಆಗ್ಬೇಕು; ಅದಾಗ್ಯೂ ವ್ಯಾಪಾರ ಮಾಡಿದ್ರೆ ಮುಂದಾಗುವ ತೊಂದರೆಗೆ ನೀವೇ ಹೊಣೆ: ಬಿಎಸ್​ವೈ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts