More

    ನಶಿಸುತ್ತಿರುವ ಕಲೆಗಳನ್ನು ಉಳಿಸಿ

    ಸಂಡೂರು: ಬಯಲಾಟ, ನಾಟಕ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯವಾಗಲಿ ಎಂದು ಮಾಜಿ ತಾಪಂ ಸದಸ್ಯ ಬಾಣ್ದಾರ್ ಸುಬಾನ್ ಸಾಬ್ ಹೇಳಿದರು.
    ತಾಲೂಕಿನ ಕೃಷ್ಣಾನಗರದಲ್ಲಿ ಕನಕ ಜಯಂತಿ ಪ್ರಯುಕ್ತ ಕರ್ನಾಟಕ ನಾಟಕ ಮಂಡಳಿ ಏರ್ಪಡಿಸಿದ್ದ ಪಾಂಡು ವಿಜಯ ಆರ್ಥಾತ್ ಕೀಚಕನ ವಧೆ ಬಯಲಾಟ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಲೆನಾಡಿನಲ್ಲಿ ಶಿವರಾಮ ಕಾರಂತರು ಹಾಗೂ ಕಲಾವಿದರು ಯಕ್ಷಗಾನ ಕಲೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದರು ಎಂದರು.

    ಕಲೆಗಳನ್ನು ಬೆಳೆಸುವ ಕಾರ್ಯವಾಗಲಿ

    ಬಯಲಾಟದ ಮ್ಯಾನೇಜರ್ ಕುಮಾರಸ್ವಾಮಿ ಕೋಟೆ ಮಾತನಾಡಿ, ಗಂಡುಮೆಟ್ಟಿನ ಕಲೆಯಾದ ಬಯಲಾಟ ಕೇವಲ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಿಗೆ ಸೀಮಿತ ಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಹಾರ್ಮೋನಿಯಂ ಮಾಸ್ಟರ್ಸ್‌, ಹಿನ್ನೆಲೆ ಗಾಯಕರು, ಕಲಾವಿದರು ಸಿಗುವುದು ಸಹ ಕಷ್ಟವಿದೆ. ನಶಿಸುತ್ತಿರುವ ಕಲೆಯನ್ನು ಉಳಿಸಿ ಎಂದರು. ಹಾರ್ಮೋನಿಯಂ ಮಾಸ್ತರ್ ಪಿ.ಕೆ.ಹಳ್ಳಿ ಇ.ನರಸನಗೌಡ, ಮುಖಂಡರಾದ ಬಿಂಗಿ ಪೋತಲಿಂಗಪ್ಪ, ಕೆ.ಪಂಪಾಪತಿ ಇನ್ನಿತರರಿದ್ದರು.

    ಇದನ್ನೂ ಓದಿ: ದೋಚಿದ ಹಣ ಜಪ್ತಿ ಪೊಲೀಸರಿಗೆ ಸವಾಲು!; ಸೈಬರ್​ ಕ್ರೈಂ ಕೇಸ್​ಗಳಲ್ಲೂ ಹಣ ಹಿಂತೆಗೆತ

    ಬಾಲಕೃಷ್ಣನಾಗಿ ಕೆ.ರಂಜಿತ, ಕೌರವ ಒಣಿಮನೆ ಶೇಕ, ಕರ್ಣ ಎಂ.ವಿನೋದ, ದುಶ್ಯಸನ ಕೆ.ಕುಮಾರ, ಕೀಚಕ ಹನುಮಂತಪ್ಪ, ಧರ್ಮರಾಯ ಕೆ.ಚಂದ್ರಪ್ಪ, ಭೀಮ ಕೆ.ಶಿವಪ್ಪ, ಅರ್ಜುನ ಕೆ.ಹುಚ್ಚಪ್ಪ, ಚಿತ್ರಸೇನ ಕೆ.ವಸಂತ, ಉಗ್ರಶೇನ ಕೆ.ಎಂ.ಶಿವು, ದ್ರೌಪದಿ ಶಶಿಕಲಾ ಕೂಡ್ಲಿಗಿ, ಪದ್ಮಗಾಂಧಿ, ಭಾನುಮತಿ, ಸುದಿಷ್ಣೆಯಾಗಿ ವೈ.ಸುಮಾ ಕೂಡ್ಲಿಗಿ ಅಭಿನಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts