More

    ಮೂಲ ಸೌಲಭ್ಯಕ್ಕೆ ಆದ್ಯತೆ; ಲಿಂಗಸುಗೂರು ಸಿಒ ನರಸಪ್ಪ ತಹಸೀಲ್ದಾರ್

    ಲಿಂಗಸುಗೂರು: ಸ್ಥಳೀಯ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಸುನೀತಾ ಕೆಂಭಾವಿ ಅಧ್ಯಕ್ಷತೆಯಲ್ಲಿ 2022-23ನೇ ಸಾಲಿನ ಬಜೆಟ್ ಮಂಡನೆ ಪ್ರಯುಕ್ತ ಸದಸ್ಯರ ಸಲಹೆ, ಸೂಚನೆ ಅಹವಾಲು ಕುರಿತ ಪೂರ್ವಭಾವಿ ಸಭೆ ಗುರುವಾರ ನಡೆಯಿತು.

    ಪುರಸಭೆ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಚರಂಡಿ, ಕುಡಿವ ನೀರು ಪೂರೈಕೆ ಸೇರಿ ಮೂಲ ಸೌಕರ್ಯ ಕಲ್ಪಿಸುವುದು, ರಸ್ತೆ ಬದಿಗಳಲ್ಲಿ ಗಿಡಮರ ಬೆಳೆಸಿ ಪರಿಸರ ಸಮತೋಲನ ಕಾಪಾಡುವುದು, ಎಸ್ಸಿ, ಎಸ್ಟಿ ಪಂಗಡಕ್ಕೆ ಮೂಲ ಸೌಲಭ್ಯ ಕಲ್ಪಿಸುವುದು, ನಿರುದ್ಯೋಗಿಗಳಿಗೆ ಸ್ವ ಉದ್ಯೋಗ ಒದಗಿಸುವುದು, ಉದ್ಯಾನ ವನಗಳ ಅಭಿವೃದ್ಧಿ ಸೇರಿ ಹಲವು ಕಾರ್ಯಗಳಿಗೆ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಸಿಒ ನರಸಪ್ಪ ತಹಸೀಲ್ದಾರ್ ತಿಳಿಸಿದರು.

    ಪುರಸಭೆ ವ್ಯಾಪ್ತಿಯಲ್ಲಿ 7800 ಮನೆಗಳಿದ್ದು, ತೆರಿಗೆ ಸಮರ್ಪಕವಾಗಿ ವಸೂಲಾಗುತ್ತಿಲ್ಲ. ಇದಕ್ಕೆ ಸಿಬ್ಬಂದಿ ನಿರ್ಲಕ್ಷೃವೇ ಕಾರಣವೆಂದು ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಮೋದ ಕುಲಕರ್ಣಿ ಆಸ್ತಿ ತೆರಿಗೆ ವಿವರಣೆ ನೀಡುವ ವೇಳೆ ಆರೋಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಉಳಿದ ಸದಸ್ಯರು, ಪುರಸಭೆ ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಿಯಾಗುತ್ತಿಲ್ಲ. ಬಾಡಿಗೆದಾರರಿಗೆ ನೋಟಿಸ್ ನೀಡಿ ವಸೂಲಿಗೆ ಮುಂದಾಗಬೇಕು. ಇಲ್ಲವಾದರೆ ವಸೂಲಿ ಮಾಡದ ಸಿಬ್ಬಂದಿ ವೇತನ ಕಡಿತಗೊಳಿಸುವಂತೆ ಒತ್ತಾಯಿಸಿದರು.

    ಎಸ್ಸಿ, ಎಸ್ಟಿ ಸೇರಿ ಬಡ ಜನತೆಗೆ ವಸತಿ ಸೌಕರ್ಯ ಕಲ್ಪಿಸಲು ಸೂಕ್ತ ಜಮೀನು ಖರೀದಿಸಿ ನಿವೇಶನ ಗುರುತಿಸಬೇಕು. ಅಕ್ರಮ ನಳಗಳಿಗೆ ಕಡಿವಾಣ ಹಾಕಬೇಕೆಂದು ಸದಸ್ಯ ರುದ್ರಪ್ಪ ಬ್ಯಾಗಿ ಮನವಿ ಮಾಡಿದರು.

    ಸಭೆಯಲ್ಲಿ ಸದಸ್ಯರಾದ ದೊಡ್ಡನಗೌಡ ಹೊಸಮನಿ, ಬಾಬೂರಡ್ಡಿ ಮುನ್ನೂರು, ಸೋಮನಗೌಡ ಪಾಟೀಲ್, ಮುದುಕಪ್ಪ ನಾಯಕ, ಶಿವರಾಯ ದೇಗುಲಮಡಿ, ಮುತ್ತು ಮೇಟಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts