More

    ರಾಮಮಂದಿರ ಸ್ಥಳದ 2000 ಅಡಿ ಆಳದಲ್ಲಿ ಟೈಂ ಕ್ಯಾಪ್ಸೂಲ್​ ಇಡುವುದು ಸುಳ್ಳು…ಯಾರೂ ನಂಬಬೇಡಿ

    ನವದೆಹಲಿ: ಅಯೋಧ್ಯಾ ರಾಮ ಜನ್ಮಭೂಮಿ ವಿವಾದದ ಇತಿಹಾಸ, ಕಾನೂನು ಹೋರಾಟದ ಬಗೆಗಿನ ವಿವರ, ಸುಪ್ರೀಂಕೋರ್ಟ್​ ತೀರ್ಪುಗಳ ಬಗೆಗಿನ ಎಲ್ಲ ವಿವರ, ಸಾಕ್ಷ್ಯ, ದಾಖಲೆಗಳನ್ನೂ  ರಾಮಮಂದಿರ ನಿರ್ಮಾಣವಾಗುವ ಸ್ಥಳದಲ್ಲಿ 2000 ಅಡಿ ಆಳದಲ್ಲಿ ಹುಗಿದಿಡಲಾಗುವುದು. ಇದರಿಂದ ಭವಿಷ್ಯದಲ್ಲಿ ಯಾರಾದರೂ ಕ್ಯಾತೆ ತೆಗೆಯುವುದು ತಪ್ಪುತ್ತದೆ ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯರಾದ ಕಮಲೇಶ್ವರ್‌ ಚೌಪಾಲ್ ಮಾಹಿತಿ ನೀಡಿದ್ದಾರೆ ಎಂಬ ಸುದ್ದಿ ನಿನ್ನೆಯೆಲ್ಲ ಪ್ರಮುಖ ಮಾಧ್ಯಮಗಳಲ್ಲಿ ಹರಿದಾಡಿದೆ.

    ಆದರೆ ಇದು ಸತ್ಯವಲ್ಲ. ಅಂಥ ಟೈಂ ಕ್ಯಾಪ್ಸೂಲ್​ ಇಡುವುದಿಲ್ಲ ಎಂದು ಇಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಸ್ಪಷ್ಟಪಡಿಸಿದೆ.
    ಟ್ರಸ್ಟ್​ನ ಪ್ರಮುಖ ಕಾರ್ಯದರ್ಶಿ ಚಂಪತ್​ ರೈ ಅವರು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ:ಅರ್ಜುನ್​ ಸರ್ಜಾ ಪುತ್ರಿ ಐಶ್ವರ್ಯಾ ಕರೊನಾ ವರದಿ ನೆಗೆಟಿವ್​; ಆಸ್ಪತ್ರೆಯಿಂದ ಡಿಸ್ಚಾರ್ಜ್​

    ರಾಮಮಂದಿರ ನಿರ್ಮಾಣವಾಗುವ ಸ್ಥಳದ ಆಳದಲ್ಲಿ ಅದರ ಇತಿಹಾಸ, ಹೋರಾಟ, ಸುಪ್ರೀಂಕೋರ್ಟ್ ತೀರ್ಪು ಮತ್ತಿತರ ವಿವರಗಳನ್ನು ಒಳಗೊಂಡ ಯಾವುದೇ ಸಾಕ್ಷ್ಯ ರಕ್ಷಣೆ ಮಾಡುವುದಿಲ್ಲ. ಅಂಥ ಸುದ್ದಿಗಳನ್ನು ಯಾವ ಕಾರಣಕ್ಕೂ ನಂಬಬೇಡಿ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ರಾಮಮಂದಿರದ ಭವಿಷ್ಯದ ಸುರಕ್ಷತೆಗೆ ಹೀಗೊಂದು ಪ್ಲ್ಯಾನ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts