More

    ಗೋಮಾಂಸ, ಹಿಂದುದ್ವೇಷ… ಭಾರತೀಯರು ‘ಪಾತಾಳಲೋಕ’ ವಿರೋಧಿಸುತ್ತಿರುವುದಕ್ಕೆ ಇಲ್ಲಿವೆ ಕಾರಣಗಳು!

    ನವದೆಹಲಿ: ‘ಪಾತಾಳ ಲೋಕ’ ವೆಬ್ ಸರಣಿ ಇತ್ತೀಚೆಗೆ ದೇಶಾದ್ಯಂತ ವಿವಾದದ ದೊಡ್ಡ ಅಲೆಯನ್ನೇ ಸೃಷ್ಟಿಸಿದೆ. ಮೇ 15ರಿಂದ ಅಮೆಜಾನ್ ಪ್ರೈಮ್‌ನಲ್ಲಿ ಪ್ರಸಾರವಾಗುತ್ತಿರುವ ಈ ಸರಣಿಯನ್ನು ಭಾರತೀಯರು ವಿರೋಧಿಸುತ್ತಿರುವುದಕ್ಕೆ ಹಲವು ಕಾರಣಗಳಿವೆ.

    ಬಿಜೆಪಿ ನಾಯಕರೊಬ್ಬರ ಫೋಟೋ ಬಳಸಿರುವುದು, ಉತ್ತರ ಭಾರತದ ಜಾತಿ ಪದ್ಧತಿಯನ್ನು ವೈಭವೀಕರಿಸಿರುವುದು ಮುಂತಾಗಿ ಅನೇಕ ವಿವಾದಾತ್ಮಕ ಅಂಶಗಳು ಅದರಲ್ಲಿವೆ. ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇದರ ನಿರ್ಮಾಪಕಿ. ಈ ವೆಬ್ ಸರಣಿ ನಿರ್ಮಿಸುವ ಮೂಲಕ ಅನುಷ್ಕಾ ಬಹಳಷ್ಟು ಭಾರತೀಯರ ವಿರೋಧವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

    ಇದನ್ನೂ ಓದಿ   ನೀವು ವೈದ್ಯಕೀಯ ಶಿಕ್ಷಣ ಪಡೆದಿದ್ದೀರಾ? ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿದೆ ಮೆಡಿಕಲ್ ಜಾಬ್

    ಒಬ್ಬ ಸಾಧು ಗೋಮಾಂಸ ತಿನ್ನುವುದನ್ನು ಇತ್ತೀಚಿನ ಎಪಿಸೋಡ್‌ನಲ್ಲಿ ತೋರಿಸಲಾಗಿದೆ. ಆತನ ಹಿಂದೆ ದೇವರ ಚಿತ್ರವಿದೆ. ನಟ ರಾಜೇಶ್ ಶರ್ಮಾ (ಜ್ವಾಲಾ ಗುಜ್ಜರ್ ಪಾತ್ರಧಾರಿ) ಮಟನ್ ತಿನ್ನುತ್ತಿರುವುದು, ಆತನಿಗೆ ಒಬ್ಬ ಸಾಧು ಬ್ರೆಡ್ ನೀಡುತ್ತಿರುವುದು ಕೂಡ ಈ ಹಿಂದಿನ ಎಪಿಸೋಡ್‌ನಲ್ಲಿದೆ.

    ಇಂತಹ ದೃಶ್ಯಗಳನ್ನು ನೋಡಿ ತೀವ್ರ ಅಸಮಾಧಾನಗೊಂಡಿರುವ ಜನ ಈ ವೆಬ್‌ಸರಣಿಯನ್ನೇ ನಿಷೇಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಹಿಂದುಫೋಬಿಕ್, ಬಾಯ್ಕಟ್‌ಪಾತಾಳ್‌ಲೋಕ್ ಮುಂತಾದ ಹ್ಯಾಷ್‌ಟ್ಯಾಗ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಕಳೆದ ಕೆಲವು ದಿನಗಳಿಂದ ಬಹಳಷ್ಟು ಸದ್ದು ಮಾಡುತ್ತಿವೆ.

    ಇದನ್ನೂ ಓದಿ  300ರ ಗಡಿ ದಾಟಿತು ಬೆಂಗಳೂರು: 11 ಜಿಲ್ಲೆಗಳಲ್ಲಿ ಶತಕ ಮೀರಿದ ಕರೊನಾ ಸೋಂಕು!

    ಇದಕ್ಕೆ ಮುನ್ನ ನಿರ್ಮಾಪಕಿ ಅನುಷ್ಕಾ ಶರ್ಮಾ ವಿರುದ್ಧ ಉತ್ತರ ಪ್ರದೇಶ ಶಾಸಕ ನಂದಕಿಶೋರ್ ಗುರ್ಜರ್ ಪೊಲೀಸರಿಗೆ ದೂರು ಸಲ್ಲಿಸಿದ್ದರು. ವೆಬ್ ಸರಣಿಯಲ್ಲಿ ಅನುಮತಿ ಪಡೆಯದೇ ತಮ್ಮ ಫೋಟೋ ಬಳಸಲಾಗಿದೆ ಎಂಬುದು ಅವರ ಆರೋಪ. ವಿರಾಟ್ ಕೊಹ್ಲಿ ನಿಜವಾದ ಭಾರತೀಯನಾಗಿದ್ದರೆ ಅನುಷ್ಕಾಗೆ ವಿಚ್ಛೇದನ ಕೊಡಬೇಕು ಎಂದೂ ಅವರು ಆಗ್ರಹಿಸಿದ್ದರು.

    ಅಷ್ಟೇ ಅಲ್ಲ, ದೆಹಲಿ ಸಿಖ್ ಗುರುದ್ವಾರ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮಂಜಿಂದರ್ ಸಿಂಗ್ ಸಿರ್ಸಾ ಕೂಡ ಈ ಸರಣಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಸಿಖ್ಖರನ್ನೂ ಅವಹೇಳನ ಮಾಡಲಾಗಿದೆ. ಸನ್ನಿವೇಶವೊಂದರಲ್ಲಿ ಒಬ್ಬ ಸಿಖ್ ಧರ್ಮೀಯ ಮಹಿಳೆಯನ್ನು ಅತ್ಯಾಚಾರ ಮಾಡುವ ದೃಶ್ಯವಿದೆ. ಈ ಸರಣಿಯನ್ನೇ ನಿಷೇಧಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.

    ನೇಪಾಳಿಗಳನ್ನು ಈ ವೆಬ್‌ಸಿರೀಸ್‌ನಲ್ಲಿ ನಿರಂತರವಾಗಿ ಅವಹೇಳನ ಮಾಡಲಾಗುತ್ತಿದೆ ಎಂದು ಅನುಷ್ಕಾಗೆ ಲಾಯರ್ಸ್ ಗಿಲ್ಡ್‌ನಿಂದ ನೋಟಿಸ್ ಹೋಗಿದೆ.

    ಸುಪ್ರೀಂಕೋರ್ಟ್​ ಮುಖ್ಯನ್ಯಾಯಮೂರ್ತಿ ಕುರ್ಚಿಗೆ ಕರ್ನಾಟಕ ಬರೆಯಲಿದೆಯೇ ಇತಿಹಾಸ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts