More

    ಸೋಂಕಿತರ ಮನೆ ಬಾಗಿಲಿಗೆ ತಗಡಿನ ಶೀಟ್​ ಹಾಕಿ ಸೀಲ್​ ಮಾಡಿದ ಬಿಬಿಎಂಪಿ: ಮೂರೇ ಗಂಟೆಯಲ್ಲಿ ತೆರವಾಗಿದ್ದೇಕೆ?

    ಬೆಂಗಳೂರಿನ ಮನೆಯೊಂದರಲ್ಲಿ ಇಬ್ಬರಿಗೆ ಕರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರ ಮನೆಯನ್ನು ತಗಡಿನ ಶೀಟ್​ಗಳನ್ನು ಹಾಕಿ ಸೀಲ್​ ಮಾಡಲಾಗಿತ್ತು. ಈ ಮನೆಯ ಪಕ್ಕದಲ್ಲೇ ಇನ್ನೂ ಒಂದು ಮನೆಯಿದ್ದು, ಎರಡೂ ಮನೆಯ ಬಾಗಿಲನ ಎದುರು ತಗಡಿನ ಶೀಟ್ ಹಾಗಿ, ಕಂಟೇನ್​ಮೆಂಟ್ ಝೋನ್​ ಎಂದು ಪರಿಗಣಿಸಲಾಗಿತ್ತು.

    ಆದರೆ ಹೀಗೆ ಅವೈಜ್ಞಾನಿಕವಾಗಿ ಮನೆಯನ್ನು ಸೀಲ್​ಡೌನ್​ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಖಂಡನೆ ವ್ಯಕ್ತವಾಗಿತ್ತು.
    ಅದೇ ಕಟ್ಟಡದಲ್ಲಿದ್ದವರೊಬ್ಬರು ಮನೆಯನ್ನು ಸೀಲ್​ಡೌನ್​ ಮಾಡಿದ ಫೋಟೋಗಳನ್ನು ಶೇರ್​ ಮಾಡಿಕೊಂಡು, ಹೀಗೆಲ್ಲ ಸೀಲ್ ಡೌನ್​ ಮಾಡಿದರೆ ಹೇಗೆ? ಇದು ಅಪಾಯವಲ್ಲವೇ ಎಂದು ಪ್ರಶ್ನಿಸಿದ್ದರು. ಇಲ್ಲಿ ನೆರೆಮನೆಯಲ್ಲಿ ಇದ್ದವರು ವಯಸ್ಸಾದವರು. ಇಬ್ಬರು ಪುಟ್ಟ ಮಕ್ಕಳೊಂದಿಗೆ ಮಹಿಳೆಯೋರ್ವರೂ ಇದ್ದಾರೆ. ತಗಡಿನ ಶೀಟ್​ ಹಾಕಿಟ್ಟು ಹೋದರೆ ಮನೆಯೊಳಗೆ ಏನಾದರೂ ಸಮಸ್ಯೆಯಾದರೆ ಅಲ್ಲಿದ್ದವರು ಏನು ಮಾಡಬೇಕು. ಅದೆಲ್ಲ ಬಿಡಿ..ಮನೆಯೊಳಗೆ ಬೆಂಕಿ ಕಾಣಿಸಿಕೊಂಡರೆ ಅದರೊಳಗೆ ಇದ್ದ ವಯಸ್ಸಾದವರು, ಮಕ್ಕಳು ತಕ್ಷಣ ಪಾರಾಗುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದರು. ಅಷ್ಟೇ ಅಲ್ಲ, ಬಿಬಿಎಂಪಿ ಆಯುಕ್ತರು, ಮೇಯರ್​, ಮುಖ್ಯಮಂತ್ರಿಗಳ ಖಾತೆಯನ್ನು ಟ್ಯಾಗ್​ ಕೂಡ ಮಾಡಿದ್ದರು. ಅದನ್ನು ನೋಡಿದ ಸಾಮಾಜಿಕ ಜಾಲತಾಣಗಳ ಬಳಕೆದಾರರು ಕೂಡ ವಿರೋಧ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಕೊವಿಡ್​-19ಗೆ 2021ರೊಳಗೆ ಲಸಿಕೆ ಸಿಗುತ್ತದೆ ಎಂಬ ನಿರೀಕ್ಷೆಯೇ ಬೇಡ: ಡಬ್ಲ್ಯೂಎಚ್​ಒ

    ಸೋಷಿಯಲ್​ ಮೀಡಿಯಾದಲ್ಲಿ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ತಗಡಿನ ಶೀಟ್​ಗಳನ್ನು ತೆಗೆದುಹಾಕಲಾಗಿದೆ. ಸ್ವತಃ ಬಿಬಿಎಂಪಿ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲಿನ ನಿವಾಸಿಗಳ ಆರೋಗ್ಯ ಮತ್ತು ಅಗತ್ಯ ಸಾಮಗ್ರಿಗಳ ಪೂರೈಕೆ ಬಗ್ಗೆ ಗಮನಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನಿರ್ಲಕ್ಷ್ಯ ವಹಿಸಿದ್ದವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
    ಪೂರ್ವ ವಲಯ ಅಧಿಕಾರಿ, ಕಂಟೇನ್​ಮೆಂಟ್​ ಮಾಡುವ ಮೇಲ್ವಿಚಾರಣೆ ಇಂಜಿನಿಯರ್​​ಗೆ ನೋಟಿಸ್ ಕಳಿಸಲಾಗಿದೆ.

    ಸೋಂಕಿತರ ಮನೆ ಬಾಗಿಲಿಗೆ ತಗಡಿನ ಶೀಟ್​ ಹಾಕಿ ಸೀಲ್​ ಮಾಡಿದ ಬಿಬಿಎಂಪಿ: ಮೂರೇ ಗಂಟೆಯಲ್ಲಿ ತೆರವಾಗಿದ್ದೇಕೆ?

    VIDEO: ವಾಕ್ಯೂಮ್​ ಕ್ಲೀನರ್​​ನಿಂದ ಮೊಟ್ಟೆಗೆ ಹಾಕಿದ್ದ ಮೆಣಸಿನ ಪುಡಿ ತೆಗೆಯಲು ಹೋದವನಿಗಾಯ್ತು ಮುಜುಗರ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts