More

    ಪ್ರತಿಮೆಗಳನ್ನು ತೆರವುಗೊಳಿಸಿದರೆ ಉಗ್ರ ಹೋರಾಟ: ರಾಜಕುಮಾರ್-ವಿಷ್ಣುವರ್ಧನ್ ಅಭಿಮಾನಿಗಳ ಎಚ್ಚರಿಕೆ

    ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಅಭೂತಪೂರ್ವ ಕೊಡುಗೆ ನೀಡಿರುವ ಹಿರಿಯ ನಟರಾದ ಡಾ.ರಾಜಕುಮಾರ್ ಹಾಗೂ ಡಾ. ವಿಷ್ಣುವರ್ಧನ್ ಪ್ರತಿಮೆಯನ್ನು ತೆರವುಗೊಳಿಸಿದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಡಾ.ರಾಜಕುಮಾರ್ ಸೇನೆ ಹಾಗೂ ಡಾ.ವಿಷ್ಣುವರ್ಧನ್ ಸೇನಾ ಸಮಿತಿ ಜಂಟಿಯಾಗಿ ಬಿಬಿಎಂಪಿಗೆ ಎಚ್ಚರಿಕೆ ನೀಡಿವೆ.

    ಅನಧಿಕೃತ ರಾಜಾಕಾಲುವೆ, ಮಂದಿರ, ಮಸೀದಿ, ಚರ್ಚ್ ಹಾಗೂ ಕಟ್ಟಡಗಳನ್ನು ತೆರವುಗೊಳಿಸುವಂತೆ ಹೈಕೋರ್ಟ್ ಆದೇಶಿಸಿದೆ. ಆದರೆ, ಪ್ರತಿಮೆಗಳನ್ನು ತೆರವುಗೊಳಿಸುವಂತೆ ಹೇಳಿಲ್ಲ. ಬಿಬಿಎಂಪಿ ಅನಗತ್ಯವಾಗಿ ತೆರವುಗೊಳಿಸುವ ಪಟ್ಟಿಯಲ್ಲಿ ಪ್ರತಿಮೆಗಳನ್ನೂ ಸೇರಿಸಿಕೊಂಡಿವೆ. ಶಿವನಗರ, ಮಾಗಡಿ ರಸ್ತೆ, ಕೆ.ಪಿ.ಅಗ್ರಹಾರ, ನಾಗರಬಾವಿ ಮತ್ತು ಶೇಷಾದ್ರಿಪುರ, ರಾಜಾಜಿನಗರ ಸೇರಿ ನಗರದ 21 ಕಡೆಗಳಲ್ಲಿ ಪ್ರತಿಮೆಗಳನ್ನು ತೆರವುಗೊಳಿಸಲು ಬಿಬಿಎಂಪಿ ಗುರುತು ಹಾಕಿದೆ. ಪ್ರತಿಮೆ ತೆರವುಗೊಳಿಸಲು ಮುಂದಾದರೆ ಬಿಬಿಎಂಪಿಗೆ ಮುತ್ತಿಗೆ ಹಾಕಲಾಗುವುದು. ಶೀಘ್ರದಲ್ಲೇ ಸಿಎಂ ಅವರು ಭೇಟಿ ಮಾಡಿ ಪ್ರತಿಮೆಗಳನ್ನು ತೆರವುಗೊಳಿಸದಂತೆ ಮನವಿ ಸಲ್ಲಿಸಲಾಗುವುದು ಎಂದು ಡಾ.ರಾಜ್‌ಕುಮಾರ್ ಸೇನೆ ಸಮಿತಿ ಅಧ್ಯಕ್ಷ ವಿ.ತ್ಯಾಗರಾಜ್ ಭಾನುವಾರ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

    ಇದನ್ನೂ ಓದಿ: ಎರಡನೇ ಮದ್ವೆಯಾಗಿ ಹೊಸ ಜೀವನದ ಕನಸು ಕಂಡಿದ್ದವಳು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ಯಾಗ್ ಕದ್ದು ಜೈಲುಪಾಲಾದ್ಲು…

    ಅನಧಿಕೃತ ಪ್ರತಿಮೆ ಹಾಗೂ ಧ್ವಜಸ್ತಂಭ ತೆರವುಗೊಳಿಸುವಂತೆ ಹೈಕೋರ್ಟ್ ಆದೇಶಿಸಿದೆ. ಇದರಲ್ಲಿ ಕೇವಲ 21 ಪ್ರತಿಮೆಗಳನ್ನು ತೆರವುಗೊಳಿಸಲು ಮಾತ್ರ ಹೇಳಿದೆ. ಆದರೆ 198 ವಾರ್ಡ್‌ಗಳಲ್ಲೂ ನಟರ ಪ್ರತಿಮೆಗಳಿವೆ. ಕೇವಲ 3 ಅಡಿಯಲ್ಲಿ ನಿರ್ಮಾಣವಾದ ಪ್ರತಿಮೆಗಳಿಂದ ಸಾರ್ವಜನಿಕರಿಗೆ ಏನೂ ತೊಂದರೆ ಆಗಿಲ್ಲ. ಬಿಬಿಎಂಪಿಯಿಂದ ಈ ಪ್ರತಿಮೆಗಳನ್ನು ನಿರ್ಮಿಸಿಲ್ಲ. ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದಲ್ಲಿ ನಟರ ಹೆಸರಿನಲ್ಲಿ ರಕ್ತದಾನ ಶಿಬಿರ ಸೇರಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಏಕಾಏಕಿ ಪ್ರತಿಮೆಗಳನ್ನು ತೆರವುಗೊಳಿಸಲು ಮುಂದಾಗಿರುವುದು ಸರಿಯಲ್ಲ. ತೆರವು ಮುನ್ನ ಸಂಘ-ಸಂಸ್ಥೆಗಳಿಗೆ ನೋಟಿಸ್ ನೀಡಬೇಕು. ಬಳಿಕ, ನಮ್ಮ ಜತೆಗೆ ಚರ್ಚಿಸಬೇಕು. ಏಕಾಏಕಿ ತೆರವುಗೊಳಿಸಲು ಮುಂದಾದರೆ ಗೌರವ್ ಗುಪ್ತಗೆ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಡಾ.ವಿಷ್ಣುವರ್ಧನ್ ಸೇನಾ ಸಮಿತಿ ಅಧ್ಯಕ್ಷ ಕ್ರಾಂತಿ ರಾಜು ಎಚ್ಚರಿಕೆ ನೀಡಿದ್ದಾರೆ.

    ಕರೊನಾ ಲಸಿಕೆ ಹಾಕಿಸಿಕೊಳ್ಳದಿದ್ದರೆ ಪಿಂಚಣಿ-ಪಡಿತರವಿಲ್ಲ; ಈ ಕುರಿತ ಸತ್ಯಾಂಶವೇನು?

    ಪತಿಯನ್ನು ಬಿಟ್ಟು ಹೊರಟಿದ್ದ ಪತ್ನಿಯನ್ನು ಮತ್ತೆ ಮನೆಗೆ ಸೇರಿಸಿದ ಚಾರ್ಜರ್; ಮನೆ ಬಿಡುವಂತೆ ಮಾಡಿದ್ದು ಗಂಡನ ಫೋನಲ್ಲಿದ್ದ ಆ ಆಟ!

    ಸೊಸೆಯಂದಿರ ಕಾಟ ತಾಳಲಾಗದೆ ಊರು ಬಿಟ್ಟಿದ್ದಲ್ಲದೆ ನದಿಗೆ ಹಾರಿದ ವೃದ್ಧೆ; ಆತ್ಮಹತ್ಯೆಗೆ ಯತ್ನಿಸಿದವಳನ್ನು ರಕ್ಷಿಸಿದ ಯುವಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts