More

    ಬಿಬಿಎಂಪಿ ಕಾರ್ಪೋರೇಟರ್‌ಗೂ ಬಂತು ಕರೊನಾ ಪಾಸಿಟಿವ್!

    ಬೆಂಗಳೂರು: ಸೀಲ್‌ಡೌನ್ ಆಗಿರುವ ಪಾದರಾಯನಪುರ ನಿವಾಸಿಗಳ ಜತೆ ಸಂಪರ್ಕ ಹೊಂದಿದ್ದ ಬಿಬಿಎಂಪಿ ಕಾರ್ಪೋರೇಟರ್ ಒಬ್ಬರಿಗೆ ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಆಮೂಲಕ ವಾರ್ಡ್ ಅಷ್ಟೇ ಅಲ್ಲದೆ, ಬಿಬಿಎಂಪಿಯಲ್ಲೂ ಆತಂಕ ಸೃಷ್ಟಿಯಾಗಿದೆ.

    ತಬ್ಲಿಘ್ ಜಮಾತ್‌ನಲ್ಲಿ ಭಾಗಿಯಾಗಿದ್ದವರಿಂದಾಗಿ ಕರೊನಾ ಸೋಂಕಿನ ಪ್ರಕರಣ ಹೆಚ್ಚಾಗಿದ್ದ ಪಾದರಾಯನಪುರ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿತ್ತು. ಈ ಪ್ರದೇಶದೊಂದಿಗೆ ಕಾರ್ಪೋರೇಟರ್ ನಿತ್ಯ ಸಂಪರ್ಕದಲ್ಲಿದ್ದರು. ಇತ್ತೀಚೆಗೆ ಅವರಿಗೆ ಸೋಂಕಿನ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಶುಕ್ರವಾರ ಬಂದ ವರದಿಯಂತೆ ಸೋಂಕಿರುವುದು ದೃಢಪಟ್ಟಿದೆ. ಇದೀಗ ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಕುಟುಂಬದವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

    ಇದನ್ನೂ ಓದಿ ‘ಕರೊನಾ ಬಗ್ಗೆ ತಿಳಿವಳಿಕೆ ಹೇಳಿದ್ದಕ್ಕೆ ಹೊಡೆದರು, ನಿಂದಿಸಿದರು’: ಆಶಾ ಕಾರ್ಯಕರ್ತೆಯ ಅಳಲು

    ಜೆಡಿಎಸ್ ಸದಸ್ಯರಾಗಿರುವ ಅವರು ಸ್ಥಳೀಯ ಶಾಸಕರೊಂದಿಗೂ ಸಂಪರ್ಕದಲ್ಲಿದ್ದರು. ಅವರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿರುವವರನ್ನು ಪತ್ತೆ ಹಚ್ಚುವುದೇ ಬಿಬಿಎಂಪಿ ಅಧಿಕಾರಿಗಳಿಗೆ ತಲೆನೋವಾಗಿದೆ.

    ಸಮಾಧಾನಕರ ವಿಷಯವೆಂದರೆ ಗುರುವಾರ ನಡೆದಿದ್ದ ಬಿಬಿಎಂಪಿ ಕೌನ್ಸಿಲ್ ಸಭೆಗೆ ಅವರು ಹಾಜರಾಗಿರಲಿಲ್ಲ. ಒಂದು ವೇಳೆ ಹಾಜರಾಗಿದ್ದರೆ, ಬಿಬಿಎಂಪಿಯ ಇನ್ನಷ್ಟು ಸದಸ್ಯರಿಗೂ ಸೋಂಕು ತಗಲುವ ಸಾಧ್ಯತೆಗಳಿದ್ದವು. ಅವರೊಂದಿಗೆ ಅವರ ಕುಟುಂಬದವರು, ವಾರ್ಡ್‌ನ ಜನರಿಗೂ ಸೋಂಕು ಹರಡುವಂತಾಗುತ್ತಿತ್ತು.

    ಗೋಮಾಂಸ, ಹಿಂದುದ್ವೇಷ… ಭಾರತೀಯರು ‘ಪಾತಾಳಲೋಕ’ ವಿರೋಧಿಸುತ್ತಿರುವುದಕ್ಕೆ ಇಲ್ಲಿವೆ ಕಾರಣಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts