More

    ಜನರನ್ನು ಅಂಧಕಾರದಲ್ಲಿಯೇ ಇರಿಸುವ ಕೆಲಸವನ್ನ ಕಾಂಗ್ರೆಸ್ ನಿರಂತರವಾಗಿ ಮಾಡಿದೆ: ಸಿಎಂ ಬೊಮ್ಮಾಯಿ

    ನರೇಗಲ್ (ಅಕ್ಟೋಬರ್ 27): ಜನರನ್ನು ಅಂಧಕಾರದಲ್ಲಿಯೇ ಇರಿಸುವ ಕೆಲಸವನ್ನ ಕಾಂಗ್ರೆಸ್ ನಿರಂತರವಾಗಿ ಮಾಡಿಕೊಂಡು ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

    ಹಾನಗಲ್ ತಾಲ್ಲೂಕಿನ ನರೇಗಲ್ ಗ್ರಾಮದಲ್ಲಿ ಇಂದು ಅವರು ಚುನಾವಾಣ ಭಾಷಣ ಮಾಡುತ್ತಿದ್ದರು.

    ಯಾವುದಾದರೂ ಸಣ್ಣ ಯೋಜನೆಗೆ ದೊಡ್ಡ ಪ್ರಚಾರವನ್ನು ಕೊಡುವುದು ಕಾಂಗ್ರೆಸ್‌ನ ಪ್ರವೃತ್ತಿ. ಕಾಂಗ್ರೆಸ್ ಪಕ್ಷಕ್ಕೆ ಅಭಿವೃದ್ಧಿ ಬೇಕಾಗಿಲ್ಲ. ಜನರು ಬುದ್ಧಿವಂತರಾಗುವುದು ಬೇಕಾಗಿಲ್ಲ. ಜನ ಜಾಗೃತರಾದರೆ ತಮ್ಮ ಹಕ್ಕಿನ ಅರಿವಾಗುತ್ತದೆ ಎಂದು ಜನರನ್ನು ಹಿಂದುಳಿಯುವಂತೆ ಮಾಡಿದ್ದಾರೆ ಎಂದರು.

    ಅನ್ನದಾನ ನಮ್ಮ ಸಂಸ್ಕೃತಿಯ ಒಂದು ಭಾಗ. ಸರ್ಕಾರಗಳು ಜನರಿಗೆ ಪೌಷ್ಠಿಕತೆ ನೀಡಿಲು ಸ್ವತಂತ್ರ ಬಂದ ನಂತರ ಪಡಿತರ ನೀಡುವ ಕೆಲಸವನ್ನು ಎಲ್ಲಾ ಸರ್ಕಾರಗಳು ಮಾಡಿವೆ. ಆದರೆ, ಕಾಂಗ್ರೆಸ್ ಬಂದ ನಂತರವೇ ಪಡಿತರ ವಿತರಣೆ ಆಗುತ್ತಿದೆ. ಅದಕ್ಕೂ ಮೊದಲು ಅಕ್ಕಿ ಸಿಗುತ್ತಿರಲಿಲ್ಲ ಎಂಬಂತೆ ಕಾಂಗ್ರೆಸ್‌ನವರು ಪ್ರಚಾರ ಮಾಡುತ್ತಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವ ಮೊದಲೇ ಕೆ.ಜಿಗೆ ೩ ರೂ.ರಂತೆ ೩೦ ಕೆ.ಜಿ ಅಕ್ಕಿಯನ್ನು ಇವರು ಬಂದು ೧.೦೦ ರೂಪಾಯಿಗೆ ಇಳಿಸಿ ೭ ಕೆ.ಜಿ ಅಕ್ಕಿಯನ್ನು ಒಂದೇ ವರ್ಷ ಕೊಟ್ಟರು. ಚುನಾವಣೆ ಹತ್ರ ಬಂದ ಕೂಡಲೇ ಮತ್ತೆ ೭ ಕೆ.ಜಿ ಕೊಡುತ್ತೇವೆ ಅನ್ನುತ್ತಾರೆ.

    ಕಾಂಗೆಸ್ ಐದು ವರ್ಷ ಆಡಳಿತ ಮಾಡಿ ಒಂದು ಮನೆ ಕೊಡಲಿಲ್ಲ. ಚುನಾವಣೆಗೆ ಮೂರು ತಿಂಗಳಿದ್ದಾಗ ೧೫ ಲಕ್ಷ ಮನೆ ಕೊಟ್ಟೀದ್ದೇನೆ ಎನ್ನುತ್ತಾರೆ. ಕಾಗದದಲ್ಲಿ ಕೊಟ್ಟರೇನು? ಅದಕ್ಕೆ ದುಡ್ಡೇ ಇರಲಿಲ್ಲ. ಮಂತ್ರಕ್ಕಿಂತ ಉಗುಳು ಜಾಸ್ತಿ ಎಂಬಂತೆ ಕಾಂಗ್ರೆಸ್‌ ನೀತಿ. ಪ್ರಚಾರ ಜಾಸ್ತಿ, ಕೆಲಸ ಕಡಿಮೆ. ನಮ್ಮ ಕೆಲಸ ಮಾತನಾಡಬೇಕು ನಾವು ಮಾತನಾಡಬಾರದು ಎನ್ನುವುದು ಭಾಜಪದ ನೀತಿ ಎಂದರು.

    ಜನ ಯಾರೂ ಕೆಲಸ ಮಾಡಿದ್ದಾರೆ ಎಂಬ ಚಿಂತನೆ ಮಾಡಿ, ಮತ ಚಲಾಯಿಸಬೇಕು. ಶಿಗ್ಗಾವಿ ಅಭಿವೃದ್ಧಿಯಾದಂತೆಯೇ ಹಾನಗಲ್ ಕೂಡ ಅಭಿವೃದ್ಧಿಯಾಗಲಿದೆ. ಅಭಿವೃದ್ಧಿಯಲ್ಲೇ ಎಲ್ಲ ವರ್ಗಗಳ ಪಾಲಿರಬೇಕು. ಬಿಜೆಪಿ ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡುವುದಾಗಿ ತಿಳಿಸಿದರು. ಅಲ್ಪಸಂಖ್ಯಾತರ ಸ್ಥಿತಿಗತಿ ಸುಧಾರಣೆಯಾಗಿಲ್ಲ ಅಂದರೆ ಅದಕ್ಕೆ ಕಾಂಗ್ರೆಸ್ ಕಾರಣ. ನಿಮ್ಮನ್ನು ಕತ್ತಲಲ್ಲಲೇ ಇಡಬೇಕೆನ್ನುವುದು ಅವರ ಇರಾದೆ. ಒಮ್ಮೆ ಕಾಂಗೆಸ್‌ಗೆ ಬಿಸಿ ಮುಟ್ಟಿಸಬೇಕು. ಮತದಾರರು ಬದಲಾವಣೆ ಮಾಡಿ ತೋರಿಸಿದಲ್ಲಿ ಎಲ್ಲಾ ವರ್ಗಗಳ ಅಭಿವೃದ್ಧಿ ಪ್ರಾರಂಭವಾಗುತ್ತದೆ ಎಂದರು.

    ಕೋವಿಡ್ ಸಂದರ್ಭದಲ್ಲಿ ಆಹಾರ ಕಿಟ್‌ಗಳನ್ನು, ಬಡವರಿಗಾಗಿ ಎಲ್ಲಾ ವ್ಯವಸ್ಥೆ ಮಾಡಿ, ಕೋವಿಡ ಕೇಂದ್ರಗಳನ್ನು ತೆರೆದು ಜನರ ರಕ್ಷಣೆ ಮಾಡಿದ್ದು, ಬಿ.ಜೆ.ಪಿ. ಕೋವಿಡ್ ಸಂದರ್ಭದಲ್ಲಿ ಆಹಾರ ಕಿಟ್ ಕೊಟ್ಟಿದ್ದನ್ನೇ ಕಾಂಗ್ರೆಸ್ ಚುನಾವಣಾ ಬಂಡವಾಳವನ್ನಾಗಿ ಮಾಡಿಕೊಂಡಿದೆ. ಅದೊಂದು ಮಾನವೀಯ ಕಾರ್ಯ. ಅದನು ಪ್ರಚಾರ ಮಾಡಲು ಬಳಸುತ್ತಾರೆಂದರೆ ಅವರ ಕಣ್ಣು ಚುನಾವಣೆಯ ಮೇಲಿತ್ತು ಎನ್ನುವುದು ಸ್ಪಷ್ಟ.

    ಕೂಡಿಸುವವರಿಗೆ ಮತ ಹಾಕುತ್ತೀರೋ ಒಡೆಯುವವರಿಗೆ ಮತ ಹಾಕುತ್ತೀರೋ ಆಯ್ಕೆ ನಿಮ್ಮದು. ಹಾನಗಲ್ ಕ್ಷೇತ್ರವನ್ನು ಮುನ್ನೆಡೆಸುವವ ಶಕ್ತಿ ಬದ್ಧತೆ ಯಾರಿಗಿದೆಯೋ ಅವರಿಗೆ ಜನರು ಮತ ಹಾಕಬೇಕು. ಅಭಿವೃದ್ಧಿ ಕಾರ್ಯ ಮುಂದುವರೆಸಬೇಕೆನ್ನುವುದು ಭಾಜಪದ ಇಚ್ಛೆ ಎಂದರು.

    ಅಲ್ಪಸಂಖ್ಯಾತರಿಗೂ ಕೂಡ ಕಾಂಗ್ರೆಸ್ ಅನ್ಯಾಯ ಮಾಡಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    ಹೆಣ್ಣು ಮಕ್ಕಳನ್ನು ಹೆತ್ತು ಮದುವೆಯ ಬಗ್ಗೆ ಚಿಂತಿಸುವ ಪಾಲಕರಿಗೆ ಸಮಂತಾ ಕೊಟ್ಟ ಸಲಹೆ ಹೀಗಿದೆ…

    21ರ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಬಾಲಕ: ಪೊಲೀಸ್​ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts