More

    ಕಾಯಕಕ್ಕೆ ಗೌರವ ತಂದು ಕೊಟ್ಟವರು

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಕಾಲ ಗತಿಸಿದ ಹಾಗೇ ಮಹಾನುಭಾವರನ್ನು ಮರೆಯದೇ ಅವರು ಸಮಾಜಕ್ಕೆ ನೀಡಿದ ಕೊಡುಗೆಯಿಂದ ನೆನಪಿಸಿಕೊಳ್ಳುತ್ತೇವೆ. ವಿಶ್ವಗುರು ಬಸವಣ್ಣನವರು ಕಾಯಕವೇ ಕೈಲಾಸ ಎನ್ನುವ ಮೂಲಕ ಕಾಯಕಕ್ಕೆ ಅತ್ಯಂತ ಗೌರವ ತಂದುಕೊಟ್ಟವರು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಭದ್ರತಾ ಮತ್ತು ಜಾಗ್ರತ ಅಧಿಕಾರಿ ರಾಜೇಶ ಹುದ್ದಾರ ಹೇಳಿದರು.

    ಸಂಸ್ಥೆಯ ಹುಬ್ಬಳ್ಳಿ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಜಗಜ್ಯೋತಿ ಶ್ರೀ ಬಸವೇಶ್ವರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣನವರ ತತ್ವಗಳನ್ನು ಜಯಂತಿಗಷ್ಟೇ ಸೀಮಿತಗೊಳಿಸದೇ ನಮ್ಮ ಬದುಕಿನಲ್ಲಿ/ಸಂಸ್ಥೆಯಲ್ಲಿ ಅಳವಡಿಸಿಕೊಳ್ಳೋಣ. ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರು ತ್ಯಾಗಮಯ ಜೀವನದ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.

    ಸಂಸ್ಥೆಯ ಮುಖ್ಯ ಉಗ್ರಾಣ ಮತ್ತು ಖರೀದಿ ನಿಯಂತ್ರಕ ಇಸ್ಮಾಯಿಲ್ ಕಂದಗಲ್ ಮಾತನಾಡಿ, ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿಯೇ ಸಮಾಜದಲ್ಲಿ ಸಮಾನತೆ-ಸಹಬಾಳ್ವೆ ತರಲು ಹೋರಾಟ ಮಾಡಿದ್ದರು. ವಚನಗಳ ಮೂಲಕ ಉತ್ತಮ ಸಮಾಜ ಕಟ್ಟಲು ಶ್ರಮಿಸಿದ್ದರು ಎಂದರು.

    ಎಂ.ಡಿ.ಸುಂಕದ, ದಯಾನಂದ ಪಾಟೀಲ, ವಿ.ಎಫ್.ಬಿಜಾಪೂರ, ವರ್ಷಾ ಜಾಧವ, ಸದಾಶಿವ ಶೀಲವಂತರ, ಮಂಜುನಾಥ ಗಿಣಿಮಾವು, ರಾಜು ಮಹೇಂದ್ರಕರ್, ರಾಘವೇಂದ್ರ ಎಂ., ದ್ಯಾಮಣ್ಣ ಭಜಂತ್ರಿ, ಪಿ.ಎಫ್. ಭಜಂತ್ರಿ, ನಾಗರಾಜ ಹಬ್ಬು, ವಿಜಯ ಕಂಬಾರ, ಇತರರು ಉಪಸ್ಥಿತರಿದ್ದರು. ವಿರೂಪಾಕ್ಷ ಕಟ್ಟಿಮನಿ ಕಾರ್ಯಕ್ರಮ ನಿರೂಪಿಸಿದರು.

    ಮಹಾನಗರ ಜಿಲ್ಲಾ ಕಾಂಗ್ರೆಸ್ :

    ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯ ಆವರಣದಲ್ಲಿರುವ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

    ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸದಾನಂದ ಡಂಗನವರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ, ನವೀದ ಮುಲ್ಲಾ, ದೊಡ್ಡರಾಮಪ್ಪ ದೊಡ್ಡಮನಿ, ಬಸವರಾಜ ಬೆಣಕಲ್, ಪ್ರೇಮನಾಥ ಚಿಕ್ಕತುಂಬಳ, ಚಿದಾನಂದ ಶಿಸನಳ್ಳಿ, ಸುನೀಲ ಮರಾಠ, ಮುಷ್ತಾಕ ಮುದಗಲ್, ಸಲಿಂ ಮುಲ್ಲಾ, ಗಣೇಶ ದೊಡ್ಡಮನಿ, ವೀರಣ್ಣ ಹಿರೇಹಾಳ, ಅನಿಲ ಬುನಿಯನ್, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts