More

    BBKS10: ಆರದ ಕಿಚ್ಚು!; ‘ನಾವು ಆನೆ ವಿರೋಧಿಗಳಲ್ಲ’ ಎಂದ ಸಂಗೀತಾ!

    ಬೆಂಗಳೂರು: ಬಿಗ್​ ಬಾಸ್​ ಕನ್ನಡ ಸೀಸನ್​ 10 ಪ್ರಾರಂಭಗೊಂಡು ಇದೀಗ ಐದನೇ ವಾರದತ್ತ ಸಾಗುತ್ತಿದೆ. ಈ ನಡುವೆ ಮನೆಯ ಸದಸ್ಯರ ಮಧ್ಯೆಯಿರುವ ಮನಸ್ತಾಪಗಳು ಬೂದಿ ಮುಚ್ಚಿದ ಕೆಂಡದಂತಿದ್ದರೂ, ತಮ್ಮ ಪ್ರತಿಸ್ಪರ್ಧಿಗಳೊಡನೆ ನಗುನಗುತ್ತಲೇ ಮುಂದೆ ಸಾಗುತ್ತಿದ್ದಾರೆ. ವಿನಯ್​-ಕಾರ್ತಿಕ್​, ಸಂಗೀತಾ ತೀವ್ರ ಮಾತಿನ ಜಟಾಪಟಿಯಲ್ಲಿ ಭಾಗಿಯಾಗಿದ್ದು, ಏಕವಚನದ ಚೌಕಟ್ಟನ್ನು ಮೀರಿದ್ದಾರೆ.

    ಇದನ್ನೂ ಓದಿ: ಇನ್ಮುಂದೆ ರೋಹಿತ್​ ಶರ್ಮ DRS​ ಮನವಿ ಮಾಡುವುದಿಲ್ಲ! ಅದಕ್ಕೆ ಕಾರಣ ಈ ವ್ಯಕ್ತಿಗಳು…

    ಈ ವಾರಕ್ಕೆ ಬಿಗ್​ ಬಾಸ್​ ಸ್ಪರ್ಧಿಗಳಿಗೆ ಹಳ್ಳಿ ಟಾಸ್ಕ್​ವೊಂದನ್ನು ಮನರಂಜನಾ ದೃಷ್ಟಿಯಿಂದ ನೀಡಿದ್ದರು. ಇದರಲ್ಲಿ ಮೊದ ಮೊದಲು ಉತ್ಸಾಹದಿಂದ ಭಾಗಿಯಾದ ಸದಸ್ಯರು ತದನಂತರ ಪದಬಳಕೆ ಮೂಲಕ ತಮ್ಮ ವ್ಯಕ್ತಿತ್ವದ ಪ್ರಶ್ನೆಯನ್ನು ತಾವೇ ಕೆದಕಿಕೊಂಡರು. ​ಸದ್ಯ ಟಾಸ್ಕ್​ನಲ್ಲಿ ವಿನಯ್​ ನೇತೃತ್ವದ ತಂಡ ಜಯಶಾಲಿಯಾಗಿ, ಮನೆಯ ಲಕ್ಸುರಿ ಬಜೆಟ್​ಗೆ ಅರ್ಹರಾಗಿದೆ.

    ಈ ಬೆನ್ನಲ್ಲೇ ಕ್ಯಾಪ್ಟನ್ಸಿ ಟಾಸ್ಕ್​ ನಡೆದಿದ್ದು, ತುಕಾಲಿ ಸಂತೋಷ್​ ಮತ್ತು ವಿನಯ್​ ಇಬ್ಬರು ನಾಯಕನ ಸ್ಥಾನಕ್ಕೆ ಪೈಪೋಟಿ ನೀಡಿದರು. ಅಂತಿಮವಾಗಿ ಗೆಲುವಿನ ಮುಖೇನ ಮನೆಯ ಕ್ಯಾಪ್ಟನ್​ ಆಗಿ ವಿನಯ್ ​ಆಯ್ಕೆಯಾಗಿದ್ದಾರೆ. ಆನೆ ಬಂತೊಂದು ಆನೆ ಎಂದು ಘರ್ಜಿಸಿದ ವಿನಯ್​ ನೋಡಿದ ಸಂಗೀತಾ, ‘ಇದು ನಮ್ಮ ವಸ್ಟ್​ ವೀಕ್​ ಆಗಲಿದೆ. ನಾವು ಆನೆ ವಿರೋಧಿಗಳಲ್ಲ. ಆನೆ ಕಂಡರೆ ಹೆದರುವುದಿಲ್ಲ’ ಎಂದು ಟಕ್ಕರ್​ ಕೊಟ್ಟಿದ್ದಾರೆ.

    ಇದನ್ನೂ ಓದಿ: ಕುಮಾರಸ್ವಾಮಿ ಏನೇನೋ ಮಾತಾಡ್ತಾರೆ…ಲಿಂಕ್​ ಮಿಸ್​ ಆಗಿರಬೇಕು ಎಂದ ಡಿಕೆಶಿ

    ಈ ಮಾತುಗಳು ಈ ವಾರಾಂತ್ಯದಲ್ಲೇ ಅಂತ್ಯವಾಗಲಿದೆಯಾ ಅಥವಾ ಮುಂದಿನ ಟಾಸ್ಕ್​ನಲ್ಲಿ ಮುಂದುವರೆಯಲಿದ್ಯಾ? ಎಂಬುದು ಶನಿವಾರ ನಡೆಯಲಿರುವ ವಾರದ ಕಥೆ ಕಿಚ್ಚನ ಜತೆ ಸಂಚಿಕೆಯಲ್ಲಿ ಸುದೀಪ್​ ಅವರ ಖಡಕ್​ ಸಲಹೆಗಳಿಂದ ತಿಳಿಯಲಿದೆ.

    ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್​​ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.

    ಕೆಇಎ ಪರೀಕ್ಷೆ ಅಕ್ರಮ; ಏಳು ಜನ ಪೊಲೀಸ್ ಕಸ್ಟಡಿಗೆ, ಈ ಮಾಹಿತಿ ಕಲೆಹಾಕಲು ಮುಂದಾದ ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts