More

    ಸಚಿನ್ ತೆಂಡುಲ್ಕರ್​ ಬದಲಾಗಬೇಕು ಎಂದಿರುವ ಐಸಿಸಿ ನಿಯಮ ಯಾವುದು ಗೊತ್ತೇ?

    ನವದೆಹಲಿ: ಇಂಗ್ಲೆಂಡ್-ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಪಂದ್ಯದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಪುನರಾರಂಭ ಕಂಡಿರುವ ಸಮಯದಲ್ಲಿ ಬ್ಯಾಟಿಂಗ್ ದಿಗ್ಗಜ ನಿಯಮವೊಂದರ ಬದಲಾವಣೆಗಾಗಿ ಐಸಿಸಿಗೆ ಮನವಿ ಸಲ್ಲಿಸಿದ್ದಾರೆ. ಐಸಿಸಿಯ ಈ ನಿಯಮವನ್ನು ನಾನು ಒಪ್ಪಿಕೊಳ್ಳುವುದಿಲ್ಲ ಎಂದು ಸಚಿನ್ ಹೇಳಿದ್ದಾರೆ. ಅದು ಯಾವ ನಿಯಮ ಗೊತ್ತೇ?

    ಬ್ಯಾಟ್ಸ್‌ಮನ್ ವಿರುದ್ಧ ಎಲ್‌ಬಿಡಬ್ಲ್ಯುಗೆ ಬೌಲರ್ ಮನವಿ ಸಲ್ಲಿಸಿದ ಸಮಯದಲ್ಲಿ ಚೆಂಡು ಎಷ್ಟೇ ಶೇಕಡ ಪ್ರಮಾಣದಲ್ಲಿ ವಿಕೆಟ್‌ಗೆ ಬಡಿಯುವಂತಿದ್ದರೂ ಔಟ್ ತೀರ್ಪು ನೀಡುವ ಬಗ್ಗೆ ಐಸಿಸಿ ಪರಿಶೀಲನೆ ನಡೆಸಬೇಕೆಂದು ಸಚಿನ್ ತೆಂಡುಲ್ಕರ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ‘ಚೆಂಡು ಎಷ್ಟೇ ಶೇಕಡದಷ್ಟು ಸ್ಟಂಪ್ಸ್‌ಗೆ ಬಡಿಯುವಂತಿರಲಿ. ಅದು ವಿಷಯವಾಗುವುದಿಲ್ಲ. ಡಿಆರ್‌ಎಸ್ ವೇಳೆ ಚೆಂಡು ವಿಕೆಟ್‌ಗೆ ಬಡಿಯುತ್ತಿರುವಂತೆ ಕಾಣಿಸಿದರೆ ಆಗ ಔಟ್ ನೀಡಬೇಕು. ಮೈದಾನದ ಅಂಪೈರ್ ಏನೇ ತೀರ್ಪು ನೀಡಿದ್ದರೂ ಇದು ಅನ್ವಯಿಸಬೇಕು. ಕ್ರಿಕೆಟ್‌ನಲ್ಲಿ ತಂತ್ರಜ್ಞಾನದ ಬಳಕೆಯ ಉದ್ದೇಶ ಅದುವೇ ಆಗಿದೆ. ನಮಗೆ ತಿಳಿದಿರುವಂತೆ ತಂತ್ರಜ್ಞಾನಗಳು ಶೇ. 100ರಷ್ಟು ಸರಿಯಲ್ಲ. ಮನುಷ್ಯ ಕೂಡ ಅದೇ ರೀತಿ ಇರುತ್ತಾನೆ’ ಎಂದು ಸಚಿನ್ ತೆಂಡುಲ್ಕರ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಜತೆಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ ಜತೆಗಿನ ಮಾತುಕತೆಯ ವಿಡಿಯೋವನ್ನೂ ಪ್ರಕಟಿಸಿದ್ದಾರೆ.

    ಇದನ್ನೂ ಓದಿ: PHOTO | ಫುಟ್​‌ಬಾಲ್ ದಿಗ್ಗಜ ಬೆಕ್‌ಹ್ಯಾಂ ಪುತ್ರನಿಗೆ ನಟಿ ಜತೆ ನಿಶ್ಚಿತಾರ್ಥ

    ಹಾಲಿ ನಿಯಮದ ಪ್ರಕಾರ, ಎಲ್‌ಬಿಡಬ್ಲ್ಯು ವಿರುದ್ಧ ಡಿಆರ್‌ಎಸ್ ಮೊರೆ ಹೋದಾಗ ಚೆಂಡು ಶೇ. 50ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವಿಕೆಟ್‌ಗೆ ಬಡಿಯುವಂತಿದ್ದರೆ ಮಾತ್ರ ಔಟ್ ನೀಡಲಾಗುತ್ತದೆ. ಇಲ್ಲದಿದ್ದರೆ ಮೈದಾನದ ಅಂಪೈರ್ ನೀಡಿರುವ ಮೂಲ ನಿಯಮ ಅಂದರೆ ‘ಅಂಪೈರ್ಸ್​‌ ಕಾಲ್’ ಅನ್ವಯಿಸುತ್ತದೆ. ಆದರೆ ಚೆಂಡು ವಿಕೆಟ್‌ಗೆ ಕೂದಲೆಳೆಯಷ್ಟು ಸ್ಪರ್ಶಿಸುವಂತಿದ್ದರೂ ಬೌಲರ್ ಪರವಾಗಿ ತೀರ್ಪು ನೀಡಬೇಕು ಎಂಬುದು ಸಚಿನ್ ವಾದವಾಗಿದೆ.

    ತಂತ್ರಜ್ಞಾನಗಳ ಮೊರೆ ಹೋದಾಗ ಸರಿ ಅಥವಾ ತಪ್ಪು ಹೇಳಬೇಕಾಗುತ್ತದೆ. ಟೆನಿಸ್‌ನಲ್ಲಿ ತಂತ್ರಜ್ಞಾನವನ್ನು ಬಳಸಿದಾಗ ಚೆಂಡು ಇನ್ ಅಥವಾ ಔಟ್ ಎಂದು ನಿಖರವಾಗಿ ತಿಳಿಸಲಾಗುತ್ತದೆ. ಕ್ರಿಕೆಟ್‌ನಲ್ಲೂ ಇದೇ ಆಗಬೇಕೆಂದು ಸಚಿನ್ ವಿಡಿಯೋದಲ್ಲಿ ತಿಳಿಸಿದ್ದಾರೆ. ಸಚಿನ್ ವಾದಕ್ಕೆ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ಸಹಮತ ವ್ಯಕ್ತಪಡಿಸಿದ್ದು, ಚೆಂಡು ವಿಕೆಟ್‌ಗೆ ಎಷ್ಟು ಪ್ರಮಾಣದಲ್ಲಿ ಬಡಿಯುತ್ತಿದೆ ಎಂಬುದು ಮುಖ್ಯವಲ್ಲ. ಆಟವನ್ನು ಉತ್ತಮ ಪಡಿಸಲು ಕೆಲ ನಿಯಮಗಳ ಬದಲಾವಣೆ ಅಗತ್ಯ. ಇದು ಕೂಡ ಅದರಲ್ಲೊಂದು ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts