More

    ಅಗ್ನಿ ಅನಾಹುತದಿಂದ ಎಚ್ಚೆತ್ತ ಪಾಲಿಕೆ… ಅಪಾರ್ಟ್​ಮೆಂಟ್​ ಬಾಲ್ಕನಿಗಳ ಮೇಲೆ ಬಿಬಿಎಂಪಿ ಕಣ್ಣು

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯ ವಸತಿ ಸಮುಚ್ಛಯಗಳಲ್ಲಿ ಬಾಲ್ಕನಿಯಲ್ಲಿ ಬದಲಾವಣೆಗಳು ಹಾಗೂ ಇನ್ನಿತರ ಅಸುರಕ್ಷತಾ ಕಟ್ಟಡ ಮಾರ್ಪಾಡುಗಳನ್ನು ತಡೆಗಟ್ಟಲು ಬಿಬಿಎಂಪಿ ಮುಖ್ಯ ಆಯುಕ್ತರು ಮಹತ್ವದ ಸುತ್ತೋಲೆ ಹೊರಡಿಸಿದ್ದಾರೆ. ಬೆಂಗಳೂರಿನಲ್ಲಿ ನಿನ್ನೆ ಸಂಭವಿಸಿದ ಅಗ್ನಿ ದುರಂತದ ಸ್ಥಳ ತಪಾಸಣೆ ನಡೆಸಿದ ತಜ್ಞರ ಸಲಹೆಗಳ ಮೇರೆಗೆ ಪಾಲಿಕೆ ಈ ಆದೇಶ ಹೊರಡಿಸಿದೆ ಎನ್ನಲಾಗಿದೆ.

    ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕಟ್ಟಡಗಳಿಗೆ ಕಟ್ಟಡ ಉಪವಿಧಿ-2003, ಪರಿಷ್ಕೃತ ವಲಯ ನಿಯಮಾವಳಿಗಳು -2015 ಮತ್ತು ನ್ಯಾಷನಲ್ ಬಿಲ್ಡಿಂಗ್​ ಕೋಡ್​ ಆಫ್​ ಇಂಡಿಯ-2016ರ ಅನ್ವಯ ನಕ್ಷೆ ಮಂಜೂರಾತಿ, ಪ್ರಾರಂಭಿಕ ಪ್ರಮಾಣ ಪತ್ರ ಮತ್ತು ಸ್ವಾಧೀನಾನುಭವ ಪ್ರಮಾಣ ಪತ್ರಗಳನ್ನು ಪಡೆದ ನಂತರ ಕಟ್ಟಡಗಳ ಬಾಲ್ಕನಿಗಳನ್ನು ಸಂಪೂರ್ಣವಾಗಿ ಮುಚ್ಚುವುದು ಹಾಗೂ ಇನ್ನಿತರೆ ಅಸುರಕ್ಷತಾ ಕಟ್ಟಡ ಮಾರ್ಪಾಡುಗಳನ್ನು ಮಾಡಲು ನಿಯಮಾನುಸಾರ ಅವಕಾಶವಿರುವುದಿಲ್ಲ. ಆದಾಗ್ಯೂ ಕಟ್ಟಡ ಮಾಲೀಕರು ನಿಯಮಬಾಹಿರವಾಗಿ ಅಸುರಕ್ಷತೆಗೆ ಕಾರಣವಾಗುವಂತೆ ಕಟ್ಟಡ ಮಾರ್ಪಾಡು ಮಾಡುತ್ತಿರುವುದನ್ನು ಗಮನಿಸಲಾಗಿದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

    ಇದನ್ನೂ ಓದಿ: ಜೀವಂತ ಸುಟ್ಟುಹೋದಾಕೆಯ ಸಾವಿನ ಹಿಂದಿನ ಅಸಲಿ ಕಾರಣವೇ ಇದು!; ಅಪಾರ್ಟ್​ಮೆಂಟ್​ ಅಗ್ನಿ ಆಕಸ್ಮಿಕದ ಹಿಂದಿನ ದುರಂತ

    ಈ ಹಿನ್ನೆಲೆಯಲ್ಲಿ ನಿಯಮಾನುಸಾರ ಕಟ್ಟಡಗಳಿಗೆ ಪ್ರಮಾಣ ಪತ್ರಗಳನ್ನು ಪಡೆದ ನಂತರ ವಸತಿ ಸಮುಚ್ಚಯಗಳಲ್ಲಿ/ಇತರೆ ಕಟ್ಟಡಗಳಲ್ಲಿ ಬಾಲ್ಕನಿಯಲ್ಲಿ ಅಸುರಕ್ಷಿತ ಮಾರ್ಪಾಡುಗಳನ್ನು ತಡೆಗಟ್ಟಲು ಎಲ್ಲಾ ವಲಯ ಆಯುಕ್ತರು ಹಾಗೂ ಬೆಂಗಳೂರು ಅಪಾರ್ಟ್​ಮೆಂಟ್ಸ್​ ಫೆಡರೇಶನ್​ಗೆ ಸೂಚನೆ ಕಳುಹಿಸಲಾಗಿದೆ. ಒಂದು ವೇಳೆ ವಸತಿ ಸಮುಚ್ಚಯಗಳಲ್ಲಿ/ಇತರ ಕಟ್ಟಡಗಳಲ್ಲಿ ಮಾರ್ಪಾಡು ಅವಶ್ಯವಿದ್ದಲ್ಲಿ ಪಾಲಿಕೆಯ ಸಕ್ಷಮ ಪ್ರಾಧಿಕಾರಗಳಿಂದ ಕಡ್ಡಾಯವಾಗಿ ಪೂರ್ವಾನುಮತಿಗಳನ್ನು ಪಡೆಯಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

    ಬೆಂಕಿ ಅನಾಹುತ ಹಿನ್ನೆಲೆ: ಬೆಂಗಳೂರಿನ ದೇವರಚಿಕ್ಕನಹಳ್ಳಿಯಲ್ಲಿನ ಆಶ್ರಿತ್ ಆ್ಯಸ್ಪೈರ್​ ಅಪಾರ್ಟ್​ಮೆಂಟ್​ನಲ್ಲಿ ನಿನ್ನೆ ಸಂಭವಿಸಿದ ಅಗ್ನಿ ಆಕಸ್ಮಿಕದಿಂದಾಗಿ ಇಬ್ಬರು ಮಹಿಳೆಯರು ದಾರುಣ ಸಾವಿಗೀಡಾಗಿದ್ದರು. ಅನಾಹುತವಾದ ಫ್ಲ್ಯಾಟ್​ನಲ್ಲಿ ಸ್ಥಳ ಪರಿಶೀಲನೆ ಮಾಡುವ ವೇಳೆ, ಫ್ಲ್ಯಾಟ್​ನ ಬಾಲ್ಕನಿಯಲ್ಲಿ ಸಂಪೂರ್ಣ ಗ್ರಿಲ್​ ಅಳವಡಿಸಿ ಬಿಗಿ ಬಂದೋಬಸ್ತ್​ ಮಾಡಿರುವುದು ಕಂಡುಬಂದಿತ್ತು. ಮನೆಯ ಮಾಲೀಕರು, ಕಳ್ಳಕಾಕರು ಮನೆಗೆ ನುಗ್ಗಲು ಸಾಧ್ಯವಾಗದಿರಲಿ ಎಂದು ರಕ್ಷಣೆಯ ದೃಷ್ಟಿಯಿಂದ ಹಾಕಿಸಿಕೊಂಡಿದ್ದ ಈ ಗ್ರಿಲ್ಲೇ ಬೆಂಕಿ ಕಾಣಿಸಿಕೊಂಡಾಗ ತಪ್ಪಿಸಿಕೊಳ್ಳಲು ಮಾರ್ಗವಿಲ್ಲದ ಹಾಗೆ ಮಾಡಿತು ಎಂದು ಪರಿಣಿತರು ಅಭಿಪ್ರಾಯಪಟ್ಟಿದ್ದರು ಎನ್ನಲಾಗಿದೆ.

    ಕಾಲುಗಳಿಗೆ ಶಕ್ತಿ ನೀಡುವ ಸರಳ ಯೋಗಾಸನವಿದು; ಎಲ್ಲರೂ ಮಾಡಬಹುದು!

    ಭಾರತದ ಇನ್ನೆರಡು ಬೀಚ್​​ಗಳಿಗೆ ಅಂತಾರಾಷ್ಟ್ರೀಯ ಬ್ಲೂ ಫ್ಲ್ಯಾಗ್​ ಮಾನ್ಯತೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts